ಜಿಲ್ಲಾ ಸುದ್ದಿಗಳು ಪ್ರಮುಖ

ಶಿಕ್ಷಣ ನಮ್ಮ ಅಂತಃಶಕ್ತಿಯನ್ನು ಮುನ್ನಡೆಸುತ್ತದೆ: ಸ್ವಾಮಿ ಮಹಾಮೇಧಾನಂದಜಿ

ಮಂಗಳೂರು ವಿವಿಯಲ್ಲಿ ರಾಷ್ಟ್ರೀಯ ಯುವ ದಿನಾಚರಣೆ, ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ ಆರಂಭ

ಮಂಗಳೂರು: ಜೀವನ ಮತ್ತು ಶಿಕ್ಷಣದ ಒಳನೋಟಗಳನ್ನು ಅರ್ಥಮಾಡಿಕೊಂಡರೆ ಮಾತ್ರ ಅವುಗಳ ಸದ್ಭಳಕೆ ಸಾಧ್ಯ. ನಾವು ವಿವೇಕಿಗಳಾದಾಗ ಮಾತ್ರ ರಾಕ್ಷಸತ್ವದಿಂದ, ಮನುಷ್ಯತ್ವ, ಬಳಿಕ ದೈವತ್ವದೆಡೆಗೆ ಸಾಗಲು ಸಾಧ್ಯ ಎಂದು ಚೆನ್ನೈನ ರಾಮಕೃಷ್ಣ ಮಠದ ‘ವೇದಾಂತ ಕೇಸರಿ’ ಮಾಸಪತ್ರಿಕೆಯ ಸಂಪಾದಕ ಸ್ವಾಮಿ ಮಹಾಮೇಧಾನಂದಜಿ ಹೇಳಿದರು.

ಸ್ವಾಮಿ ವಿವೇಕಾನಂದರ 159ನೇ ಜಯಂತಿಯ ಸಂದರ್ಭದಲ್ಲಿ, ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ರಾಮಕೃಷ್ಣ ಮಠ ಜಂಟಿಯಾಗಿ ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಣ ನಮ್ಮ ಅಂತಃಶಕ್ತಿಯನ್ನು ಸರಿಯಾದ ದಿಕ್ಕಿಗೆ ಮುನ್ನಡೆಸುತ್ತದೆ, ಅಚಲ ನಿರ್ಧಾರಗಳನ್ನು ಸಾಧ್ಯವಾಗಿಸುತ್ತದೆ ಮತ್ತು ಅನುಭವದಿಂದ ಕಲಿಯುವಂತೆ ಮಾಡುತ್ತದೆ,” ಎಂದರು.

ಮಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್, ಸ್ವಾಮಿ ವಿವೇಕಾನಂದರು ಆತ್ಮ ವಿಶ್ವಾಸ ಮತ್ತು ಯುವಶಕ್ತಿಯ ಪ್ರತೀಕ ಎಂದರು.

ಮಂಗಳೂರು ಶಾಸಕ ಯು. ಟಿ ಖಾದರ್, ಇಂದಿನ ಅಗತ್ಯವಾದ ವಿವೇಕಾನಂದ ಅಧ್ಯಯನ ಕೇಂದ್ರ ಆರಂಭಿಸುವ ಮೂಲಕ ಮಂಗಳೂರು ವಿಶ್ವವಿದ್ಯಾನಿಲಯ ಮಾದರಿಯಾಗಿದೆ, ಎಂದರು. ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಶಿಕ್ಷಣ ಆತ್ಮಸಾಕ್ಷಾತ್ಕಾರಕ್ಕೆ ಅಗತ್ಯ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷೀಯ ಭಾಷಣದಲ್ಲಿ, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ, ಪ್ರತಿ ವ್ಯಕ್ತಿಯ ಗುರಿಯನ್ನು ಆತನೇ ನಿರ್ಧರಿಸುತ್ತಾನೆ. ಯಶಸ್ಸಿಗೆ ನಮಗೆ ಪ್ರಾಪಂಚಿಕ ಜ್ಞಾನದ ಜೊತೆಗೆ, ತನ್ನ ಬಗ್ಗೆಯೂ ತಿಳಿದಿರಬೇಕು. ಶಿಕ್ಷಣ ವ್ಯಕ್ತಿಯ ಏಳಿಗೆಯೊಂದಿಗೆ ದೇಶದ ಅಭಿವೃದ್ಧಿಗೆ ನೆರವಾಗಬೇಕು, ಎಂದು ಅಭಿಪ್ರಾಯಪಟ್ಟರು. ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ವಿವೇಕಾನಂದ ಪಣಿಯಾಲ, ವಿವೇಕಾನಂದರ ಬರಹಗಳನ್ನು ಓದಿಕೊಂಡರೆ ಮಾತ್ರ ನಮಗೆ ಪೂರ್ವಾಗ್ರಹಗಳಿಂದ ಹೊರಬರಲು ಸಾಧ್ಯ, ಎಂದರು.

