ಅಪಘಾತ- ದುರಂತ ದೇಶ-ವಿದೇಶ

ಆಂಬ್ಯುಲೆನ್ಸ್ ಅಪಘಾತ: ಐವರು ಸಾವು

ಭಡೋಯ್: ಜಿಲ್ಲೆಯ ಗೋಪಿಗಂಜ್ ಪೊಲೀಸ್ ಠಾಣೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಬೆಳಿಗ್ಗೆ ಮೃತದೇಹವನ್ನು ಸಾಗಿಸುತ್ತಿದ್ದ ಆಂಬ್ಯುಲೆನ್ಸ್‌ ಅಪಘಾತಕ್ಕೀಡಾಗಿ ವಾಹನದಲ್ಲಿದ್ದ ಐದು ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಭೀಕರ ಘಟನೆಯೊಂದು ನಡೆದಿದೆ.

ವಾರಾಣಸಿ-ಪ್ರಯಾಗರಾಜ್ ಹೆದ್ದಾರಿಯಲ್ಲಿ ಅಮಾವಾ ಅಂಡರ್‌ಪಾಸ್ ಬಳಿ ನಿಂತಿದ್ದ ಟ್ರಕ್‌ಗೆ ಆಂಬ್ಯುಲೆನ್ಸ್ ಡಿಕ್ಕಿ ಹೊಡೆದಿದೆ. ದಟ್ಟ ಮಂಜಿನಿಂದ ಕೂಡಿರುವುದರಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಂಬ್ಯುಲೆನ್ಸ್ ಮೃತದೇಹವನ್ನು ಪಶ್ಚಿಮ ಬಂಗಾಳದ ಅಸನ್ಸೋಲ್‌ನಿಂದ ರಾಜಸ್ಥಾನದ ಚಿತ್ತೋರ್‌ಗಢಕ್ಕೆ ಸಾಗಿಸುತ್ತಿತ್ತು.

ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ನಲ್ಲಿ ಕೆಲಸ ಮಾಡುತ್ತಿದ್ದ ವಿಪಿನ್ ಪಾಲ್ ಸಿಂಗ್ (30) ಅವರ ಮೃತದೇಹವನ್ನು ಅವರ ಹಿರಿಯ ಸಹೋದರ ನವನೀತ್ ಸಿಂಗ್ ಮತ್ತು ಅವರ ಸ್ನೇಹಿತ ರಾಜ್‍ವೀರ್ ಮತ್ತು ಇನ್ನಿಬ್ಬರು ಸಾಗಿಸುತ್ತಿದ್ದರು.

ಚಾಲಕ ಸೇರಿದಂತೆ ಆಂಬುಲೆನ್ಸ್‌ನಲ್ಲಿದ್ದ ಎಲ್ಲ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ

 

Related posts

ಮಹಾರಾಷ್ಟ್ರದಲ್ಲಿ ಕೋವಿಡ್ 2ನೇ ಅಲೆ ಭೀತಿ: 225 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್

Sushmitha Jain

ಲಡಾಖ್‌ನಲ್ಲಿ ಚೀನಾ ಜತೆ ಗಡಿ ಸಂಘರ್ಷ: 20 ಭಾರತೀಯ ಯೋಧರು ಹುತಾತ್ಮ, 43 ಚೀನೀ ಸೈನಿಕರು ಹತ

Upayuktha

ಪೌರತ್ವ ಕಾಯ್ದೆ ವಿಚಾರದಲ್ಲಿ ದೇಶಕ್ಕೆ ಬೆಂಕಿ ಹಚ್ಚಲು ಕಾಂಗ್ರೆಸ್ ಯತ್ನ: ಪ್ರಧಾನಿ ಆರೋಪ

Upayuktha