ಲೇಖನಗಳು ಹಬ್ಬಗಳು-ಉತ್ಸವಗಳು

ಹಣತೆಯಾಗಲಿ ದಾರಿದೀಪ; ಬದುಕಾಗಲಿ ಬೆಳಕಿನ ಬುತ್ತಿ

ಹಬ್ಬಗಳು ನಮ್ಮ ಪೂರ್ವಿಕರ ಸುಂದರ ಕಲ್ಪನೆಗಳು. ನೀರಸ ಬದುಕನ್ನು ಸುಂದರಗೊಳಿಸುವ ಪ್ರಯತ್ನವನ್ನು ಮಾಡುವ ಹಬ್ಬ ದೀಪಾವಳಿ. ಹಿಂದಿನ ಕಾಲದಿಂದಲೂ ಆಚರಿಸುವ ಪದ್ಧತಿ ಹಬ್ಬಗಳು. ಎಲ್ಲವನ್ನೂ ಈಗ ಆಚರಿಸದೇ ಇದ್ದುಬಿಡುತ್ತಾರೆ. ಆದರ ಅಂದಿನ ಕಾಲದಿಂದಲೂ ಪ್ರತಿಯೊಂದು ಮನೆಗಳಲ್ಲೂ ಸಂಭ್ರಮದಿಂದ ಆಚರಿಸುವ ಹಿಂದೂ ಹಬ್ಬವೆಂದರೆ ದೀಪಾವಳಿ. ಈ ದೀಪಾವಳಿಗೆ ಸಂಬಂಧಿಸಿದಂತೆ ಪುರಾಣ ಕಥೆಗಳು ಬೇರೆ ಬೇರೆ ಇವೆ. ಹಾಗೂ ಸುಂದರ ಕಲ್ಪನೆಗಳು ಅಡಕವಾಗಿವೆ.

ಇತ್ತೀಚೆಗೆ ಹೆಚ್ಚಿನ ಹಬ್ಬ ಆಚರಣೆಗಳನ್ನು ಆಚರಿಸುವ ವಿಧಾನಗಳು ಬದಲಾಗಿ ಹಬ್ಬದ ಮಹತ್ವವೇ ಕಳೆದು ಹೋಗುತ್ತಿರುವುದು ವಿಷಾದಕರ. ಈಗ ಹಬ್ಬಗಳೆಂದರೆ ಒಂದು ಪಾರ್ಟಿಯಲ್ಲಿ ಭಾಗವಹಿಸುವುದು, ಹುಟ್ಟುಹಬ್ಬ ಆಚರಣೆ, ಇನ್ನೊಬ್ಬರನ್ನು ಆಡಿಕೊಳ್ಳುವುದು, ಬಟ್ಟೆಶಾಪ್‌ಗಳಲ್ಲಿ ಸಿಗುವ ಡಿಸ್ಕೌಂಟ್‌ ಸೇಲ್‌, ಟಿವಿಯಲ್ಲಿ ಬರುವ ಮನರಂಜನೆ ಕಾರ್ಯಕ್ರಮಗಳು ಹಾಗೂ ಮೊಬೈಲ್‌ ಚಾಟ್‌, ವೀಡಿಯೋ ವೀಕ್ಷಣೆ- ಹೀಗೆ ಇವುಗಳನ್ನು ಬಿಟ್ಟರೆ ಬೇರೆ ಹಬ್ಬಗಳೇ ಇಲ್ಲ ಎಂಬಂತಾಗಿದೆ.

ಇದರಿಂದ ಸಾಂಪ್ರದಾಯಿಕ ಹಬ್ಬಗಳು ಕಣ್ಮರೆಯಾಗುತ್ತಿವೆ. ಇವು ನಮ್ಮ ಭಾರತೀಯ ಸಂಸ್ಕೃತಿಗೆ, ಸಂಪ್ರದಾಯಕ್ಕೆ ನಾವು ಮಾಡುತ್ತಿರುವ ಅವಮಾನವೇ ಸರಿ.

ಅಂಗೈಯಲ್ಲೇ ಜಗತ್ತನ್ನು ಕಾಣುವ ಈ ದಿನಗಳಲ್ಲಿ ಎಲ್ಲರಿಗೂ ಒತ್ತಡ, ಚಿಂತೆ, ಬಿಡುವಿಲ್ಲದ ಕೆಲಸಗಳು, ಕಷ್ಟ, ದುಃಖ- ಹೀಗಾಗಿ ಹಬ್ಬ ಆಚರಿಸುವ ಮನಸ್ಸು ಯಾರಿಗೂ ಇರುವುದಿಲ್ಲ. ವರ್ಷದಲ್ಲಿ ಒಂದು ಸಲ ಬರುವ ಹಬ್ಬದಂದು ಕುಟುಂಬ ಸಮೇತ ಸೇರಿಕೊಂಡು ಹಬ್ಬ ಆಚರಿಸುವುದು ಕಡಿಮೆಯಾಗಿದೆ.

