ದೇಶ-ವಿದೇಶ ಪ್ರಮುಖ

ಇದೇ ಮೊದಲು: ಜಮ್ಮು-ಕಾಶ್ಮೀರ ಹೈಕೋರ್ಟ್‌ ನೇಮಕಾತಿಗೆ ದೇಶದೆಲ್ಲೆಡೆಯಿಂದ ಅರ್ಜಿ ಆಹ್ವಾನ

ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ (ಚಿತ್ರ ಕೃಪೆ: ದಿ ಹಿಂದೂ)

ಶ್ರೀನಗರ:

370ನೇ ವಿಧಿ, 35 ಎ ವಿಧಿಗಳು ರದ್ದಾದ ಬಳಿಕ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್33 ನಾನ್-ಗಜೆಟೆಡ್ ಹುದ್ದೆಗಳಿಗೆ ಇದೇ ಮೊದಲ ಬಾರಿಗೆ ಭಾರತದಾದ್ಯಂತ ಎಲ್ಲೆಡೆಯಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಈ ಹುದ್ದೆಗಳನ್ನು ಕಾಶ್ಮೀರ ಮತ್ತು ಲಡಾಖ್ ‘ಕಾಯಂ ನಿವಾಸಿಗಳಿಗೆ’ ಮಾತ್ರ ಸೀಮಿತಗೊಳಿಸದೆ ಅರ್ಹತೆಯನ್ನು ದೇಶದ ಎಲ್ಲರಿಗೂ ವಿಸ್ತರಿಸುವ ಮೂಲಕ ನೇಮಕಾತಿ ನಡೆಸುತ್ತಿರುವ ಮೊದಲ ನಿದರ್ಶನ ಇದಾಗಿದೆ.

ಸ್ಟೆನೋಗ್ರಾಫರ್‌ಗಳು, ಟೈಪಿಸ್ಟ್‌ಗಳು ಮತ್ತು ಡ್ರೈವರ್‌ಗಳು- ಈ ಹುದ್ದೆಗಳಿಗೆ ದೇಶದ ಯಾವನೇ ಪ್ರಜೆ ಖಾಲಿಯಿರುವ ಒಂದು ಹುದ್ದೆಗೆ ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಆಯ್ಕೆ ಪ್ರಕ್ರಿಯೆಯು 2005ರ ಜಮ್ಮು ಮತ್ತು ಕಾಶ್ಮೀರ ಮೀಸಲಾತಿ ನಿಯಮಗಳ ಅನುಸಾರ ನಡೆಸಲಾಗುತ್ತದೆ.

ಇಂತಹ 33 ಹುದ್ದೆಗಳ ನೇಮಕಾತಿಗಾಗಿ ಜಾಹೀರಾತುಗಳನ್ನು ಪ್ರಕಟಿಸಲಾಗಿದೆ. ಅವುಗಳ ಪೈಕಿ 17 ಹುದ್ದೆಗಳಿಗೆ ‘ಓಂ’ (OM- Open Merit) ಆಧಾರದಲ್ಲಿ ನೇಮಕ ಮಾಡಲಾಗುತ್ತದೆ. ಜಮ್ಮು-ಕಾಶ್ಮೀರದ ಹೊರಗಿನ ಯಾರಾದರೂ ಈ ಹುದ್ದೆಗಳಿಗೆ ಆಯ್ಕೆಯಾಗಬಹುದು.

ಕಾಶ್ಮೀರದಲ್ಲಿ ಹುದ್ದೆಗಳ ನೇಮಕಾತಿ ನಡೆಸುವ ವೇಳೆ ಈ ಹಿಂದೆ ಕಾಶ್ಮಿರಿ ನಿವಾಸಿಗಳಿಗೆ ಎಂದು ಮೀಸಲಾಗಿದ್ದ ಹುದ್ದೆಗಳನ್ನು ದೇಶದ ಎಲ್ಲ ನಿವಾಸಿಗಳಿಗೆ ಮುಕ್ತಗೊಳಿಸುವಂತೆ ಬಿಜೆಪಿಯ ಹಲವು ರಾಜ್ಯ ಘಟಕಗಳು ಕೇಂದ್ರ ನಾಯಕರಿಗೆ ಮನವಿ ಸಲ್ಲಿಸಿದ್ದವು. ಜಮ್ಮು ಮತ್ತು ಕಾಶ್ಮೀರದಲ್ಲಿ ಕನಿಷ್ಠ 15-20 ವರ್ಷ ನೆಲೆಸಿದವರಿಗೆ ಅಲ್ಲಿನ ಕಾಯಂ ನಿವಾಸಿ ಸ್ಥಾನಮಾನ ನೀಡುವ ಬಗ್ಗೆಯೂ ಗಮನ ಹರಿಸಬೇಕು ಎಂದು ಒತ್ತಾಯಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಹುದ್ದೆಗಳಿಗೆ ನೇಮಕಾತಿ ನಡೆಸುವಾಗ ಎಸ್‌ಸಿ, ಎಸ್‌ಟಿ ಮತ್ತು ಓಬಿಸಿ ಕೆಟಗರಿಗಳಿಗೆ ಮಾತ್ರ ಮೀಸಲಾತಿ ನೀಡದೆ ಅಲ್ಲಿನ ಕಾಯಂ ನಿವಾಸಿಯಾದ ಯಾವನೇ ಪ್ರಜೆ ಅರ್ಜಿ ಸಲ್ಲಿಸಹುದೆಂಬ ಮೀಸಲಾತಿ ತಿದ್ದುಪಡಿ ತರಬೇಕು ಎಂದು ಜಮ್ಮು ಬಿಜೆಪಿ ಘಟಕ ಒತ್ತಾಯಿಸಿದೆ.

ಹೊಸದಾಗಿ ರಚಿಸಲಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿರದ ಅಭ್ಯರ್ಥಿಗಳು ಜಾಹೀರಾತು ಪ್ರಕಟಿಸಾದ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಜಮ್ಮು ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ. ಕಾಶ್ಮೀರ ಮತ್ತು ಲಡಾಖ್ ಒಳಗಿನ ನಿವಾಸಿಗಳು ಆಯಾ ಜಿಲ್ಲೆಗಳ ಮುಖ್ಯ ನ್ಯಾಯಾಧೀಶರ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

Related posts

ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಶ್ರೀಕೃಷ್ಣನಲ್ಲಿ ಲೀನ

Upayuktha

ಉ.ಪ್ರದೇಶ: ಮನೆಯೊಂದರಲ್ಲಿ ಅಗ್ನಿ ಅವಘಡ; ನಾಲ್ವರು ಸಜೀವ ದಹನ

Harshitha Harish

ಡ್ರೈವಿಂಗ್ ವೇಳೆ ದಿಕ್ಸೂಚಿಗಾಗಿ ಮಾತ್ರ ಮೊಬೈಲ್ ಬಳಕೆಗೆ ಅನುಮತಿ: ಅ. 1ರಿಂದ ಜಾರಿ

Upayuktha