ಅಪಘಾತ- ದುರಂತ ಸ್ಥಳೀಯ

ವಿಟ್ಲ ಪೇಟೆಯ ಸಮೀಪ ಅಗ್ನಿ ಅವಘಡ; 2 ಅಂಗಡಿಗೆ ಬೆಂಕಿ

ವಿಟ್ಲ: ಪೇಟೆಯ ‌ಸಮೀಪದಲ್ಲಿ ಬೆಳಗ್ಗಿನ ಜಾವ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಎರಡು ಅಂಗಡಿಗಳು ಹೊತ್ತಿ ಉರಿದ ಘಟನೆ ಅ. 20 ರಂದು ನಡೆದಿದೆ.

ವಿಟ್ಲದ ಪೇಟೆಯಲ್ಲಿ ಬಸ್ ನಿಲ್ದಾಣದ ಹತ್ತಿರ ವಿರುವ ಕೆಜೆ‌ ಟವರ್ಸ್ ಬಳಿಯ ಹಾರ್ಡ್‌ವೇರ್ ‌ಮತ್ತು ಪೈಂಟ್ ಅಂಗಡಿಗೆ ಬೆಂಕಿ ಹತ್ತಿಕೊಂಡ ಪರಿಣಾಮ ಬೆಂಕಿಯ ಉರಿಗೆ ಅಂಗಡಿ ಸುಟ್ಟು ಕರಕಲಾಗಿದೆ.

ಹಾಗೆಯೇ ಹತ್ತಿರದ ಬೇಕರಿ ಅಂಗಡಿಗೂ ಬೆಂಕಿ ಹರಡಿಕೊಂಡಿದೆ. ಹಾಗೂ ಸ್ಥಳೀಯರು ಘಟನೆ ಯ ಬಗ್ಗೆ ಅಂಗಡಿ ಮಾಲೀಕರಿಗೆ ಮಾಹಿತಿ ನೀಡಿದ್ದು, ಬೆಂಕಿ ನಂದಿಸುವಲ್ಲಿ ಸಹಕರಿಸಿದ್ದಾರೆ.

ಘಟನೆ ನಡೆದ ‌ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕದಳದವರು ಕಾರ್ಯಚರಣೆ ನಡೆಸಿದ್ದು , ಬೆಂಕಿ ಅವಘಡಕ್ಕೆ ಸರಿಯಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಈ‌ ಬಗ್ಗೆ‌ ವಿಟ್ಲ ಪೋಲಿಸರು ಸ್ಥಳಕ್ಕೆ ಬಂದು ಮಾಹಿತಿ ಪಡೆದು ಕೊಂಡಿದ್ದಾರೆ.

Related posts

ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ

Harshitha Harish

‘ತುಳುನಾಡ ಬಾಲೆ ಬಂಗಾರ್’ ಮುದ್ದು ಮಕ್ಕಳ ಭಾವಚಿತ್ರ ಸ್ಪರ್ಧೆಯ ಆಯ್ಕೆ ಪ್ರಕ್ರಿಯೆ ಸಂಪನ್ನ

Upayuktha

ಧರ್ಮಸ್ಥಳದಲ್ಲಿ ಯಶಸ್ವಿಯಾಗಿ ನೆರವೇರಿದ ‘ಪ್ರಾರ್ಥನಾ ಸಮಾವೇಶ’

Upayuktha