ಕಲೆ-ಸಾಹಿತ್ಯ ನಗರ ಸ್ಥಳೀಯ

ನಿರತ ಸಾಹಿತ್ಯ ಪ್ರಶಸ್ತಿಗೆ ಸಣ್ಣ ಕಥಾಸಂಕಲನ ಕೃತಿ ಆಹ್ವಾನ

ಮಂಗಳೂರು: ನಿರತ ಸಾಹಿತ್ಯ ಸಂಪದ ಕಡೆಗೋಳಿ ತನ್ನ 22 ನೇ ವರುಷದ ಹುಟ್ಟುಹಬ್ಬದ ಪ್ರಯುಕ್ತ ಹಮ್ಮಿಕೊಂಡಿರುವ “ನಿರತ ಪ್ರಶಸ್ತಿ 2019” ಗಾಗಿ ಸಣ್ಣ ಕಥೆಗಳ ಕೃತಿಗಳ ಆಹ್ವಾನಿಸಿದೆ.

ಸ್ಪರ್ಧೆಗೆ ಜನವರಿ 2005 ರಿಂದ ಡಿಸೆಂಬರ್ 2019 ರ ವರೆಗಿನ ಪ್ರಕಟಿತ ಕೃತಿಗಳನ್ನು ಕಳುಹಿಸಬಹುದು, ಒಬ್ಬರು ಎಷ್ಟು ಕೃತಿಗಳನ್ನಾದರೂ ಕಳುಹಿಸಬಹುದು, ಪ್ರತೀ ಕೃತಿಗಳ 3 ಪ್ರತಿಗಳನ್ನು ಕಡ್ಡಾಯವಾಗಿ ಕಳುಹಿಸತಕ್ಕದ್ದು, ಯಾವುದೇ ಕಾರಣಕ್ಕೂ ಪ್ರತಿಗಳನ್ನು ಹಿಂದಿರುಗಿಸಲಾಗುವುದಿಲ್ಲ,

ಕೃತಿಗಳನ್ನು ಕಳುಹಿಸುವವರು ಪ್ರತ್ಯೇಕ ಹಾಳೆಯಲ್ಲಿ ತಮ್ಮ ಬಗೆಗಿನ ಮಾಹಿತಿಯನ್ನು ಲಗ್ತೀಕರಿಸಬೇಕು, ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ, ಕೃತಿಗಳು ನಮಗೆ ತಲುಪಲು ಕೊನೆಯ ದಿನಾಂಕ 30.12.2019.

ನಿರತ ಸಾಹಿತ್ಯ ಪ್ರಶಸ್ತಿಯನ್ನು ಜನವರಿಯಲ್ಲಿ ನಡೆಯುವ ಸಂಪದದ ವಾರ್ಷಿಕ ಸಮಾರಂಭದಲ್ಲಿ ನೀಡಲಾಗುವುದು. ಕೃತಿಗಳು ತಲುಪಬೇಕಾದ ವಿಳಾಸ: ಅಬ್ದುಲ್ ಮಜೀದ್ ಎಸ್, ಸಂಚಾಲಕರು ನಿರತ ಸಾಹಿತ್ಯ ಸಂಪದ, ಉಪನ್ಯಾಸಕರು, ಮೆಲ್ಕಾರ್ ಮಹಿಳಾ ಪದವಿ ಪೂರ್ವ ಕಾಲೇಜು, ಮಾರ್ಣಬೈಲು, ಸಜೀಪ ಮುನ್ನೂರು. ಬಂಟ್ವಾಳ ದ.ಕ 574231. ಹೆಚ್ಚಿನ ಮಾಹಿತಿಗಿಗಾಗಿ 8217339837 / 9480878094 ಕರೆ ಮಾಡಬಹುದು.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಉಜಿರೆ: ರಾಷ್ಟ್ರೀಯ ಮಟ್ಟದ ಬೋಧನಾ ತರಬೇತಿ ಸಪ್ತಾಹ

Upayuktha

ಕೊರೊನಾ ನಿರ್ಬಂಧ: ಸಾರ್ವಜನಿಕ ವಾಹನ ಸಂಚಾರ ತಗ್ಗಿಸಲು ಸಂಸದರ ಸೂಚನೆ

Upayuktha

ಅಪರಿಚಿತ ವೃದ್ಧ ಸಾವು: ವಾರಸುದಾರರಿದ್ದರೆ ಉಡುಪಿ ಜಿಲ್ಲಾಸ್ಪತ್ರೆ ಸಂಪರ್ಕಿಸಿ

Upayuktha