ಚಂದನವನ- ಸ್ಯಾಂಡಲ್‌ವುಡ್ ನಿಧನ ಸುದ್ದಿ

ಕನ್ನಡ ಧಾರಾವಾಹಿ ಪ್ರಸಿದ್ಧ ನಟ ಕೃಷ್ಣ ನಾಡಿಗ್ ನಿಧನ

ಬೆಂಗಳೂರು: ಇವರು ಕನ್ನಡ ಧಾರವಾಹಿಯ ಪ್ರಸಿದ್ಧ ನಟ ಕೃಷ್ಣ ನಾಡಿಗ್ ಅವರು ಶನಿವಾರ ನಿಧನರಾಗಿದ್ದಾರೆ.

ಇವರು ಚಿತ್ರೀಕರಣದ ಭಾಗಿಯಾಗಿದ್ದ ಸಮಯದಲ್ಲಿ ಕೃಷ್ಣ ನಾಡಿಗ್ ಅವರಿಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿದ್ದು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆ ವೇಳೆಗಾಗಲೇ ಅವರು ಮೃತಪಟ್ಟಿದ್ದಾರೆಂದು ವರದಿ ಮೂಲಗಳು ತಿಳಿಸಿವೆ.

ಕೃಷ್ಣ ನಾಡಿಗ್ ಅವರು ಧಾರಾವಾಹಿಗಳಷ್ಟೇ ಅಲ್ಲದೆ ಸಿನಿಮಾಗಳಲ್ಲಿಯೂ ಅಭಿನಯಿಸಿ ಪ್ರೇಕ್ಷಕರನ್ನು ರಂಜಿಸಿದ್ದರು. ಇವರು ಮಿಲನ, ದೇವಿ, ಪಾರು ಮುಂತಾದ ಸಾಕಷ್ಟು ಧಾರಾವಾಹಿಗಳಲ್ಲಿ ನಟನೆ ಮಾಡಿದ್ದಾರೆ. ಹಾಗೆಯೇ ಪೈಲ್ವಾನ್, ಆದಿ ಲಕ್ಷ್ಮಿ ಪುರಾಣ ಹಾಗೂ ಇತರೆ ಸಾಕಷ್ಟು ಸಿನಿಮಾಗಳಲ್ಲೂ ನಟಿಸಿದ್ದಾರೆ.

ನಾಡಿಗ್ ಇವರು ಚಿಕ್ಕಮಗಳೂರು ಮೂಲದವರು. ನಾಟಗಳ ಬಗ್ಗೆ ವಿಶೇಷ ಆಸಕ್ತಿ ಇಟ್ಟುಕೊಂಡ ಇವರು ಪುಟ್ಟಣ್ಣ ಕಣಗಾಲ್ ಸಿನಿಮಾಗಳನ್ನು ನೋಡಿ ನಿರ್ದೇಶಕನಾಗುವ ಕನಸು ಹೊತ್ತು ಬಂದಿದ್ದರು. ಆದರೆ, ಕೊನೆಗೆ ನಟರಾಗಿ ಜನ ಮನಗೆದ್ದರು

Related posts

ಹಿರಿಯ ಕವಿ, ಸಾಹಿತಿ, ಹವ್ಯಾಸಿ ಭಾಗವತ ಕೀರಿಕ್ಕಾಡು ವನಮಾಲ ಕೇಶವ ಭಟ್ಟ ನಿಧನ

Upayuktha

ಹೃದಯಾಘಾತ: ದುಬೈನಲ್ಲಿ ವಾಮಂಜೂರು ಮೂಲದ 28 ವರ್ಷದ ಯುವಕ ಸಾವು

Upayuktha

ಕುಂದಾಪುರದ ಮಾಜಿ ಶಾಸಕಿ ವಿನ್ನಿಫ್ರೆಡ್ ಫರ್ನಾಂಡಿಸ್ ನಿಧನ

Upayuktha

Leave a Comment