ಪ್ರಮುಖ ರಾಜ್ಯ

ಗೋಹತ್ಯೆ ತಡೆಗೆ ಪ್ರಬಲ ಕಾನೂನು: ಈ ಅಧಿವೇಶನದಲ್ಲೇ ಅಂಗೀಕಾರಕ್ಕೆ ಒತ್ತಾಯಿಸಿ ಸರಕಾರಕ್ಕೆ ಪೇಜಾವರ ಶ್ರೀಪಾದರ ಪತ್ರ

ಉಡುಪಿ: ರಾಜ್ಯದಲ್ಲಿ ಗೋಹತ್ಯೆ ನಿರಂತರವಾಗಿ ನಡೆಯುತ್ತಿದೆ. ಗೋವುಗಳ ಕಳ್ಳತನ, ಹಿಂಸಾತ್ಮಕ ಸಾಗಾಟಗಳು ನಡೆಯುತ್ತಿವೆ. ಇವನ್ನೆಲ್ಲ ಪ್ರಬಲ ಕಾನೂನಿನ ಮೂಲಕ ತಡೆಗಟ್ಟಬೇಕಾಗಿದೆ ಎಂದು ಉಡುಪಿ ಪೇಜಾವರ ಮಠದ ಯತಿಗಳಾದ ಪರಮಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

ರಾಜ್ಯ ವಿಧಾನಸಭೆಯ ಪ್ರಸಕ್ತ ಅಧಿವೇಶನದಲ್ಲೇ ಈ ಸಂಬಂಧ ಪ್ರಬಲವಾದ ವಿಧೇಯಕವನ್ನು ಮಂಡಿಸಿ ಕಾನೂನು ಅಂಗೀಕರಿಸಬೇಕು. ಶೀಘ್ರವೇ ಅದನ್ನು ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಶ್ರೀಪಾದರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಗೋವಂಶದ ಹತ್ಯೆ ತಡೆಯುವುದಕ್ಕಾಗಿ, ಗೋ ಸಂತತಿ ಉಳಿಸುವುದಕ್ಕಾಗಿ ಸರಕಾರ ಪ್ರಬಲವಾದ ಕಾನೂನನ್ನು ಈ ಅಧಿವೇಶನದಲ್ಲೇ ಮಂಡಿಸಿ ಜಾರಿಗೊಳಿಸಬೇಕು. ಆ ಮೂಲಕ ನಾಡಿನ ಸಮಸ್ತ ಗೋಪ್ರೇಮಿಗಳ ಆಗ್ರಹವನ್ನು ಮನ್ನಿಸಬೇಕೆಂದು ನಾವು ಪ್ರಬಲವಾಗಿ ಪ್ರತಿಪಾದಿಸುತ್ತೇವೆ ಎಂದು ಶ್ರೀಗಳು ಪತ್ರದಲ್ಲಿ ತಿಳಿಸಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಬಾಲಕಿಯರಿಗೆ ಗುರುಕುಲ: ಪ್ರವೇಶ ಅವಧಿ ವಿಸ್ತರಣೆ

Upayuktha

ಜ.23-24: ಫಾದರ್‌ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನಲ್ಲಿ ಪ್ರೇರಣ 2020

Upayuktha

ಫಾರೂಕ್ ಅಬ್ದುಲ್ಲಾ ಗೃಹಬಂಧನ 3 ತಿಂಗಳು ವಿಸ್ತರಣೆ

Upayuktha

Leave a Comment

error: Copying Content is Prohibited !!