ಯೂತ್ ಲೇಖನಗಳು

ದಾರಿತಪ್ಪಿದ ಸ್ತ್ರೀವಾದವೇ ಮುಳುವಾಗುತ್ತಿದೆಯೇ…?

(ಚಿತ್ರ ಕೃಪೆ : ದ ಕಾನ್ವರ್ಸೇಶನ್)

ಸ್ತ್ರೀವಾದ ಭಾರತದಲ್ಲಿ ಶ್ರೇಷ್ಠ ಯುಗವನ್ನು ನಿರ್ಮಾಣ ಮಾಡಿತ್ತು ಎಂದರೆ ಅದರಲ್ಲಿ ಅತಿಶಯೋಕ್ತಿಯಿಲ್ಲ. ಆದರೂ ಇದು ಸ್ತ್ರೀಯ ಸಮಾನತೆಗಾಗಿ ನಡೆದ ಹೋರಾಟವೋ ಅಥವಾ ಅಸ್ತಿತ್ವಕ್ಕಾಗಿ ನಡೆದ ಜಂಜಾಟವೋ ಎಂಬುದೊಂದು ಈಗಲೂ ನನಗೆ ಪ್ರಶ್ನೆಯಾಗಿಯೇ ಉಳಿದಿದೆ.

ಭಾರತದಲ್ಲಿ‌ ದ್ರೌಪದಿಯಿಂದ ಪ್ರಾರಂಭವಾಯಿತು ಎನ್ನಲಾದ‌ ಸ್ತ್ರೀವಾದ ಅಕ್ಕಮಹಾದೇವಿಯಿಂದ ಮತ್ತೊಂದು ಉತ್ತುಂಗವನ್ನು ತಲುಪಿತ್ತು. ಅಕ್ಕನಂತಹ ಸ್ತ್ರೀವಾದದ ಮಾರ್ಗದರ್ಶನವಿರುವ ನಮ್ಮ ದೇಶದ ಸ್ತ್ರೀವಾದ ಆಧುನಿಕ ಯುಗದಲ್ಲಿ ಯಾವುದೋ ಹಾದಿಯನ್ನು ತುಳಿದುಬಿಟ್ಟಿತಲ್ಲ ಎಂಬುದೇ ಅತ್ಯಂತ ಕಳವಳದ ವಿಚಾರ. ಅದಾವ ಮಂಕುಬೂದಿಯ ಬಡಿತದಿಂದ ಸ್ತ್ರೀವಾದದ ದೃಷ್ಟಿಕೋನ ಪುರಷದ್ವೇಷದ ಕಡೆಗೆ ವಾಲಿತೋ ಕಾಣದ ಶಕ್ತಿಗೇ ಗೊತ್ತು.

ಪ್ರತಿಯೊಂದರಲ್ಲೂ ಪುರುಷರಿಗಿಂತ ಮುಂದುವರಿಯಬೇಕು ಎಂಬ ಅರ್ಥವಿಲ್ಲದ ಮತ್ತು ಅನಗತ್ಯ ಆಕಾಂಕ್ಷೆ ಸ್ತ್ರೀವಾದದ ದಾರಿ ತಪ್ಪಿಸಿತೇ? ಸ್ತ್ರೀಯರು ಯಾರಿಗೇನು ಕಡಿಮೆ. ಲಿಂಗಬೇಧದ ವಿರುದ್ಧ ಇರಬೇಕಾದ ಹೋರಾಟವನ್ನು ಕೆಲವರು ಸ್ವಾರ್ಥಕ್ಕಾಗಿ ‘ಪುರುಷ ವಿರೋಧಿʼಯನ್ನಾಗಿಸಿದ್ದು ಸಮಾಜದ ಹಾದಿ ತಪ್ಪಿಸಿದೆ. ಮೂಲ ಉದ್ದೇಶವೇ ಕಳೆದುಹೋದ ಬಳಿಕ ಸ್ತ್ರೀ ಸಮಾಜ ಯಾವ ದಿಕ್ಕಿನೆಡೆ ಸಾಗುತ್ತದೆ ಎಂಬ ಆತಂಕವಷ್ಟೇ…
ಒಮ್ಮೆ #metoo ಎಂದು ಬೊಬ್ಬೆ ಹೊಡೆದಾಗ ಇಡೀಯ ಸಮಾಜ ಪುರುಷರನ್ನು ದ್ವೇಷಿಸುವ ಮಟ್ಟಿಗೆ ಬಂದು ತಲುಪಿದಾಗ ಇದ್ದ ಮಹಿಳಾವಾದಿಗಳು ಪೂರ್ತಿ ಸ್ತ್ರೀಸಮಾಜವನ್ನು ತಲೆ ತಗ್ಗಿಸುವ ಹಾಗೆ ಮಾಡಿದ ನಟಿಯರ ಡ್ರಗ್ ಪ್ರಕರಣವನ್ನು ವಿರೋಧಿಸುವ ಸೌಜನ್ಯ ತೋರಿಸಲಿಲ್ಲ.

ಸ್ತ್ರೀವಾದ ಎಂದರೆ ಪುರುಷರ ಸಮಾನರಾಗುವುದಲ್ಲ, ಬದಲಾಗಿ ಸ್ತ್ರೀಯರನ್ನು ಪುರುಷ ನಿಯಂತ್ರಿಸಬಾರದು, ಆಕೆಗೆ ವಿದ್ಯಾವಂತಳಾಗಿ ತನ್ನ ಪ್ರತಿಭೆ ಮೆರೆಯಲು ಸಂಪೂರ್ಣ ಸ್ವಾತಂತ್ರ್ಯವಿರಬೇಕು. ಪುರುಷರು ಕುಡೀತಾರೆ ಅಂತ ಮಹಿಳೆಯರೂ ಹಾಗೇ ಮಾಡಿದರೆ ಅಂತಹ ಸ್ತ್ರೀವಾದ ಸಮಾಜಕ್ಕೆ ಕಂಟಕವಾಗಬಹುದಲ್ಲವೇ?

– ಲತೇಶ್ ಸಾಂತ, ಬಾಕ್ರಬೈಲ್
ಪ್ರಥಮ ಬಿಎ, ಪತ್ರಿಕೋದ್ಯಮ
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಖಿನ್ನತೆ: ಕಾರಣಗಳು ಮತ್ತು ಪರಿಹಾರ

Upayuktha

ಕಹಿಬೇವು: ಸರ್ವರೋಗ ನಿವಾರಿಣಿ

Upayuktha

ಕೋವಿಡ್-19 ಕಾಟದಿಂದ ಕವಲು ದಾರಿಯಲ್ಲಿ ದಂತ ವೈದ್ಯರು

Upayuktha

Leave a Comment

error: Copying Content is Prohibited !!