ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ವಿಸಿ ಪುತ್ತೂರು ಪ್ರಿನ್ಸಿಪಾಲರಿಗೆ ಮಾನವಿಕ ವಿಭಾಗದಿಂದ ಬೀಳ್ಕೊಡುಗೆ

ಜೀವಂತಿಕೆಯ ಸಂಬಂಧಗಳನ್ನು ಬೆಳೆಸಿಕೊಳ್ಳೋಣ: ಡಾ. ಪೀಟರ್ ವಿಲ್ಸನ್ ಪ್ರಭಾಕರ್

ಪುತ್ತೂರು: ಇಂದಿನ ಕಾಲದಲ್ಲಿ ಜೀವನಕ್ಕಾಗಿ ಸಂಬಂಧಗಳನ್ನು ಬೆಳೆಸುತ್ತಾರೆ. ಇದರಿಂದಾಗಿ ಪ್ರತಿಯೊಬ್ಬರು ಬದುಕಿನಲ್ಲಿ ಬಂದು ಹೋಗುತ್ತಾರೆ, ಆದರೆ ನಾವು ಜೀವಂತಿಕೆಯುಳ್ಳ ಸಂಬಂಧಗಳನ್ನು ಬೆಳೆಸಿದಾಗ ಮಾತ್ರ ಜೀವನಕ್ಕೆ ಒಂದು ಅರ್ಥ ಸಿಗುವುದು ಎನ್ನುವುದನ್ನು ಅರಿತುಕೊಳ್ಳಬೇಕಾಗಿದೆ. ಪರಸ್ಪರ ಬಾಂಧವ್ಯವನ್ನು ಉತ್ತಮ ರೀತಿಯಲ್ಲಿ ಬೆಳೆಸಿಕೊಂಡಾಗ ನಮ್ಮ ಬದುಕು ಸುಂದರ ರೀತಿಯಲ್ಲಿ ಬೆಳೆದುಕೊಳ್ಳುತ್ತದೆ ಎಂದು ಪುತ್ತೂರಿನ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಹೇಳಿದರು.

ಅವರು ಇಲ್ಲಿನ ಕಾಲೇಜಿನ ಮಾನವಿಕ ವಿಭಾಗದ ವತಿಯಿಂದ ಆಯೋಜಿಸಲಾದ ಪ್ರಾಂಶುಪಾಲರ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ತಮ್ಮ 37 ವರ್ಷದ ಅನುಭವಗಳನ್ನು ಶನಿವಾರ ಹಂಚಿಕೊಂಡರು.

ನಿವೃತ್ತಿ ಜೀವನ ಎನ್ನುವುದು ಒಂದು ಹೊಸ ಆರಂಭವಾಗಿದೆ. ಅದರಂತೆ ವೃತ್ತಿ ಜೀವನದಲ್ಲಿ ಪಡೆದುಕೊಂಡ ಅನುಭವಗಳು ಮುಂದಿನ ಜೀವನದ ದಾರಿ ದೀಪವಾಗುತ್ತದೆ. ಅದೇ ರೀತಿ ವಿದ್ಯಾರ್ಥಿಗಳು ಯಾವುದೇ ರೀತಿಯಲ್ಲಿ ನಾವು ಕಲಿಯುತ್ತಿರುವ ವಿಷಯದ ಬಗ್ಗೆ ಕೀಳರಿಮೆಯನ್ನಿಟ್ಟುಕೊಳ್ಳಬಾರದು. ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಅವಕಾಶಗಳು ಹೆಚ್ಚಾಗಿ ತೆರೆದುಕೊಳ್ಳುತ್ತದೆ. ಅದೇ ರೀತಿ ನಾವು ನಮ್ಮನ್ನು ಪ್ರತಿ ಜೀವನದ ಸ್ಪರ್ಧೆಯಲ್ಲೂ ಸಿದ್ಧರನ್ನಾಗಿಸಿದಾಗ ಯಾವುದೇ ಸಮಸ್ಯೆಯೂ ಬರುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಐಕ್ಯೂಎಸಿ ಸಂಯೋಜಕ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಚ್. ಜಿ. ಶ್ರೀಧರ್ ಮಾತನಾಡಿ, ನಾವು ಹಿರಿಯರಿಗೆ ನೀಡುವ ಗೌರವ ನಮ್ಮ ಸಂಸ್ಕೃತಿಯನ್ನು ಹೇಳುತ್ತದೆ. ನಮ್ಮಲ್ಲಿರುವ ಜೀವನ ಮೌಲ್ಯಗಳು ನಮ್ಮನ್ನು ಬದುಕಿನುದ್ದಕ್ಕೂ ಮುನ್ನಡೆಸುತ್ತದೆ. ಒಂದು ವಿಷಯದಲ್ಲಿನ ಅರಿವನ್ನು ಜ್ಞಾನ ಎನ್ನಲು ಸಾಧ್ಯವಿಲ್ಲ. ಎಲ್ಲಾ ವಿಚಾರಗಳಲ್ಲಿನ ಅರಿವನ್ನು ಜ್ಞಾನ ಎನ್ನಲಾಗುತ್ತದೆ. ಆದದರಿಂದ ಸಾಕಷ್ಟು ವಿಚಾರಗಳನ್ನು ತಿಳಿದುಕೊಳ್ಳಲು ನಮ್ಮನ್ನು ನಾವು ತೆರೆದುಕೊಳ್ಳಬೇಕಾಗಿದೆ ಎಂದು ಹೇಳಿದರು.