ಸಣ್ಣ ಸಣ್ಣ ರೀತಿಯ ಸಾಂಪ್ರದಾಯಿಕ ಹಬ್ಬಗಳನ್ನು ಆಚರಿಸುವ, ಅವುಗಳಿಂದ ಸಿಗುವ ಸಂತೋಷ, ತಾವು ಮಾಡಿದ ತಪ್ಪುಗಳು, ಕಹಿ ಘಟನೆಗಳನ್ನು ಮರೆಸಿ ಹೊಸ ವರ್ಷವೆಂದು ಸಂಭ್ರಮದಿಂದ ಆಚರಿಸುವ ಯುಗಾದಿ. ಅದೇ ರೀತಿ ದೀಪಾವಳಿ ಬೆಳಕಿನ ಹಬ್ಬ.

ದೀಪಾವಳಿ ಬಂತೆಂದರೆ ಆಗುವ ಖುಷಿ ಎಲ್ಲರಿಗೂ. 3-4 ದಿನಗಳ ಕಾಲ ಆಚರಿಸುವ ಹಬ್ಬ. ಕತ್ತಲಿನಿಂದ ಬೆಳಕಿನೆಡೆಗೆ ಎಂಬಂತೆ ದೀಪವನ್ನು ಬೆಳಗಿಸುವುದರ ಜತೆಗೆ ಜೀವನಕ್ಕೆ ದಾರಿದೀಪವಾಗಿರಬೇಕು. ಹೊಸ ಬಟ್ಟೆಗಳನ್ನು ಖರೀದಿಸಿ ಸಂಭ್ರಮದಿಂದ ದೀಪಾವಳಿಯನ್ನು ಆಚರಿಸುತ್ತಾ ಅಜ್ಞಾನವೆಂಬ ಕತ್ತಲೆಯನ್ನು ಓಡಿಸಿ ದೀಪದ ಮೂಲಕ ಬೆಳಕನ್ನು ಹರಡುವುದು. ದೀಪಗಳ ಬದಲು ಕ್ಯಾಂಡಲ್‌ ಬಳಸುವುದು ಹಬ್ಬದ ಮಹತ್ವವನ್ನು ಕಡಿಮೆ ಮಾಡಿದಂತೆ. ಹಣತೆಗಳ ಬೆಳಕಿನ ಮುಂದೆ ಕ್ಯಾಂಡಲ್‌ಗಳ ಥಳುಕು ಬಳುಕು ಏನೂ ಅಲ್ಲ.

ಈ ದೀಪಾವಳಿ ಹಬ್ಬವು ಪ್ರತಿಯೊಬ್ಬರ ಪಾಲಿಗೂ ಸುಖ-ಸಮೃದ್ಧಿ ತರುವ ಹಣತೆಯ ಬೆಳಕಾಗಲಿ. ಹಣತೆಯನ್ನು ಬೆಳಗುವುದರ ಜತೆಗೆ ದೈನಂದಿನ ಜೀವನದ ಸಮಸ್ಯೆಗಳು, ಒತ್ತಡ, ಜಂಜಡಗಳನ್ನು ನಿವಾರಿಸಿ, ಎಲ್ಲರಿಗೂ ದಾರಿದೀಪವಾಗಲಿ.

– ಪೂರ್ಣಿಮಾ ಚೊಕ್ಕಾಡಿ
ಚೊಕ್ಕಾಡಿ ಆಂಗ್ಲ ಮಾಧ್ಯಮ ಶಾಲೆ, ಕುಕ್ಕುಜಡ್ಕ

Related posts

ನುಡಿನಮನ: ಸಮತೂಕದ, ಸಮಚಿತ್ತದ ವಿಮರ್ಶಕ ಜಿ.ಎಸ್‌. ಆಮೂರ

Upayuktha

ಮಾನವ ಜನ್ಮ ದೊಡ್ಡದು ಅದ ಹಾಳು ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರಾ

Upayuktha

ಹೊಟ್ಟೆ ಕರಗಿಸುವುದು ಹೇಗೆ? ಕರಗಿಸದಿದ್ದರೆ ಏನಾಗುತ್ತೆ ಗೊತ್ತಾ….?

Upayuktha