ನಗರ ಪ್ರಮುಖ ಸ್ಥಳೀಯ

ಪಚ್ಚನಾಡಿ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಬೆಂಕಿ: ದಟ್ಟ ಹೊಗೆ, ಮಾಲಿನ್ಯ, ಲಕ್ಷಾಂತರ ರೂ. ನಷ್ಟ

ಮಂಗಳೂರು: ನಗರದ ಹೊರವಲಯದ ಪಚ್ಚನಾಡಿಯಲ್ಲಿರುವ ಪ್ರಮುಖ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಭಾನುವಾರ ರಾತ್ರಿ ಬೆಂಕಿಬಿದ್ದು ಅಪಾರ ಪ್ರಮಾಣದ ತ್ಯಾಜ್ಯ ಹೊತ್ತಿ ಉರಿದಿದೆ. ಯಂತ್ರಗಳು ಬೆಂಕಿಗೆ ಆಹುತಿಯಾಗಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ಭಾರಿ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಸಂಸ್ಕರಣೆ ಮಾಡಿದ ತ್ಯಾಜ್ಯ ಸುಟ್ಟು ಹೋಗಿದೆ. ಪರಿಸರದಲ್ಲಿ ದಟ್ಟ ಹೊಗೆ ಆವರಿಸಿದೆ. ಮಾಹಿತಿ ಪಡೆದ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ತಿಳಿಸಿದ್ದು, ಪಾಲಿಕೆ ಅಧಿಕಾರಿಗಳ ಸೂಚನೆ ಮೇರೆಗೆ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.

ತ್ಯಾಜ್ಯಕ್ಕೆ ಬಿದ್ದಿರುವ ಬೆಂಕಿ ನಂದಿಸಲು ಕ್ರಮ ಕೈಗೊಳ್ಳುತ್ತಿದ್ದರೂ ಗಾಳಿಯಲ್ಲಿ ಸೇರುತ್ತಿರುವ ತ್ಯಾಜ್ಯಪೂರಿತ ಹೊಗೆ ಜನರಿಗೆ ಆತಂಕವನ್ನುಂಟು ಮಾಡಿದೆ. ಸದ್ಯ ಬೆಂಕಿ ಇತರೆಡೆಗಳಿಗೂ ಪಸರಿಸುತ್ತಿದೆ. ಇದರಿಂದ ಬೆಂಕಿಯ ಹತೋಟಿ ಸಾಧ್ಯವಾಗುತ್ತಿಲ್ಲ.

ಗಾಳಿ ಜೋರಾಗಿ ಬೀಸುವ ಕಡೆ ಹೊಗೆಯೂ ವ್ಯಾಪಿಸುತ್ತಿರುವ ಪರಿಣಾಮ ಪಚ್ಚನಾಡಿ, ಕುಡುಪು, ತಿರುವೈಲು, ಕುಲಶೇಖರ ವಾರ್ಡ್‌ನ ಕೆಲವು ಪ್ರದೇಶಗಳಲ್ಲಿ ಹೊಗೆ ಕಾಣಿಸಿಕೊಳ್ಳುತ್ತಿದೆ.

ಬೆಂಕಿಯ ಕೆನ್ನಾಲಿಗೆ ಆಕಾಶದೆತ್ತರಕ್ಕೆ ಚಿಮ್ಮುತ್ತಿದೆ. ಅಗ್ನಿಶಾಮಕ ದಳದೊಂದಿಗೆ ಸ್ಥಳೀಯರು ಟ್ಯಾಂಕರ್ ಮೂಲಕ ನೀರು ಹಾಯಿಸಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಪಾಲಿಕೆ ಕಮಿಷನರ್ ಅಕ್ಷಯ್ ಶ್ರೀಧರ್, ಪರಿಸರ ಅಭಿಯಂತರರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಕುಕ್ಕೆ ಸುಬ್ರಹ್ಮಣ್ಯ: ಅರ್ಚಕರ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಸಿಬಂದಿ ಅಮಾನತು

Upayuktha

ಕುಮಟಾ: ಮನೆಯೊಳಗೆ ಬಂದ ಕಾಳಿಂಗ ಸರ್ಪದ ರಕ್ಷಣೆ

Upayuktha

ಮಕ್ಕಳಿಗೆ ಆಟ ಪಾಠಗಳ ಜೊತೆಗೆ ಬದುಕುವ ಕಲೆಯನ್ನು ಕಲಿಸಿದಾಗಲೆ ಶಿಕ್ಷಣಕ್ಕೆ ಒಂದು ಅರ್ಥ ಬರುತ್ತದೆ: ಬಾಬು

Sushmitha Jain