ರಾಜ್ಯ

ಶಿಕ್ಷಣ ಸಚಿವ ಸುರೇಶ್ ಕುಮಾರ್ ಆಸ್ಪತ್ರೆಗೆ ದಾಖಲು

ಬೆಂಗಳೂರು: ಕೊರೊನಾ ಸೋಂಕು ಧೃಡಪಟ್ಟ ನಂತರ ಹೋಂ ಐಸೋಲೇಷನ್ ನಲ್ಲಿದ್ದ ಸಚಿವ ಸುರೇಶ್ ಕುಮಾರ್ ಇಂದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಚಿವರು ತಿಳಿಸಿದ್ದಾರೆ. ಆತಂಕ ಪಡುವ ಅಗತ್ಯವಿಲ್ಲ ಎಂದು ಕಾರ್ಯಕರ್ತರಿಗೆ ತಿಳಿಸಿದ್ದಾರೆ.

ಕಳೆದ ಸೋಮವಾರದಿಂದ ನಾನು ಕೋವಿಡ್ 19 ವೈರಸ್ ಪೀಡಿತನಾಗಿ ಮನೆಯಲ್ಲಿಯೇ ಹೋಂ ಐಸೋಲೇಷನ್ ನಲ್ಲಿದ್ದೆ. ವೈದ್ಯರ ಸಲಹೆ ಮೇರೆಗೆ ನಾನು ಈಗ ಬೆಂಗಳೂರಿನಲ್ಲಿಯೇ ಗೆಳೆಯರೊಬ್ಬರ ಚಿಕ್ಕ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದೇನೆ. ವೈದ್ಯರ ನಿಗಾದಲ್ಲಿದ್ದೇನೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಎಲ್ಲಾ ರೀತಿಯಿಂದಲೂ ನನ್ನ ಆರೋಗ್ಯ ಸುಧಾರಿಸುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

ಹಾಗೆಯೇ ಹೋಂ ಐಸೋಲೇಷನ್ ನಲ್ಲಿದ್ದರೂ ಸಹ ಸಚಿವರು ಆನ್‍ಲೈನ್ ಮೂಲಕ ಸರ್ಕಾರದ ಕೆಲಸಗಳನ್ನು ಮುಂದುವರಿಸುತ್ತಿದ್ದು, ಫೇಸ್‍ಬುಕ್ ಲೈವ್ ಮೂಲಕ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಫೇಸ್‍ಬುಕ್ ಲೈವ್ ಮೂಲಕ ಸುದ್ದಿಗೋಷ್ಠಿಯಲ್ಲಿ ಸಚಿವರು ಮಾತನಾಡಿದರು.

Related posts

ಕೊರೊನಾ ಅಪ್‌ಡೇಟ್: ದ.ಕ.ದಲ್ಲಿ 10 ಮಂದಿ ವೈದ್ಯರ ಸಹಿತ 44 ಮಂದಿಗೆ ಸೋಂಕು ದೃಢ, ಉಡುಪಿ- 9, ಕರ್ನಾಟಕ-947

Upayuktha

ಹೃದ್ರೋಗಕ್ಕೆ ಗುಣಮಟ್ಟದ ಚಿಕಿತ್ಸೆಗೆ ನೀಲಿನಕ್ಷೆ: ಸಚಿವ ಡಾ.ಕೆ. ಸುಧಾಕರ್

Upayuktha

ರಾಜ್ಯದ ಅತಿವೃಷ್ಟಿಯಿಂದ ಬೆಳೆಹಾನಿಗೊಳಗಾದ ರೈತರ ಖಾತೆಗೆ ನೆರವಿನ ಮೊತ್ತ- ಸಿಎಂ ಯಡಿಯೂರಪ್ಪ

Harshitha Harish