ಬಾಲಿವುಡ್

ಓಂ ಹಿಂದಿ ಸಿನಿಮಾದ ಫಸ್ಟ್ ಲುಕ್ ರಿಲೀಸ್

ಬೆಂಗಳೂರು:  ‘ಓಂ’ ಸಿನಿಮಾ ಎಂದರೆ ಸಾಕು ನಮ್ಮ ಕಣ್ಣ ಮುಂದೆ ಬರುವುದು

ಶಿವರಾಜ್ ಕುಮಾರ್ ಮತ್ತು ಉಪೇಂದ್ರ ರವರು ಸ್ಯಾಂಡಲ್ ವುಡ್ ನಲ್ಲಿ ದಾಖಲೆ ಬರೆದ ಸಿನಿಮಾ ಓಂ.

ಚಿತ್ರದಲ್ಲಿ ಶಿವಣ್ಣನ ಅರ್ಭಟಕ್ಕೆ ಇಡೀ ಕನ್ನಡ ಸಿನಿಮಾರಂಗ ಖುಷಿ ಪಟ್ಟಿದ್ದು, ಇದೀಗ ಓಂ ಸಿನಿಮಾ ಬಾಲಿವುಡ್ ನಲ್ಲಿ ಸದ್ದು ಮಾಡುತ್ತಿದೆ. ಹಾಗಂತ ಇದು ಸ್ಯಾಂಡಲ್ ವುಡ್ ಓಂ ಸಿನಿಮಾವಲ್ಲ.

ಹಿಂದಿಯಲ್ಲಿ ಓಂ ಎನ್ನುವ ಹೊಸ ಸಿನಿಮಾ ತಯಾರಾಗಿದ್ದು, ಆದಿತ್ಯ ರಾಯ್ ಕಪೂರ್ ನಾಯಕನಾಗಿ ನಟಿಸುತ್ತಿದ್ದಾರೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು, ಅಭಿಮಾನಿಗಳ ನಿದ್ದೆ ಗೆಡಿಸಿದೆ.

ಪೋಸ್ಟರ್ ನಲ್ಲಿ ಆದಿತ್ಯ ಬಂದೂಕು ಹಿಡಿದು ರಗಡ್ ಅ್ಯಂಡ್ ರಾ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.  ಚಿತ್ರದಲ್ಲಿ ನಾಯಕಿಯಾಗಿ ಸುಶಾಂತ್ ಸಿಂಗ್ ಸಿನಿಮಾದ ನಾಯಕಿ ಸಂಜನಾ ಸಂಘಿ ಕಾಣಿಸಿಕೊಳ್ಳುತ್ತಿದ್ದಾರೆ.

ದಿಲ್ ಬೆಚಾರ ಸಿನಿಮಾ ಮೂಲಕ ಅಭಿಮಾನಿಗಳ ಗಮನಸೆಳೆದಿದ್ದ ಸಂಜನಾ ಇದೀಗ ಓಂ ಸಿನಿಮಾ ಮೂಲಕ ಎರಡನೇ ಬಾರಿ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಓಂ ಅಹ್ಮದ್ ಖಾನ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ದೊಡ್ಡ ಬಜೆಟ್ ನಲ್ಲಿ ಈ ಸಿನಿಮಾ ತಯಾರಾಗುತ್ತಿದ್ದು, ಚಿತ್ರದ ಮೇಲೆ ನಿರೀಕ್ಷೆ ಸಾಕಷ್ಟಿದೆ.

ಆಕ್ಷನ್ ಮತ್ತು ಲವ್ ಎರಡೂ ಹೊಂದಿದ ಓಂ ಸಿನಿಮಾದಲ್ಲಿ ಸಂಜನಾ ಸಾಕಷ್ಟು ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಓಂ ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದ್ದು, ಹೆಚ್ಚಿನ ಚಿತ್ರೀಕರಣ ಕೊನೆಗೊಂಡಿದ್ದು, ಬಾಲಿವುಡ್ ನ ನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿರುವ ಓಂ ಮುಂದಿನ ವರ್ಷ ಸಮ್ಮರ್ ಗೆ ರಿಲೀಸ್ ಆಗುತ್ತಿದೆ.

Related posts

ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಪ್ರತಿಷ್ಠಿತ ಪ್ರಶಸ್ತಿ ಗೆ ಭಾಜನ

Harshitha Harish

ಬಾಲಿವುಡ್ ಸಾರ್ವಕಾಲಿಕ ಗಾಯಕ ಪಂಕಜ್ ಕುಮಾರ್ ಮಲ್ಲಿಕ್

Upayuktha

ಬಾಲಿವುಡ್ ನಟಿ ಕೃತಿ ಸನೊನ್‌ಗೆ ಕೋವಿಡ್ ನೆಗೆಟಿವ್

Harshitha Harish