ದೇಶ-ವಿದೇಶ ಪ್ರಮುಖ ರಾಜ್ಯ

ರಾಜ್ಯದ ನಾಲ್ಕು ಕ್ಷೇತ್ರಕ್ಕೆ ಉಪಚುನಾವಣೆ ಸೇರಿದಂತೆ ಪಂಚರಾಜ್ಯ ಮತದಾನಕ್ಕೆ ಡೇಟ್ ಫಿಕ್ಸ್

ಹೊಸದಿಲ್ಲಿ: ಕರ್ನಾಟಕದ ನಾಲ್ಕು ಕ್ಷೇತ್ರಗಳಲ್ಲಿ ಉಪಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಒಂದು ಲೋಕಸಭಾ ಕ್ಷೇತ್ರ ಹಾಗೂ 3 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ‌

ಬಸವಕಲ್ಯಾಣ, ಮಸ್ಕಿ, ಸಿಂದಗಿ ವಿಧಾನಸಭೆ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆಗೆ ಮುಹೂರ್ತ ಫಿಕ್ಸ್‌ ಆಗಿದೆ.

ಕೇರಳ, ತಮಿಳುನಾಡು, ಅಸ್ಸಾಂ, ಪಶ್ಚಿಮ ಬಂಗಾಳ, ಪುದುಚೇರಿ ವಿಧಾನಸಭಾ ಚುನಾವಣೆ ರಂದು ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಸುನಿಲ್‌ ಅರೋರಾ ಘೋಷಿಸಿದರು.
ಹೊಸದಿಲ್ಲಿಯ ವಿಜ್ಞಾನಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1 ಕೇಂದ್ರಾಡಳಿತ ಹಾಗೂ 4 ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.

ಅಸ್ಸಾಂನಲ್ಲಿ ಮಾ.27, ಏ.1 ಮತ್ತು 6ರಂದು ಮೂರು ಹಂತಗಳ ಮತದಾನ, ಕೇರಳ-ತಮಿಳುನಾಡು-ಪುದುಚೇರಿಯಲ್ಲಿ ಏಪ್ರಿಲ್‌ 6ರಂದು ಒಂದೇ ಹಂತದ ಮತದಾನ ನಡೆಯಲಿದೆ. ಪಶ್ಚಿಮ ಬಂಗಾಳದಲ್ಲಿ ಮಾ.27, ಏ.1, 6, 10, 17, 22, 26, 29ರಂದು ಒಟ್ಟು 8 ಹಂತಗಳಲ್ಲಿ ಮತದಾನ ನಡೆಯಲಿದೆ.

ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿ ಸೇರಿದಂತೆ ಒಟ್ಟು 824 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಹಾಗೆಯೇ 2.7 ಲಕ್ಷ ಮತಗಟ್ಟೆಗಳನ್ನು ಹೊಂದಿರಲಿದೆ.

Related posts

ಕೊರೊನಾ ನಿಯಂತ್ರಣ ಕ್ರಮ: ಉನ್ನತ ಮಟ್ಟದ ಸಚಿವರ ಸಭೆ

Upayuktha

ಪೆಟ್ರೋಲ್ ಡೀಸೇಲ್ ದರ ಏರಿಕೆ ಖಂಡಿಸಿ ಓಲಾ, ಉಬರ್ ಚಾಲಕರ ಪ್ರತಿಭಟನೆ

Sushmitha Jain

ದ.ಕ., ಉಡುಪಿ, ಕಾಸರಗೋಡಿನಲ್ಲಿ ಕೊರೊನಾ ಪಾಸಿಟಿವ್ ಇಲ್ಲ

Upayuktha