ಕ್ಯಾಂಪಸ್ ಸುದ್ದಿ ಗ್ರಾಮಾಂತರ ಸ್ಥಳೀಯ

ವಿದ್ಯಾರ್ಥಿಗಳ ಮನಸ್ಸನ್ನು ಅರಿತವ ಉತ್ತಮ ಅಧ್ಯಾಪಕನಾಗಬಲ್ಲ: ಪ್ರೊ. ಬಾಲಕೃಷ್ಣ ಶೆಟ್ಟಿ

ಮೂಡುಬಿದಿರೆ: ಅಧ್ಯಾಪಕರಲ್ಲಿ ಯಾವಾಗಲೂ ಮಾನವೀಯ ಗುಣಗಳು ಇರಬೇಕು. ಮಕ್ಕಳ ಮನವೊಲಿಸಿ, ಅವರ ಅವಶ್ಯಕತೆಗಳನ್ನು ಅರಿತು, ಉತ್ತಮ ರೀತಿಯಲ್ಲಿ ವಿಷಯಗಳನ್ನು ಮನದಟ್ಟು ಮಾಡಿಕೊಡುವ ಅಧ್ಯಾಪಕರು ಕೊನೆಯವರೆಗೂ ಅವರ ಮನಸ್ಸಿನಲ್ಲಿ ಉತ್ತಮ ಅಧ್ಯಾಪಕರಾಗಿಯೇ ಉಳಿಯುತ್ತಾರೆ ಎಂದು ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಪ್ರೊ. ಬಾಲಕೃಷ್ಟ ಶೆಟ್ಟಿ ಹೇಳಿದರು.

ಆಳ್ವಾಸ್ ಕಾಲೇಜಿನ ಬಿ.ಎಡ್ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. “ಅಧ್ಯಾಪನ ವೃತ್ತಿಗೆ ತನ್ನದೇ ಆದ ಮಹತ್ವವಿದೆ. ವಿದ್ಯಾರ್ಥಿಗಳನ್ನು ಅರ್ಥ ಮಾಡಿಕೊಳ್ಳುವಲ್ಲಿನ ಗೊಂದಲಗಳಿಂದಾಗಿ ಹಲವು ಬಾರಿ ಅಧ್ಯಾಪಕರು ಎಡವುತ್ತಿರುವುದು ಸಹಜ. ತರಗತಿಯಲ್ಲಿನ ಪ್ರತಿಯೊಬ್ಬರನ್ನೂ ತನ್ನತ್ತ ಸೆಳೆಯುವ ಚಾಕಚಕ್ಯತೆ ಅಧ್ಯಾಪಕರು ಹೊಂದಿರಬೇಕು ಎಂದರು.

ಕಾರ್ಯಕ್ರಮದಲ್ಲಿ ಆಳ್ವಾಸ್ ಪ್ರೌಢಶಾಲಾ ಆಡಳಿತಾಧಿಕಾರಿ ಪ್ರಕಾಶ್ ಶೆಟ್ಟಿ, ಆಳ್ವಾಸ್ ಬಿ.ಎಡ್ ಕಾಲೇಜಿನ ಇನ್‍ಚಾರ್ಜ್ ಪ್ರಿನ್ಸಿಪಾಲ್ ಶಂಕರ ಮೂರ್ತಿ ಎಚ್.ಕೆ ಉಪಸ್ಥಿತರಿದ್ದರು. ವಿಜಯ ಲಕ್ಷ್ಮೀ ಪೈ ಸ್ವಾಗತಿಸಿ, ನಿರೂಪಿಸಿದರು. ನಿಶಾ ಜೈನ್ ವಂದಿಸಿದರು.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಶ್ರೀರಾಮಚಂದ್ರ ನಮ್ಮ ಆದರ್ಶಗಳ ಪ್ರತಿರೂಪ: ಡಾ. ವಸಂತಕುಮಾರ ಪೆರ್ಲ

Upayuktha

ಪುತ್ತೂರು : ಮಣ್ಣು ಕುಸಿದು ಬಿದ್ದು ಇಬ್ಬರು ಸಾವು

Harshitha Harish

ಬಣ್ಪುತ್ತಡ್ಕದ ನಿರ್ಗತಿಕ ಪರಿಶಿಷ್ಟ ಜಾತಿ ಕುಟುಂಬಕ್ಕೆ ಚೈಲ್ಡ್ ಲೈನ್ ಸಹಾಯ

Upayuktha