ಪ್ರಮುಖ ಸಮುದಾಯ ಸುದ್ದಿ

ಡಿಸಿಎಂ ಡಾ ಅಶ್ವತ್ಥ್ ನಾರಾಯಣಗೆ ಹವ್ಯಕ ಮಹಾಸಭಾದಿಂದ ಅಭಿನಂದನಾ ಸಮಾರಂಭ ಸೆ. 21ಕ್ಕೆ

ಬೆಂಗಳೂರು: ಅಖಿಲ ಹವ್ಯಕ ಮಹಾಸಭೆಯ ಹಿತೈಷಿಗಳಾದ ಡಾ. ಅಶ್ವಥ್ ನಾರಾಯಣ್ ಅವರು ಉಪ ಮುಖ್ಯಮಂತ್ರಿಗಳಾಗಿ ನಿಯುಕ್ತರಾದ ಹಿನ್ನೆಲೆಯಲ್ಲಿ ಶ್ರೀಅಖಿಲ ಹವ್ಯಕ ಮಹಾಸಭೆಯಿಂದ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿದೆ.

ಡಾ. ಅಶ್ವಥ್’ನಾರಾಯಣ್ ಅಭಿಮಾನಿ ಬಳಗದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿತವಾಗಿದ್ದು, ಸೆ. 21ರ ಶನಿವಾರ ಸಂಜೆ 6.30ಕ್ಕೆ ಮಲ್ಲೇಶ್ವರದಲ್ಲಿರುವ ಹವ್ಯಕ ಸಭಾಭವನದಲ್ಲಿ ಕಾರ್ಯಕ್ರಮ ನಡೆಯಲಿದೆ.

ಡಾ. ಅಶ್ವಥ್’ನಾರಾಯಣ್ ಉಪಸ್ಥಿತರಿದ್ದು, ಹವ್ಯಕ ಮಹಾಸಭೆ ಹಾಗೂ ಅಭಿಮಾನಿ ಬಳಗದ ಸನ್ಮಾನವನ್ನು ಸ್ವೀಕರಿಸಲಿದ್ದು, ಅಭಿನಂದನಾ ಸಮಾರಂಭದ ಅಧ್ಯಕ್ಷತೆಯನ್ನು ಹವ್ಯಕ ಮಹಾಸಭೆಯ ಅಧ್ಯಕ್ಷರಾದ ಡಾ. ಗಿರಿಧರ ಕಜೆ ವಹಿಸಲಿದ್ದಾರೆ. ಕಾಡುಮಲ್ಲೇಶ್ವರ ವಾರ್ಡ್ ಬಿಬಿಎಂಪಿ ಸದಸ್ಯರಾದ ಮಂಜುನಾಥ್ ರಾಜು ಅಭ್ಯಾಗತರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Related posts

ಮಾಂಡೋವಿ ಮೋಟರ್ಸ್‌ನಲ್ಲಿ ಮಾರುತಿ ಸುಝುಕಿಯ ಹೊಸ ಕಾರು ವಿತಾರ ಬ್ರೀಝಾ ಬಿಎಸ್‌6 ಪೆಟ್ರೋಲ್ ಕಾರು ಬಿಡುಗಡೆ

Upayuktha

370ನೇ ವಿಧಿ ರದ್ದಾದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಏನೇನು ಬದಲಾಗಿದೆ ಗೊತ್ತಾ?

Upayuktha News Network

ಮೈಸೂರು ದಸರಾ: ಗಜಪಡೆ ಕವಾಯತು ಆರಂಭ

Upayuktha