
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಾವು ಯೋಗಾಭ್ಯಾಸ ಮಾಡುತ್ತಿರುವ 3ಡಿ ಅನಿಮೇಟೆಡ್ ವೀಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಯಾವ ರೀತಿ ಫಿಟ್ ಆಗಿರಬಹುದು ಎಂದು ಹೇಳಿದ್ದಾರೆ.
‘ನಿನ್ನೆ ಪ್ರಸಾರವಾದ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ, ಈ ಸಂದರ್ಭದಲ್ಲಿ ನಾವು ದೈನಂದಿನ ಬದುಕಿನಲ್ಲಿ ಫಿಟ್ ಆಗಿರುವುದು ಹೇಗೆ ಎಂದು ಯಾರೋ ಒಬ್ಬರು ಪ್ರಶ್ನಿಸಿದ್ದರು. ಹಾಗಾಗಿ, ಈ ಯೋಗಾಭ್ಯಾಸದ ವೀಡಿಯೋವನ್ನು ಹಂಚಿಕೊಳ್ಳುತ್ತಿದ್ದೇನೆ’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
‘ನೀವೂ ಸಹ ಜಾಗರೂಕತೆಯಿಂದ ಯೋಗಾಭ್ಯಾಸ ಶುರು ಮಾಡುವಿರಿ ಎಂದು ಭಾವಿಸಿದ್ದೇನೆ’ ಎಂದು ಮೋದಿ ಬರೆದಿದ್ದಾರೆ.
I am neither a fitness expert nor a medical expert. Practising Yoga has been an integral part of my life for many years and I have found it beneficial. I am sure many of you also have other ways of remaining fit, which you also must share with others.
— Narendra Modi (@narendramodi) March 30, 2020
ಭಾನುವಾರ ರೇಡಿಯೋದಲ್ಲಿ ಪ್ರಸಾರವಾದ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ, ದೇಶವೇ ಲಾಕ್ಡೌನ್ ಆಗಿರುವ ಸ್ಥಿತಿಯಲ್ಲೂ ನೀವು ನಿಮ್ಮ ಫಿಟ್ನೆಸ್ ಅನ್ನು ಹೇಗೆ ಕಾಯ್ದುಕೊಳ್ಳುತ್ತೀರಿ ಎಂದು ಕೇಳುಗರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರವಾಗಿ ‘ಯೋಗ ವಿತ್ ಮೋದಿ’ ವೀಡಿಯೋಗಳನ್ನು ಪ್ರಧಾನಿ ಹಂಚಿಕೊಂಡಿದ್ದಾರೆ.
‘ನಾನು ಫಿಟ್ನೆಸ್ ತಜ್ಞನಲ್ಲ. ನಾನು ಯೋಗ ಶಿಕ್ಷಕನೂ ಅಲ್ಲ. ನಾನೊಬ್ಬ ಕೇವಲ ಯೋಗಾಭ್ಯಾಸಿ ಅಷ್ಟೆ. ಕೆಲವು ಯೋಗಾಸನಗಳು ನನಗೆ ಅತ್ಯುತ್ತಮ ಫಲ ನೀಡಿವೆ. ಇಲ್ಲಿರುವ ಕೆಲವು ಟಿಪ್ಸ್ ನಿಮಗೆ ಪ್ರಯೋಜನಕಾರಿಯಾಗಬಹುದು ಎಂದು ಭಾವಿಸಿದ್ದೇನೆ’ ಎಂದು ಮೋದಿ ಹೇಳಿದ್ದಾರೆ.
ಕಳೆದ ವರ್ಷದ ಜೂನ್ನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರನೆ ಸಂದರ್ಭದಲ್ಲೂ ಪ್ರಧಾನಿ ಮೋದಿ ಅವರು ಇಂತಹದೇ ಯೋಗಾಭ್ಯಾಸ ವೀಡಿಯೋಗಳನ್ನು ಹಂಚಿಕೊಂಡು ಜನತೆಗೆ ಯೋಗಾಸನಗಳನ್ನು ಅಭ್ಯಾಸ ಮಾಡುವಂತೆ ಕರೆ ನೀಡಿದ್ದರು.
(ಉಪಯುಕ್ತ ನ್ಯೂಸ್)
ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