ಅಪಘಾತ- ದುರಂತ ಜಿಲ್ಲಾ ಸುದ್ದಿಗಳು

ಮಂಗಳೂರು; ಮೀನು ಹಿಡಿಯಲು ಹರಡುತ್ತಿದ್ದ ಬಲೆಗೆ ಮೀನುಗಾರನೋರ್ವ ಸಿಲುಕಿ ಸಾವು

ಮಂಗಳೂರು: ಮೀನು ಹಿಡಿಯಲು ಹರಡುತ್ತಿದ್ದ ಬಲೆಗೆ ಮೀನುಗಾರನೋರ್ವ ಸಿಲುಕಿಕೊಂಡು ಮೃತಪಟ್ಟ ಘಟನೆ ಭಾನುವಾರ ಬೈಕಂಪಾಡಿ ಬಳಿ ಸಮುದ್ರದಲ್ಲಿ ನಡೆದಿದೆ.

ಬೈಕಂಪಾಡಿಯ ಹೊಸಹಿತ್ಲು ನಿವಾಸಿ ನವೀನ್ ಕರ್ಕೇರ(32) ವರ್ಷದ ಮೃತ ದುರ್ದೈವಿ. ನವೀನ್ ಸಮುದ್ರದಲ್ಲಿ ಸ್ವಲ್ಪ ದೂರ ಸಾಗಿ ಮೀನಿಗೆ ಬಲೆ ಹಾಕುತ್ತಿದ್ದರು. ಈ ವೇಳೆಯಲ್ಲಿ ಬಲೆಗೆ ಕಾಲು ಬೆರಳು ಸಿಲುಕಿದ್ದು ನವೀನ್ ನೀರಿಗೆ ಬಿದ್ದು ಮುಳುಗಿದ್ದಾರೆ. ನುರಿತ ಈಜುಗಾರರಾಗಿದ್ದರೂ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದರಿಂದ ನೀರಿನಲ್ಲಿ ಈಜಿ ದಡ ಸೇರಲು ಸಾಧ್ಯವಾಗದೆ ನವೀನ್ ಮೃತಪಟ್ಟಿದ್ದಾರೆ.

ನವೀನ್ ಪೋಷಕರಿಗೆ ನಾಲ್ವರು ಮಕ್ಕಳಿದ್ದು ತಂದೆ ಮೃತರಾಗಿದ್ದು ಅವರ ಮೂವರು ಸಹೋದರರು ಕೂಡ ದುರಂತವೊಂದರಲ್ಲಿ ಸಾವನ್ನಪ್ಪಿದ್ದಾರೆ.

ಓರ್ವ ಸಹೋದರ ಮಡಿಕೇರಿಯಲ್ಲಿ ಅಪಘಾತಕ್ಕೀಡಾಗಿದ್ದು, ಇನ್ನೋರ್ವರು ಆತ್ಮಹತ್ಯೆ ಮಾಡಿಕೊಂಡಿದ್ದು, ಮೂರನೇಯ ಸಹೋದರ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಈಗ ನವೀನ್ ಕೂಡ ಮೃತಪಟ್ಟದ್ದರಿಂದ ಇದೀಗ ಅವರ ತಾಯಿ ಒಬ್ಬಂಟಿಯಾಗಿದ್ದಾರೆ.

 

Related posts

ಕೋವಿಡ್: ಆರೋಗ್ಯ ಕಾರ್ಯಕರ್ತರಿಗೆ ತರಬೇತಿ

Upayuktha

ಅಧಿಕ ವಿದ್ಯುತ್ ಬಿಲ್ ದೂರು: ಮೆಸ್ಕಾಂ ತ್ವರಿತ ಸ್ಪಂದನೆಗೆ ಸಚಿವ ಕೋಟ ಸೂಚನೆ

Upayuktha

ಮಂಡ್ಯ ಚುನಾವಣೆಯ ಕೃತಿ ‘ಮತಭಿಕ್ಷೆ’ ಶೀಘ್ರ ಬಿಡುಗಡೆ

Upayuktha