ಪ್ರಮುಖ ವಾಣಿಜ್ಯ

ಬೇಡಿಕೆ ಹೆಚ್ಚಳಕ್ಕೆ 73,000 ಕೋಟಿ ರೂಗಳ ಯೋಜನೆ; ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ

ಹೊಸದಿಲ್ಲಿ: ಆರ್ಥಿಕ ಅಭಿವೃದ್ಧಿಗಾಗಿ ಬೇಡಿಕೆಯನ್ನು ಹೆಚ್ಚಿಸುವ ಸುಮಾರು 73 ಸಾವಿರ ಕೋಟಿ ರೂಗಳ ಮಹತ್ವದ ಯೋಜನೆಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ಅವರು ಇಂದು ಹೊಸದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಾಜ್ಯಾದಾಯದ ಹೆಚ್ಚಳದ ದೃಷ್ಟಿಯುಳ್ಳ ಹಲವು ಯೋಜನಾ ಪ್ರಸ್ತಾಪಗಳ ಬಗ್ಗೆ ವಿವರಣೆ ನೀಡಿದರು.

ಪಾವತಿ ಪತ್ರ ಹಾಗೂ ಹಬ್ಬದ ಮುಂಗಡ ಪಾವತಿ ಯೋಜನೆಗಳು ಮತ್ತು ಲೀವ್ ಟ್ರಾವೆಲ್ಸ್ ಕನ್ಸೆಷನ್ ಗಳು ಗ್ರಾಹಕ ಬೇಡಿಕೆಯನ್ನು 36 ಸಾವಿರ ಕೋಟಿಗಳಷ್ಟು ಹೆಚ್ಚಿಸುವ ಗುರಿಯನ್ನು ಹೊಂದಿವೆ.ಈ ಮೊತ್ತವನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಭರಿಸಲಿವೆ ಎಂದು ನುಡಿದರು.

ಯೋಜನೆಗಳ ಬಗ್ಗೆ ವಿವರಿಸುತ್ತಾ 2018- 21 ರ ವರೆಗಿನ LTC ಯ ಬ್ಲಾಕ್ ಟರ್ಮ್ ನ ಬದಲಾಗಿ ಸರಕಾರಿ ಉದ್ಯೋಗಿಗಳಿಗೆ ಅವರ ಹತ್ತು ದಿನಗಳ ರಜೆಯ ಪಾವತಿ ಮತ್ತು ಪ್ರಯಾಣ ಭತ್ಯೆಗಾಗಿ ಈ ಹಣ ನೀಡಲಾಗಿವುದು. ಈ ಯೋಜನೆಯ ಲಾಭ ಪಡೆಯಲಿಚ್ಚಿಸುವವರು ತಮ್ಮ ಖರೀದಿಯ GST ಯ ವಿವರ ನೀಡಬೇಕು ಮತ್ತು ಇದು ತಮ್ಮ LTC ನಗದು ಹಾಗೂ ಪ್ರಯಾಣ ಭತ್ಯೆಯ ಮೂರುಪಟ್ಟು ಇರಬೇಕು ಎಂದರು.

ಈ ಬಡ್ಡಿ ರಹಿತ ಸಾಲವು 50 ವರ್ಷಗಳ ದೀರ್ಘಾವಧಿ ಸಾಲವಾಗಿದ್ದು ಸುಮಾರು ಹನ್ನೆರಡು ಸಾವಿರ ಕೋಟಿ ರೂಗಳ ಬಟವಾಡೆಗೆ ಕಾರಣವಾಗುತ್ತದೆ ಎಂದರು.

ಬೇಡಿಕೆ ಹೆಚ್ಚಿಸಲು 73,000 ಕೋಟಿ ರೂ.ಗಳ ಉತ್ತೇಜಕ ಕ್ರಮಗಳನ್ನು ಪ್ರಕಟಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

‘ಯೋಜನೆಯ ಪ್ರಕಾರ ಎರಡು ಸಾವಿರದ ಐನೂರು ಕೋಟಿ ರೂಗಳನ್ನು ಈಶಾನ್ಯ ರಾಜ್ಯಗಳು‌, ಹಿಮಾಚಲ ಪ್ರದೇಶ, ಹಾಗೂ ಉತ್ತರಖಾಂಡ್ ಗಳಿಗೆ ಹಾಗೂ ಏಳು ಸಾವಿರದ ಐನೂರು ಕೋಟಿ ರೂಗಳನ್ನು ಇತರ ರಾಜ್ಯಗಳಿಗೂ ನೀಡಲಾಗುವುದು ಎಂದರು. ಕೇಂದ್ರ ಸರಕಾರ ಹೆಚ್ಚುವರಿ ‌25 ಸಾವಿರ ಕೋಟಿರೂಗಳನ್ನು ಕೇಂದ್ರ ಸರಕಾರವು ರಸ್ತೆ, ರಕ್ಷಣಾ ವ್ಯವಸ್ಥೆ, ನೀರಾವರಿ ಮತ್ತು ನಗರಾಭಿವೃದ್ದಿಗಾಗಿ ಬಳಸಿಕೊಳ್ಳಲಾಗುವುದು ಎಂದರು.

Tags: Finance Minister, Nirmala Sitharaman, Demand boosting measures, Fiscal proposals, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಬೇಡಿಕೆ ಹೆಚ್ಚಳ ಯೋಜನೆ,

 

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

 

Related posts

‘ಕೈ’ಬಿಟ್ಟು ಕಮಲ ಹಿಡಿದ ಜ್ಯೋತಿರಾದಿತ್ಯ ಸಿಂಧಿಯಾ: ಮ.ಪ್ರ.ದಲ್ಲಿ ಬಿಜೆಪಿ ಸರಕಾರಕ್ಕೆ ಸಕಲ ಸಿದ್ಧತೆ

Upayuktha

ಸೋಮವಾರಪೇಟೆ: ಬೆಳ್ಳಂಬೆಳಗ್ಗೆ ಕಾಡಾನೆಗಳ ಹೆದ್ದಾರಿ ವಾಕಿಂಗ್, ಗ್ರಾಮಸ್ಥರಿಗೆ ಭೀತಿ

Upayuktha

ಐತಿಹಾಸಿಕ ಅಯೋಧ್ಯೆ ತೀರ್ಪು ಇಂದು ಪ್ರಕಟ: ದೇಶಾದ್ಯಂತ ಬಿಗಿ ಭದ್ರತೆ

Upayuktha

Leave a Comment