ಕುಲಸಚಿವ ಕೆ. ರಾಜು ಮೊಗವೀರ (ಕೆಎಎಸ್), ಅಧ್ಯಯನ ಕೇಂದ್ರದ ಸ್ಥಾಪನಾ ಸಮಿತಿಯ ಸದಸ್ಯರಾದ ಕೆ. ರಮೇಶ್, ಪ್ರೊ. ಕೆ. ಕೃಷ್ಣ ಶರ್ಮ, ಪ್ರೊ. ಸೋಮಣ್ಣ ಹಾಗೂ ಡಾ. ಚಂದ್ರ ಹೆಗಡೆ, ಸಿಂಡಿಕೇಟ್ ಸದಸ್ಯರು ಉಪಸ್ಥಿತರಿದ್ದರು. ಕುಲಸಚಿವ (ಪರೀಕ್ಷಾಂಗ) ಪ್ರೊ. ಪಿ ಎಲ್ ಧರ್ಮ ಅತಿಥಗಳನ್ನು ಸ್ವಾಗತಿಸಿದರು. ರಾಮಕೃಷ್ಣ ಮಠದ ರಂಜನ್ ಬೆಳ್ಳರ್ಪಾಡಿ ಧನ್ಯವಾದ ಸಮರ್ಪಿಸಿದರು. ಡಾ. ಪ್ರೀತಿ ಕೀರ್ತಿ ಡಿʼಸೋಜ ಮತ್ತು ಅಕ್ಷಯ್ ಹೆಗ್ಡೆ ನಿರೂಪಿಸಿದರು.

ಅಧ್ಯಯನ ಕೇಂದ್ರದ ಶುಭಾರಂಭ
ಮಂಗಳೂರು ವಿಶ್ವವಿದ್ಯಾನಿಲಯದ ಯಕ್ಷಗಾನ ಅಧ್ಯಯನ ಕೇಂದ್ರದಲ್ಲಿ ʼಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಉದ್ಘಾಟನೆಯನ್ನು ಮಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಅವರು ಸುಮಾರು ರೂ. 30,000 ಮೌಲ್ಯದ 400 ಪುಸ್ತಕಗಳನ್ನು ಕೇಂದ್ರಕ್ಕೆ ಹಸ್ತಾಂತರಿಸಿದರು. ಕುಲಪತಿಗಳು, ಕುಲಸಚಿವರು ಸೇರಿದಂತೆ ಹಲವಾರು ಗಣ್ಯರು ಕ್ಷಣಕ್ಕೆ ಸಾಕ್ಷಿಯಾದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ಇದೀಗ ಸಿಗ್ನಲ್ Appನಲ್ಲಿ… ಗ್ರೂಪ್‌ಗೆ ಸೇರಲು ಮೊದಲು ಸಿಗ್ನಲ್ ಆಪ್ ಡೌನ್‌ಲೋಡ್ ಮಾಡಿಕೊಂಡು ಈ ಲಿಂಕ್ ಕ್ಲಿಕ್ ಮಾಡಿ.

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

Morning ಖಾರಾ ಬಾತ್: ಸ್ನೇಹದ ಬಂಧ- ಮೈತ್ರಿ ಧರ್ಮ

Upayuktha

ಪಿಯುಸಿ ವಿದ್ಯಾರ್ಥಿನಿಗೆ ಅಂಕದಲ್ಲಿ ಎಡವಟ್ಟು

Harshitha Harish

ಕೊರೊನಾ ತಾಜಾ ಅಪ್‌ಡೇಟ್ಸ್‌: ದ.ಕ. 24, ಉಡುಪಿ 29 ಪಾಸಿಟಿವ್ ಪ್ರಕರಣ

Upayuktha