ನಿಮ್ಮೊಂದಿಗೆ

ನಿಮ್ಮೊಂದಿಗೆ: ಮೊದಲ ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಉಪಯುಕ್ತ ನ್ಯೂಸ್’

ಪಾಸಿಟಿವ್ ಸುದ್ದಿಗಳು; ಭರವಸೆಯ ನಾಳೆಗಳು ಎಂಬ ಧ್ಯೇಯದೊಂದಿಗೆ ಹುಟ್ಟಿಕೊಂಡ ಡಿಜಿಟಲ್ ಮಾಧ್ಯಮ ಉಪಯುಕ್ತ ನ್ಯೂಸ್‌ ಸೆಪ್ಟೆಂಬರ್ 16ಕ್ಕೆ ಯಶಸ್ವಿಯಾಗಿ ಮೊದಲ ವರ್ಷವನ್ನು ಪೂರೈಸುತ್ತಿದೆ.

ಈ ಒಂದು ವರ್ಷದ ಅವಧಿಯಲ್ಲಿ ಯಾವ ವಿಷಯಗಳಿಗೆ ಆದ್ಯತೆ ನೀಡಬೇಕು, ಸಕಾರಾತ್ಮಕ ವಿಷಯಗಳನ್ನೇ ಪ್ರಸ್ತುತಪಡಿಸಿ ಜನಪ್ರಿಯತೆ ಪಡೆಯಬಹುದು ಎಂಬುದಕ್ಕೆ ಉಪಯುಕ್ತ ನ್ಯೂಸ್ ಈ ಒಂದು ವರ್ಷದಲ್ಲಿ ಸಾಗಿಬಂದ ಹಾದಿಯೇ ಸಾಕ್ಷಿ. ಮೊದಲ ದಿನ ಕೇವಲ 200 ಜನ ಓದುಗರಿಂದ ಆರಂಭವಾದ ಈ ಯಾತ್ರೆಯಲ್ಲಿ ಇದುವರೆಗೆ 9.50 ಲಕ್ಷಕ್ಕೂ ಅಧಿಕ ಪೇಜ್ ವ್ಯೂಸ್‌ ದಾಖಲಾಗಿದೆ.

ಸಾಂಪ್ರದಾಯಿಕತೆ ಮತ್ತು ಆಧುನಿಕತೆ ಎರಡನ್ನೂ ಸರಿಯಾದ ಸಮತೋಲನದೊಂದಿಗೆ ಮೈಗೂಡಿಸಿಕೊಂಡು, ಈ ಒಂದು ವರ್ಷದಲ್ಲಿ ಕಟ್ಟಿರುವ ಬುನಾದಿಯ ಮೇಲೆಯೇ ಮುಂದುವರಿಯುವ ಭರವಸೆಯನ್ನು ಉಪಯುಕ್ತ ನ್ಯೂಸ್‌ ಈ ಸಂದರ್ಭದಲ್ಲಿ ಓದುಗರ ಮುಂದೆ ಪುನರುಚ್ಚರಿಸುತ್ತದೆ.

ಎಲ್ಲ ಮಾಧ್ಯಮಗಳಂತೆ ಡಿಜಿಟಲ್‌ ಮಾಧ್ಯಮಗಳಿಗೂ ಜಾಹೀರಾತುಗಳೇ ಆದಾಯದ ಮೂಲ. ಓದುಗರಿಗೆ ಉಚಿತವಾಗಿಯೇ ಎಲ್ಲ ಮಾಹಿತಿಗಳನ್ನೂ ಒದಗಿಸುವ ಡಿಜಿಟಲ್‌ ಮಾಧ್ಯಮಗಳಿಗೆ ಜಾಹೀರಾತು ನೀಡಿ ಪ್ರೋತ್ಸಾಹಿಸುವವರೇ ಆಧಾರ. ಹಾಗೆಂದು ಜಾಹೀರಾತಿಗಾಗಿಯೇ ತಾನು ನಂಬಿದ ಧ್ಯೇಯಗಳಿಂದ ದಿಕ್ಕು ಬದಲಿಸುವ ಚಂಚಲತೆ ಉಪಯುಕ್ತ ನ್ಯೂಸ್‌ಗೆ ಇಲ್ಲ.

