ನಗರ ಸ್ಥಳೀಯ

ಎಂಜಿನಿಯರಿಂಗ್‌ನಲ್ಲಿ 6 ಚಿನ್ನದ ಪದಕಗಳೊಂದಿಗೆ ಪ್ರಥಮ ರ‍್ಯಾಂಕ್‌ ಪಡೆದ ಸಿಂಧೂರ ಸರಸ್ವತಿ

ಮಂಗಳೂರು: ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಬಿ.ಇ ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಶನ್‌ ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಿಂಧೂರ ಸರಸ್ವತಿ ಆರು ಚಿನ್ನದ ಪದಕಗಳೊಂದಿಗೆ ಪ್ರಥಮ ರ‍್ಯಾಂಕ್‌ ಗಳಿಸಿದ್ದಾರೆ.

ಮುರಳೀಧರ ಭಟ್ ಬಂಗಾರಡ್ಕ ಮತ್ತು ಶೋಭಾ ಎಂ.ಬಿ ದಂಪತಿಗಳ ಪುತ್ರಿಯಾಗಿರುವ ಈಕೆ, 2012ರಲ್ಲಿ ಅಮೆರಿಕದ ಪಿಟ್ಸ್‌ಬರ್ಗ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಮೇಳ (ಐಎಸ್‌ಇಎಫ್‌) ದಲ್ಲಿ ಭಾರತವನ್ನು ಪ್ರತಿನಿಧಿಸಿ ವಿಶೇಷ ಪ್ರಶಸ್ತಿ ಗೆದ್ದಿದ್ದರು.

ಸಿಂಧೂರ ಸರಸ್ವತಿ ಅವರ ಶೈಕ್ಷಣಿಕ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಟ್ವೀಟ್ ಮಾಡಿದ್ದಾರೆ.

2012ರಲ್ಲಿ ರಾಷ್ಟ್ರೀಯ ವಿಜ್ಞಾನ ಮೇಳ ಐಆರ್‌ಐಎಸ್‌ನಲ್ಲಿ ಭಾಗವಹಿಸಿ ವಿಶೇಷ ಚಿನ್ನದ ಪದಕ ಗೆದ್ದಿದ್ದರು. ಅಲ್ಲದೆ ಭಾರತ ಸರಕಾರದ ವಿಶೇಷ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ರಾಷ್ಟ್ರೀಯ ಮಕ್ಕಳ ವಿಜ್ಞಾನ ಮೇಳದಲ್ಲಿ ಪ್ರಬಂಧ ಮಂಡಿಸಿ ಸೈ ಎನಿಸಿದ್ದರು.

2018ರ ಎಲೆಕ್ಟ್ರಿಕ್‌ ಸೋಲಾರ್ ವೆಹಿಕಲ್‌ ಚಾಂಪಿಯನ್‌ಶಿಪ್‌ ನಲ್ಲಿ ಭಾಗವಹಿಸಿ ಅತ್ಯುತ್ತಮ ಸಂಶೋಧನಾ ಪ್ರಬಂಧ ಪ್ರಶಸ್ತಿ ಹಾಗೂ ಪೀಪಲ್ಸ್‌ ಚಾಯ್ಸ್‌ ಅವಾರ್ಡ್‌ ಪಡೆದಿದ್ದರು.

ಪ್ರಸ್ತುತ ಸಿಂಧೂರ ಸರಸ್ವತಿ ಅವರು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಏಪ್ರಿಲ್ 26: ಮಂಗಳೂರಿನಲ್ಲಿ ಕನ್ನಡ ಕವಿ ಕಾವ್ಯ ಕಲರವ; ರಾಜ್ಯಮಟ್ಟದ ಆನ್‌ಲೈನ್ ವೀಡಿಯೋ ಕವಿ ಸಮ್ಮೇಳನ

Upayuktha

ಅಂಬಿಕಾ ಮಹಾವಿದ್ಯಾಲಯದಲ್ಲಿ ‘ಆ್ಯಮ್ ಜರ್ನಲಿಸಂ’ ಫೇಸ್‍ಬುಕ್ ಪುಟ ಬಿಡುಗಡೆ

Upayuktha

ನೇತ್ರಾವತಿ ತೀರದಲ್ಲಿ ‘ನಾಗರಾಜ’ನ ಕಣ್ಗಾವಲು: ಕಸ ಎಸೆಯುವ ‘ವಿದ್ಯಾವಂತ’ರಿಗೆ ಸ್ವಚ್ಛತೆಯ ಪಾಠ

Upayuktha