ಕ್ಯಾಂಪಸ್ ಸುದ್ದಿ ಗ್ರಾಮಾಂತರ ಸ್ಥಳೀಯ

ಕೌಟುಂಬಿಕ ಭಾವನೆ ಬೆಳೆಯಲು ಸ್ಪೂರ್ತಿದಾಯಕ: ಡಾ ಬಿ.ಪಿ ಸಂಪತ್ ಕುಮಾರ್

ಉಜಿರೆ: ಭಾವನೆಗಳ ಬೆನ್ನೇರಿದರೆ ನೆನಪುಗಳು ಶಾಶ್ವತವಾಗಿ ಉಳಿದು ನಮ್ಮೊಳಗೆ ಕೌಟುಂಬಿಕ ಭಾವನೆ ಬೆಳೆಯುವುದಕ್ಕೆ ಸ್ಪೂರ್ತಿದಾಯಕವಾಗಿರುತ್ತದೆ. ಇಂತಹ ನೆನಪುಗಳನ್ನು ಮೆಲುಕು ಹಾಕಿದಾಗ ಯೋಚನಾಶಕ್ತಿ ಚುರುಕಾಗುತ್ತದೆ ಎಂದು ಉಜಿರೆ ಎಸ್.ಡಿ.ಎಂ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಬಿ.ಪಿ ಸಂಪತ್ ಕುಮಾರ್ ಹೇಳಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಮ್ಯಕ್ ದರ್ಶನ ವೇದಿಕೆಯಲ್ಲಿ ಪ್ರಸ್ತುತ ವರ್ಷದ ಕನ್ನಡ ವಿಭಾಗದ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದರು.

ಜ್ಞಾನ ಮಾತ್ರವಲ್ಲದೆ ಭಾವಸಂಪನ್ನರಾಗಿದ್ದಾಗ ಮಾತ್ರ ಆತ್ಮೀಯತೆ ಬಲಗೊಳ್ಳುತ್ತದೆ. ಕನ್ನಡ ಐಚ್ಛಿಕವನ್ನು ಅಭ್ಯಾಸ ಮಾಡಿದ ಹಲವಾರು ಹಿರಿಯ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಇಂದು ಮಿಂಚುತ್ತಿದ್ದಾರೆ, ಎಸ್.ಡಿ.ಎಂ ಅವಕಾಶಗಳ ಆಗರವಾಗಿದ್ದು ಸದುಪಯೋಗ ಪಡಿಸಿಕೊಂಡಾಗ ಪ್ರತಿಭೆಯ ಅನಾವರಣವಾಗುತ್ತದೆ ಎಂದು ಕಿವಿ ಮಾತು ಹೇಳಿದರು.

ಈ ಸಂದರ್ಭದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಮನರಂಜನಾ ಚಟುವಟಿಕೆಗಳನ್ನು ಏರ್ಪಡಿಸಲಾಯಿತು. ಕನ್ನಡ ವಿಭಾಗದ ಎಲ್ಲ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.

ವಿದ್ಯಾರ್ಥಿ ಶಶಾಂಕ್ ಸ್ವಾಗತಿಸಿ, ಅರವಿಂದ್ ವಂದಿಸಿ, ರಕ್ಷಾ ಕೋಟ್ಯಾನ್ ನಿರೂಪಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಆಳ್ವಾಸ್‌ ಶಾಲೆಗಳಲ್ಲಿ ‘ವಿ ಇನ್‍ಸ್ಪೈರ್’ ಜಾಗೃತಿ ಕಾರ್ಯಕ್ರಮ

Upayuktha

ಯಕ್ಷಗಾನದ ಮೂಲಕ ಧರ್ಮಪ್ರಜ್ಞೆ ಮೂಡಿಸುವ ಕಾರ್ಯವಾಗಲಿ – ಒಡಿಯೂರು ಶ್ರೀ

Upayuktha

ಪೆರಡಾಲ ನವಜೀವನ ಶಾಲೆಯಲ್ಲಿ 2 ದಿನಗಳ ಸ್ಕೌಟ್ಸ್, ಗೈಡ್ಸ್ ಶಿಬಿರ

Upayuktha