ಕಾಲೇಜಿನ ಇತಿಹಾಸ ವಿಭಾಗದ ಉಪನ್ಯಾಸಕಿ ವಿಜಯಲಕ್ಷ್ಮೀ, ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಕವಿತಾ, ಕನ್ನಡ ವಿಭಾಗದ ಉಪನ್ಯಾಸಕ ಡಾ ಮನಮೋಹನ್, ಸಂಸ್ಕೃತ ವಿಭಾಗ ಉಪನ್ಯಾಸಕ ಡಾ. ಶ್ರೀಶ ಕುಮಾರ್, ಆರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ಡಾ. ವಾಸುದೇವ, ಆಂಗ್ಲ ವಿಭಾಗದ ಉಪನ್ಯಾಸಕರಾದ ಗಣೇಶ್ ಪ್ರಸಾದ್ ಎ., ರೇಖಾ ನಾಯರ್ ಹಾಗೂ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಭವ್ಯ ಪಿ.ಆರ್. ನಿಡ್ಪಳ್ಳಿ ತಮ್ಮ ಅನುಭವಗಳನ್ನು ಹಂಚಿಕೊಂಡರು.

ವಿದ್ಯಾರ್ಥಿಗಳಾದ ಅರುಣ್ ಕುಮಾರ್, ತನುಶ್ರೀ, ಶ್ರೀಧರ್, ಗಾನವಿ, ಕವಿತಾ, ಸಾರ್ಥಕ್, ತೇಜಶ್ರೀ ತಮ್ಮ ಅನುಭವಗಳನ್ನು ಹಂಚಿಕೊಂಡರು.

ನಿವೃತ್ತಿ ಹೊಂದುತ್ತಿರುವ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರನ್ನು ಉಪನ್ಯಾಸಕರ ವತಿಯಿಂದ ಗೌರವ ಸಮರ್ಪಣೆ ನಡೆಯಿತು. ವಿದ್ಯಾರ್ಥಿ ಶ್ರೇಯಸ್ ಬಿಡಿಸಿದ ಚಿತ್ರವನ್ನು ಉಡುಗೊರೆಯಾಗಿ ಪ್ರಾಂಶುಪಾಲರಿಗೆ ನೀಡಿದರು.

ವೇದಿಕೆಯಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ನಾಯಕ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ರಚನಾ ಪ್ರಾರ್ಥಿಸಿ, ಚಾಂದನಿ ಸ್ವಾಗತಿಸಿದರು. ಸಾರ್ಥಕ್ ವಂದಿಸಿ ಆಶಾ ಸಿ. ಎಚ್. ಕಾರ್ಯಕ್ರಮವನ್ನು ನಿರೂಪಿಸಿದರು.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಆಳ್ವಾಸ್ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಿಂದ ಮಂಗಳೂರು ಎಪಿಎಂಸಿ ಕ್ಷೇತ್ರ ಭೇಟಿ

Upayuktha

ಆಳ್ವಾಸ್ ಆಯುರ್ವೇದ ಸ್ನಾತಕೋತ್ತರ ಕಾಲೇಜಿಗೆ 100% ಫಲಿತಾಂಶ, 8 ರ‍್ಯಾಂಕ್‌

Upayuktha

ವಿದ್ಯಾರ್ಥಿಗಳೇ ಅಧ್ಯಾಪಕನ ಸಂಪತ್ತು: ಡಾ. ಪೀಟರ್ ವಿಲ್ಸನ್ ಪ್ರಭಾಕರ್

Upayuktha