ದೇಶ-ವಿದೇಶ ಪ್ರಮುಖ

173 ಕರಾವಳಿ ಮತ್ತು ಗಡಿ ಜಿಲ್ಲೆಗಳಲ್ಲಿ ಎನ್‌ಸಿಸಿ ವಿಸ್ತರಣೆ: ಪ್ರಧಾನಿ ಮೋದಿ ಪ್ರಕಟ

ನವದೆಹಲಿ: ಗಡಿ ಹಾಗೂ ಕರಾವಳಿಯ 173 ಜಿಲ್ಲೆಗಳಲ್ಲಿ ನ್ಯಾಶನಲ್ ಕ್ಯಾಡೆಟ್ ಕಾರ್ಪ್ಸ್ (ಎನ್‌ಸಿಸಿ) ವಿಸ್ತರಣೆ ಮಾಡಲಾಗುವುದು. ಈ ಕಾರ್ಯಯೋಜನೆ ಅಡಿಯಲ್ಲಿ ಸುಮಾರು 1 ಲಕ್ಷ ಹೊಸ ಕ್ಯಾಡೆಟ್‌ಗಳು ವಿಶೇಷ ತರಬೇತಿ ಪಡೆಯಲಿದ್ದಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಕಟಿಸಿದ್ದಾರೆ.

ಶನಿವಾರ ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ ಅವರು, ಈ ವಿಶೇಷ ತರಬೇತಿ ಪಡೆಯಲಿರುವ ಒಂದು ಲಕ್ಷ ಕ್ಯಾಡೆಟ್‌ಗಳಲ್ಲಿ ಮೂರನೇ ಒಂದರಷ್ಟು ಮಂದಿ ಮಹಿಳೆಯರಾಗಿರಲಿದ್ದಾರೆ ಎಂದೂ ಹೇಳಿದರು.

ಗಡಿ ಪ್ರದೇಶಗಳಲ್ಲಿ ಸೇನೆಯು ಕ್ಯಾಡೆಟ್‌ಗಳಿಗೆ ತರಬೇತಿ ನೀಡಲಿದೆ. ಕರಾವಳಿ ಪ್ರದೇಶಗಳಲ್ಲಿ ನೌಕಾದಳವು ತರಬೇತಿ ನೀಡಲಿದೆ. ಎಲ್ಲೆಲ್ಲಿ ವಾಯುನೆಲೆಗಳಿವೆಯೋ ಅಲ್ಲಿ ವಾಯುಪಡೆಯು ತರಬೇತಿ ಚಟುವಟಿಕೆಗಳನ್ನು ನಡೆಸಿಲಿದೆ. ಇದರಿಂದಾಗಿ ವಿಪತ್ತುಗಳ ಸಂದರ್ಭದಲ್ಲಿ ಗಡಿ ಹಾಗೂ ಕರಾವಳಿ ಪ್ರದೇಶಗಳು ತರಬೇತುಗೊಂಡ ಮಾನವಶಕ್ತಿಯನ್ನು ಹೊಂದಲಿವೆ. ಸಶಸ್ತ್ರ ಪಡೆಗಳಲ್ಲಿ ಉದ್ಯೋಗಕ್ಕಾಗಿ ತೆರಳುವ ಯುವಕರಿಗೆ ಅಗತ್ಯವಿರುವ ಕೌಶಲ್ಯವೂ ದೊರಕಲಿದೆ ಎಂದು ನರೇಂದ್ರ ಮೋದಿಯವರು ವಿವರಿಸಿದರು.

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಆಳ್ವಾಸ್ ವಿದ್ಯಾರ್ಥಿಗಳ ಮಾದರಿ ಕಾರ್ಯಕ್ರಮ: ಜಲಸಂರಕ್ಷಣೆಗೆ ಸಾಂಪ್ರದಾಯಿಕ ಕಟ್ಟಗಳ ನಿರ್ಮಾಣ

Upayuktha

ಇಂದು ಭಗತ್ ಸಿಂಗ್ ಜನ್ಮದಿನ: ಸ್ವಾತಂತ್ರ್ಯ ಯಜ್ಞದಲ್ಲಿ ಸಮಿಧೆಯಾದ ವೀರಪುರುಷ

Upayuktha

ಪುಲ್ವಾಮಾ ಉಗ್ರ ದಾಳಿಗೆ ಒಂದು ವರ್ಷ: ಹುತಾತ್ಮ ಯೋಧರಿಗೊಂದು ಶ್ರದ್ಧಾ ನಮನ

Upayuktha