ಕ್ಯಾಂಪಸ್ ಸುದ್ದಿ

ವಿವಿ ಕಾಲೇಜು: ಡಾ. ರತ್ನಾವತಿ ಕೆ ಅವರಿಗೆ ಬೀಳ್ಕೊಡುಗೆ

ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಕನ್ನಡ ವಿಭಾಗದಲ್ಲಿ 37 ವರ್ಷಗಳ ಸೇವೆಯ ಬಳಿಕ ವಯೋನಿವೃತ್ತಿ ಹೊಂದುತ್ತಿರುವ ಡಾ. ರತ್ನಾವತಿ ಕೆ. ಅವರನ್ನು ಗುರುವಾರ ಆತ್ಮೀಯವಾಗಿ ಬೀಳ್ಕೊಡಲಾಯಿತು.

ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತರ ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಸ್ಮರಣೀಯ ಕ್ಷಣಗಳನ್ನು ಹಂಚಿಕೊಂಡರು. ಅವರ ಜೀವನ ಪ್ರೀತಿ, ವಿದ್ಯಾರ್ಥಿನಿಯರಿಗೆ ಕೊಡುತ್ತಿದ್ದ ಸಕಾಲಿಕ ಸಲಹೆಗಳು, ಸಾಹಿತ್ಯದೊಂದಿಗೆ ಬದುಕಿನ ಪಾಠ ಕಲಿಸುವ, ವೈಯಕ್ತಿಕವಾಗಿ ಸಹಾಯಮಾಡುವ, ನೈತಿಕವಾಗಿ ಬೆಂಬಲವಾಗಿ ನಿಲ್ಲುವ ಗುಣಗಳನ್ನು ಸ್ಮರಿಸಿಕೊಂಡರು. ಡಾ. ಸುಭಾಷಿಣಿ ಶ್ರೀವತ್ಸ, ಡಾ. ಭಾರತಿ ಪಿಲಾರ್‌, ಡಾ. ಗಿರಿಯಪ್ಪ, ಡಾ. ಮಾಧವ ಎಂ.ಕೆ, ಡಾ. ಭಾರತಿ ಪ್ರಕಾಶ್‌, ಯಶು ಕುಮಾರ್‌, ಶ್ರೀಮತಿ ವನಜಾ ಮೊದಲಾದವರು ಮಾತನಾಡಿದರು.

ನಿಕಟಪೂರ್ವ ಪ್ರಾಂಶುಪಾಲ ಡಾ. ಉದಯ ಕುಮಾರ್‌ ಎಂ.ಎ, ಪ್ರಭಾರ ಪ್ರಾಂಶುಪಾಲ ಡಾ. ಎ ಹರೀಶ್‌ ನಿವೃತ್ತರ ಸೇವಾ ಮನೋಭಾವವನ್ನು ಶ್ಲಾಘಿಸಿ ನಿವೃತ್ತ ಜೀವನಕ್ಕೆ ಶುಭ ಕೋರಿದರು. ಕಾಲೇಜಿನ ವತಿಯಿಂದ ಡಾ. ರತ್ನಾವತಿ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಅವರು ಕಾಲೇಜಿನ ಅಭಿವೃದ್ಧಿಗಾಗಿ ರೂ. 50,000ವನ್ನು ಕೊಡುಗೆಯಾಗಿ ನೀಡಿದರು. ಪುತ್ರಿ ಅಖಿಲಾ ಮತ್ತು ಕುಟುಂಬ ಸದಸ್ಯರು ಉಪಸ್ಥಿತರಿದ್ದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಅಂತರ್‌ ಕಾಲೇಜು ಸ್ಪರ್ಧೆಯಿಂದ ಯಕ್ಷಗಾನದ ಉಳಿವು: ಭಾಸ್ಕರ ರೈ ಕುಕ್ಕುವಳ್ಳಿ

Upayuktha

ಉಜಿರೆ ಕಾಲೇಜಿನ ರತ್ನಾವತಿ ಅವರಿಗೆ ಪಿಎಚ್‍ಡಿ ಪದವಿ

Upayuktha

ಪುತ್ತೂರು: ಫಿಲೋಮಿನಾ ಕಾಲೇಜಿನಲ್ಲಿ ‘ಯಕ್ಷ ಸಂವಾದ ಸರಣಿ’

Upayuktha

Leave a Comment