ದೇಶ-ವಿದೇಶ ನಿಧನ ಸುದ್ದಿ ಪ್ರಮುಖ

ಆರ್‌ಎಸ್‌ಎಸ್‌ನ ಮೊದಲ ಅಧಿಕೃತ ವಕ್ತಾರರಾಗಿದ್ದ ಎಂಜಿ ವೈದ್ಯ ಇನ್ನಿಲ್ಲ

ನಾಗ್ಪುರ: ಹಿರಿಯ ಪತ್ರಕರ್ತ, ಸಂಸ್ಕೃತ ವಿದ್ವಾಂಸ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಥಮ ಅಧಿಕೃತ ವಕ್ತಾರರಾಗಿದ್ದ ಮಾಧವ ಗೋವಿಂದ ವೈದ್ಯ (ಎಂಜಿ ವೈದ್ಯ) ಅವರು ನಿಧನ ಹೊಂದಿದ್ದಾರೆ. ಅಲ್ಪಕಾಲ ಅಸೌಖ್ಯದಿಂದಾಗಿ ನಾಗ್ಪುರದ ಸ್ಪಂದನ್ ಆಸ್ಪತ್ರೆಗೆ ದಾಖಲಾಗಿದ್ದ 97 ವರ್ಷ ವಯಸ್ಸಿನ ವೈದ್ಯ ಅವರು ಶನಿವಾರ ಸಂಜೆ ಕೊನೆಯುಸಿರೆಳೆದರು.

ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿದ್ದ ಎಂಜಿ ವೈದ್ಯ ಅವರು ಇತ್ತೀಚೆಗಷ್ಟೇ ಅದರಿಂದ ಗುಣಮುಖರಾಗಿದ್ದರು. ಆದರೆ ದೇಹಾರೋಗ್ಯ ಸುಧಾರಿಸಲಿಲ್ಲ. ಶನಿವಾರ ಆರೋಗ್ಯ ತೀವ್ರವಾಗಿ ಹದಗೆಟ್ಟಿತು ಎಂದು ಅವರ ಮೊಮ್ಮಗ ವಿಷ್ಣು ವೈದ್ಯ ಅವರು ತಿಳಿಸಿದರು. ನಾಗ್ಪುರದ ಅಂಬಾಝರಿ ಘಾಟ್‌ನಲ್ಲಿ ಭಾನುವಾರ ಅಂತ್ಯಸಂಸ್ಕಾರ ನಡೆಯಲಿದೆ.

ಕೊನೆಯ ದಿನಗಳವರೆಗೂ ಆರ್‌ಎಸ್ಎಸ್‌ನಲ್ಲಿ ಸಕ್ರಿಯರಾಗಿದ್ದ ಎಂಜಿ ವೈದ್ಯ ಅವರು ಸಂಘದ ಸಂಸ್ಥಾಪಕ ಡಾ.ಕೇಶವ ಬಲಿರಾಂ ಹೆಡಗೇವಾರ್ ಸಹಿತ ಎಲ್ಲಾ 6 ಮಂದಿ ಸರಸಂಘಚಾಲಕರನ್ನು ಕಂಡವರಾಗಿದ್ದರು. ವೈದ್ಯ ಅವರು ಅಖಿಲ ಭಾರತೀಯ ಬೌದ್ಧಿಕ ಪ್ರಮುಖ್, ಅಖಿಲ ಭಾರತೀಯ ಪ್ರಚಾರ ಪ್ರಮುಖ್, ಅಖಿಲ ಭಾರತೀಯ ಪ್ರವಕ್ತ (ವಕ್ತಾರ)ರಾಗಿ ಸೇವೆ ಸಲ್ಲಿಸಿದ್ದರು. ತರುಣ ಭಾರತ್ ಪತ್ರಿಕೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದರು.

ಇವರ ಇಬ್ಬರು ಪುತ್ರರೂ ಆರ್‌ಎಸ್‌ಎಸ್‌ನಲ್ಲಿ ಸಕ್ರಿಯರಾಗಿದ್ದು, ಒಬ್ಬ ಪುತ್ರ ಡಾ.ಮನಮೋಹನ್ ಮಾಧವ ವೈದ್ಯ ಸಹಸರಕಾರ್ಯವಾಹರಾಗಿದ್ದರೆ, ಇನ್ನೊಬ್ಬ ಪುತ್ರ ರಾಮ ವೈದ್ಯ ವಿಶ್ವ ವಿಭಾಗದಲ್ಲಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ದೇಶದ ಪ್ರಗತಿಗೆ ಎಂಎಸ್‌ಎಂಇ ವಲಯ ಮಹತ್ವದ ಕೊಡುಗೆ ನೀಡಬಲ್ಲುದು: ಸಚಿವ ಪ್ರತಾಪ್ ಚಂದ್ರ ಸಾರಂಗಿ

Upayuktha

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಕೊರೊನಾ ಪಾಸಿಟಿವ್

Harshitha Harish

ಒಂದೇ ದಿನ 14 ರಾಷ್ಟ್ರಗಳಲ್ಲಿ ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆ

Upayuktha