ಗ್ರಾಮಾಂತರ ಸ್ಥಳೀಯ

ಮುಳ್ಳೇರಿಯಾ: ನಿವೃತ್ತ ಶಿಕ್ಷಕರಿಗೆ ಸನ್ಮಾನ

ಮುಳ್ಳೇರಿಯಾ: ಕಳೆದ ಶೈಕ್ಷಣಿಕ ವರ್ಷದಲ್ಲಿ ನಿವೃತ್ತರಾದ ಕನ್ನಡ ಅಧ್ಯಾಪಕರನ್ನು ಸನ್ಮಾನಿಸುವ 3ನೆ ಹಂತದ ಕಾರ್ಯಕ್ರಮ ಎ.ಯು.ಪಿ.ಶಾಲೆ ಮುಳ್ಳೇರಿಯಾದಲ್ಲಿ ನಡೆಯಿತು. ಮಹಾಲಿಂಗೇಶ್ವರ ಭಟ್ (ಮುಖ್ಯೋಪಾಧ್ಯಾಯರು, ಎಯುಪಿ ಶಾಲೆ ಕುಂಟಿಕಾನ), ಕೃಷ್ಣೋಜಿ ರಾವ್ (ಜಿವಿಎಚ್ಎಸ್ಎಸ್ ಕಾರಡ್ಕ￰) ಹಾಗೂ ಗುರುವಾಯೂರಪ್ಪ ಭಟ್ (ಎ.ಯು.ಪಿ.ಶಾಲೆ ಮುಳ್ಳೇರಿಯಾ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಯತೀಶ್ ಕುಮಾರ್ ರೈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೇಂದ್ರಸಮಿತಿಯ ಅಧ್ಯಕ್ಷರಾದ ರವೀಂದ್ರನಾಥ್ ಅಧ್ಯಕ್ಷತೆ ವಹಿಸಿದ್ದರು. ಎ.ಯು.ಪಿ.ಶಾಲೆ ಮುಳ್ಳೇರಿಯಾದ ಮುಖ್ಯೋಪಾಧ್ಯಾಯರಾದ ಶ್ರೀ ಅಶೋಕ ಅರಳಿತ್ತಾಯ, ಸಂಘಟನೆಯ ಕುಂಬಳೆ ಉಪಜಿಲ್ಲಾ ಅಧ್ಯಕ್ಷರಾದ ಶಿವ ಕುಮಾರ್ ಕಾರ್ಯಕ್ರಮಕ್ಕೆ ಶುಭಾಶಂಸನೆಗೈದರು.

ಸಂಘಟನೆಯ ಕಾರ್ಯದರ್ಶಿ ಶ್ರೀಶ ಕುಮಾರ್ ನಿರ್ವಹಿಸಿದರು. ಕೋಶಾಧಿಕಾರಿ ಶರತ್ ಕುಮಾರ್ ಸನ್ಮಾನಿತರನ್ನು ಸಭೆಗೆ ಪರಿಚಯಿಸಿದರು. ಎ.ಯು.ಪಿ.ಶಾಲೆ ಮುಳ್ಳೇರಿಯ ಇಲ್ಲಿನ ಅಧ್ಯಾಪಕರಾದ ಗೋಪಾಲಕೃಷ್ಣ ಭಟ್ ವಂದಿಸಿದರು. ಪಣಿಯೆ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜ್ಯೋತಿ, ಮುಳ್ಳೇರಿಯ ಎ.ಯು.ಪಿ ಶಾಲೆ￰ಯ ಅಧ್ಯಾಪಿಕೆ ಶ್ರೀಮತಿ ಚೇತನಾ ಉಪಸ್ಥಿತರಿದ್ದರು. ಕಾರ್ಯಕ್ರಮವು ಕೋವಿಡ್ ನಿಯಮಾವಳಿಗಳಿಗೆ ಅನುಸಾರವಾಗಿ, ಸರಳವಾಗಿ ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಕಾಸರಗೋಡು ಜಿಲ್ಲೆಯಲ್ಲಿ ಈ ವರ್ಷ 16,318 ಮಕ್ಕಳ ಜನನ

Upayuktha

‘ಸಪ್ನಲೋಕ’ ಕವನ ಸಂಕಲನ ಬಿಡುಗಡೆ

Upayuktha

ವಿಟ್ಲದಲ್ಲಿ ಸಿಎಎ, ಎನ್‌ಆರ್‌ಸಿ ವಿರುದ್ಧ ಪ್ರತಿಭಟನೆ ವೇಳೆ ಸಸಿಕಾಂತ್ ಸೆಂಥಿಲ್ ಪ್ರಚೋದನಕಾರಿ ಭಾಷಣ

Upayuktha

Leave a Comment