ಇದುವರೆಗೆ ಓದಿ ಮೆಚ್ಚಿಕೊಂಡು ಜನಮಾನಸದ ಮುಂದೆ ಹಂಚಿಕೊಂಡು ಉಪಯುಕ್ತ ನ್ಯೂಸ್‌ಗೆ ಒಂದು ಸ್ಪಷ್ಟ ಅಸ್ಮಿತೆ (ಐಡೆಂಟಿಟಿ) ಯನ್ನು ತಂದುಕೊಟ್ಟ ಎಲ್ಲ ಓದುಗ ಬಂಧುಗಳಿಗೂ ಹೃತ್ಪೂರ್ವಕ ಕೃತಜ್ಞತೆಗಳು.

ಜಾಹೀರಾತುಗಳನ್ನು ನೀಡಿ ಪ್ರೋತ್ಸಾಹಿಸಿದ ಹಿತೈಷಿಗಳಿಗೆ ವಂದನೆಗಳು.

ಪ್ರಗತಿಯ ಹಾದಿಯಲ್ಲಿ ಉಪಯುಕ್ತ ನ್ಯೂಸ್‌:

ಉಪಯುಕ್ತ ನ್ಯೂಸ್‌ ಡಿಜಿಟಲ್‌ ಮಾಧ್ಯಮವನ್ನು ಆರಂಭಿಸಿ ಮುನ್ನಡೆಸುವ ವೇಳೆ ಹಲವು ಅಡೆತಡೆಗಳು ಎದುರಾದರೂ ಛಲಬಿಡದೆ ಇದುವರೆಗೆ ಸಾಗಿ ಬಂದಿದೆ. ಪ್ರಧಾನವಾದ ಡಿಜಿಟಲ್‌ ಮಾಧ್ಯಮ ಉಪಯುಕ್ತ ನ್ಯೂಸ್ ಜತೆಗೆ ಪಾಡ್‌ಕಾಸ್ಟ್‌.ಉಪಯುಕ್ತ.ಕಾಮ್ ಕೂಡ ಸೇರಿಕೊಂಡಿದೆ. ಉಪಯುಕ್ತ ನ್ಯೂಸ್‌ನದ್ದೇ ಧ್ಯೇಯಗಳ ಚೌಕಟ್ಟಿನಲ್ಲಿ ಇದು ಪ್ರತ್ಯೇಕ ಐಡೆಂಟಿಟಿಯೊಂದಿಗೆ ಕಾರ್ಯನಿರ್ವಹಿಸುತ್ತದೆ.

ಶೀಘ್ರವೇ ಉಪಯುಕ್ತ ನ್ಯೂಸ್‌ ಬಳಗಕ್ಕೆ ಇನ್ನೊಂದು ಹೊಸ ಸದಸ್ಯ ಸೇರ್ಪಡೆಯಾಗಲಿದೆ. ಅದರ ರೂಪು-ರೇಷೆಗಳು ಸಿದ್ಧವಾಗುತ್ತಿವೆ.

ಈ ಸಂದರ್ಭದಲ್ಲಿ ಎಲ್ಲರಿಗೂ ಮತ್ತೊಮ್ಮೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸೂಚಿಸುತ್ತೇವೆ.
ಸಂಪಾದಕರು  
ಉಪಯುಕ್ತ ನ್ಯೂಸ್ ಡಿಜಿಟಲ್ ಮಾಧ್ಯಮ

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ವರ್ಷದ ಆಫರ್‌: ಸ್ಕ್ರೋಲಿಂಗ್ ಜಾಹೀರಾತು ನೀಡಿ, ಅತಿ ಕಡಿಮೆ ದರದಲ್ಲಿ ಲಕ್ಷಾಂತರ ಜನರನ್ನು ತಲುಪಿ…

Upayuktha

Leave a Comment

error: Copying Content is Prohibited !!