ಗ್ರಾಮಾಂತರ ಸ್ಥಳೀಯ

ಪರಿಸರ ರಕ್ಷಣೆಯಿಂದ ಸಾಂಕ್ರಾಮಿಕ ರೋಗ ನಿಯಂತ್ರಣ: ಡಾ|| ಚೂಂತಾರು

ಮೂಡುಬಿದಿರೆ: ಪರಿಸರ ನಾಶ ಮಾಡಿ ಕಾಂಕ್ರೀಟ್ ಕಾಡನ್ನು ಬೆಳೆಸುವುದರಿಂದ ಕಾಡುಗಳಲ್ಲಿ ಹಾಯಾಗಿದ್ದ ವೈರಾಣುಗಳು ಮತ್ತು ಇತರ ಜೀವಿಗಳು ನಾಡಿಗೆ ಸೇರಿಕೊಂಡು ಮಾರಕ ರೋಗಗಳಿಗೆ ಕಾರಣವಾಗುತ್ತದೆ. ಪರಿಸರ ರಕ್ಷಿಸಿ, ಗಿಡ, ಮರ ನೆಟ್ಟು ಪೋಷಿಸಿದಲ್ಲಿ ಮಾತ್ರ ಸಾಂಕ್ರಾಮಿಕ ರೋಗ ಬರದಂತೆ ತಡೆಗಟ್ಟಬಹುದು ಎಂದು ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲಿ ಮೋಹನ ಚೂಂತಾರು ಅವರು ಅಭಿಪ್ರಾಯಪಟ್ಟರು.

ಭಾನುವಾರ (ಜೂ.28) ಮೂಡಬಿದಿರೆಯ ಕಡಲಕೆರೆ ಸಮೀಪದ ಸೈಂಟ್ ಇಗ್ನೀಷಿಯಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕಡಲಕೆರೆ ಇಲ್ಲಿ ಪ್ರೇರಣಾ ಟ್ರಸ್ಟ್, ಮೂಡಬಿದಿರೆ ಗೃಹರಕ್ಷಕ ದಳ ಮತ್ತು ಶಾಲಾಭಿವೃದ್ಧಿ ಸಮಿತಿ ಜಂಟಿಯಾಗಿ ಹಮ್ಮಿಕೊಂಡಿದ್ದ ವನಮಹೋತ್ಸವ ಮತ್ತು ಗಿಡ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಡಾ|| ಚೂಂತಾರು ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೇರಣಾ ಟ್ರಸ್ಟ್ ಇದರ ಅಧ್ಯಕ್ಷರಾದ ಪ್ರೊ.ಎಂ ವಾಸುದೇವ ಭಟ್ ವಹಿಸಿದ್ದರು. ಪ್ರಾಸ್ತಾವಿಕವಾಗಿ ವನಮಹೋತ್ಸವದ ಪ್ರಾಮುಖ್ಯತೆ ಬಗ್ಗೆ ಶಾಲಾ ಮುಖ್ಯ ಶಿಕ್ಷಕಿ ಶ್ರೀ ಮಾತಾಜಿ ವತ್ಸಲಾ ಅವರು ತನಾಡಿದರು. ಘಟಕಾಧಿಕಾರಿ ಶ್ರೀ ಪಾಂಡಿರಾಜ್ ವಂದನಾರ್ಪಣೆ ಮಾಡಿದರು. ಗೃಹರಕ್ಷಕಿ ವಿನುತಾ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಸುಮಾರು 50 ಮಂದಿ ಗೃಹರಕ್ಷಕರಿಗೆ ಸಸಿ ವಿತರಣೆ ಮಾಡಲಾಯಿತು ಮತ್ತು ಆಯುಷ್ ಇಲಾಖೆಯಿಂದ ನೀಡಿದ ಅರ್ಸೆನಿಕಮ್ ಅಲ್ಬಮ್-30 ಎಂಬ ರೋಗ ನಿರೋಧಕ ಶಕ್ತಿ ವೃದ್ಧಿಸುವ ಔಷಧಿಯನ್ನು ಎಲ್ಲಾ ಗೃಹರಕ್ಷಕರಿಗೆ ಉಚಿತವಾಗಿ ಹಂಚಲಾಯಿತು.

ಪ್ರೇರಣಾ ಟ್ರಸ್ಟ್‍ನ ಉಪಾಧ್ಯಕ್ಷರಾದ ಚಂದ್ರಹಾಸ ಮತ್ತು ಟ್ರಸ್ಟ್‍ನ ಕಾರ್ಯದರ್ಶಿಯಾದ ಕೇಶವ ಹೆಗ್ಡೆ ಮತ್ತು ಸದಸ್ಯರುಗಳಾದ ರಾಜೇಶ ಬಂಗೇರಾ ಮುಂತಾದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸುಮಾರು 20 ಗಿಡಗಳನ್ನು ಶಾಲೆಯ ಆವರಣದಲ್ಲಿ ನೆಡಲಾಯಿತು. ಪ್ರತಿ ಗೃಹರಕ್ಷಕರಿಗೆ ಒಂದರಂತೆ ಎಲ್ಲಾ 50 ಗೃಹರಕ್ಷಕರಿಗೆ ಗಿಡ ವಿತರಣೆ ಮಾಡಲಾಯಿತು.

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಉಜಿರೆ: ಎಸ್‌ಡಿಎಂ ಕಾಲೇಜಿನಲ್ಲಿ ಸಾಧಕರ ದಿನಾಚರಣೆ

Upayuktha

ವಿವೇಕಾನಂದ ಕಾಲೇಜಿನಲ್ಲಿ ‘ಜೀವನ ಕೌಶಲ್ಯಗಳು’ ಸರ್ಟಿಫಿಕೇಟ್ ಕೋರ್ಸ್ ಆರಂಭ

Upayuktha

ದ.ಕ ಒಂದು, ಉಡುಪಿಯಲ್ಲಿ 6 ಹೊಸ ಪ್ರಕರಣ, ರಾಜ್ಯದಲ್ಲಿ 63 ಹೊಸ ಕೊರೊನಾ ಕೇಸ್

Upayuktha