ದೇಶ-ವಿದೇಶ ಪ್ರಮುಖ

ಕಾಶ್ಮೀರದ ಕುಲ್ಗಾಂನಲ್ಲಿ ಉಗ್ರರ ದಾಳಿ: ಐವರು ವಲಸಿಗ ಕಾರ್ಮಿಕರ ಹತ್ಯೆ

ಶ್ರೀನಗರ: ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯ ಕತ್ರಾಸೂ ಗ್ರಾಮದಲ್ಲಿ ಮಂಗಳವಾರ ಸಂಜೆ ಅಪರಿಚಿತ ಉಗ್ರರು ಕನಿಷ್ಠ ಐವರು ವಲಸಿಗರ ಕಾರ್ಮಿಕರನ್ನು ಕೊಂದು ಹಾಕಿದ್ದಾರೆ. ಒಬ್ಬ ಕಾರ್ಮಿಕ ಗಾಯಗೊಂಡಿದ್ದಾನ. ಈ ಕಾರ್ಮಿಕರೆಲ್ಲರೂ ಪಶ್ಚಿಮ ಬಂಗಾಳದವರು ಎಂದು ತಿಳಿದು ಬಂದಿದೆ.

370 ಮತ್ತು 35ಎ ವಿಧಿಗಳ ರದ್ದತಿ ಹಾಗೂ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾದ ಬಳಿಕ ಅಲ್ಲಿನ ಪರಿಸ್ಥಿತಿ ಹೇಗಿದೆ ಎಂದು ವೀಕ್ಷಿಸಲು ಐರೋಪ್ಯ ಒಕ್ಕೂಟದ 23 ಸಂಸದರ ನಿಯೋಗ ಕಾಶ್ಮೀರಕ್ಕೆ ಭೇಟಿ ನೀಡಿದ ದಿನವೇ ಈ ಘಟನೆ ನಡೆದಿದೆ.

ಆರು ಮಂದಿ ಕಾರ್ಮಿಕರನ್ನು ಅಪಹರಿಸಿದ ಉಗ್ರರು ಬಳಿಕ ಅವರನ್ನು ಸಾಲಾಗಿ ನಿಲ್ಲಿಸಿ ಗುಂಡು ಹಾರಿಸಿದರು. ಆಗ ಐವರು ಮೃತಪಟ್ಟು ಒಬ್ಬ ಗಾಯಗೊಂಡಿದ್ದಾನೆ. ಗಾಯಗೊಂಡ ಕಾರ್ಮಿಕ ಝಹೂರ್ ಉದ್‌ ದಿನ್ ನನ್ನು ಶ್ರೀನಗರ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಆತ ಮೃತಪಟ್ಟ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹತ್ಯೆಗೀಡಾದ ಐವರು ಕಾರ್ಮಿಕರನ್ನು ಶೇಖ್ ಮುರ್ಸಲೀನ್, ಖಮರುದ್ದೀನ್, ಮೊಹಮ್ಮದ್ ರಫೀಕ್, ನಿಜಾಮುದ್ದೀನ್ ಮತ್ತು ರಫೀಕ್ ಉಲ್‌- ಶೇಖ್ ಎಂದು ಗುರುತಿಸಲಾಗಿದೆ.

ಅ.14ರಿಂದೀಚೆಗೆ ದಕ್ಷಿಣ ಕಾಶ್ಮೀರದಲ್ಲಿ ಸ್ಥಳೀಯರಲ್ಲದ ಜನತೆಯ ಮೇಲೆ ಜನತೆಯ ಮೇಲೆ ನಡೆಯುತ್ತಿರುವ ಸರಣಿ ದಾಳಿಗಳ ಪೈಕಿ ಇದು ಐದನೆಯದಾಗಿದೆ. ಸೋಮವಾರ ಸಂಜೆ ಜಮ್ಮುವಿನಲ್ಲಿ ಕಾತ್ರಾದಿಂದ ಬಂದ ಟ್ರಕ್ ಚಾಲಕ ನಾರಾಯಣ್ ದತ್ ಎಂಬಾತನನ್ನು ಉಗ್ರರು ಹತ್ಯೆ ಮಾಡಿದ್ದರು. ಮಂಗಳವಾರಕ್ಕೆ ಮುಂಚೆ ನಾಲ್ವರು ಟ್ರಕ್‌ ಚಾಲಕರು, ಒಬ್ಬ ಸೇಬಿನ ವ್ಯಾಪಾರಿ ಮತ್ತು ಒಬ್ಬ ಕಾರ್ಮಿಕ (ಎಲ್ಲರೂ ಹೊರಗಿನವರು) ನನ್ನು ಉಗ್ರರು ಕೊಂದು ಹಾಕಿದ್ದಾರೆ.

ಅಕ್ಟೋಬರ್ 24ರಂದು ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಚಿತ್ತಾರ್‌ಗಾಂ ಗ್ರಾಮದಲ್ಲಿ ಶಂಕಿತ ಹಿಜ್ಬುಲ್‌ ಮುಜಾಹಿದೀನ್ ಉಗ್ರರು ಇಬ್ಬರು ಟ್ರಕ್ ಚಾಲಕರನ್ನು ಕೊಂದಿದ್ದು, ಟ್ರಕ್ ಸಹಾಯಕನೊಬ್ಬನ್ನು ಗಂಭೀರವಾಗಿ ಗಾಯಗೊಳಿಸಿದ್ದರು. ಮೃತಪಟ್ಟ ಒಬ್ಬ ಚಾಲಕನನ್ನು ರಾಜಸ್ಥಾನದ ಅಲ್ವಾರ್‌ನ ಮೊಹಮ್ಮದ್ ಇಲ್ಯಾಸ್ ಎಂದು ಗುರುತಿಸಲಾಗಿದೆ. ಗಾಯಗೊಂಡ ಸಹಾಯಕನನ್ನು ಪಂಜಾಬಿನ ಹೋಶಿಯಾರ್‌ಪುರದ ಜೀವನ್ ಎಂದು ಗುರುತಿಸಲಾಗಿದೆ. ದಾಳಿ ನಡೆಸಲಾದ ಮೂರು ಟ್ರಕ್‌ಗಳ ಪೈಕಿ ಎರಡನ್ನು ಸಂಪೂರ್ಣ ದೋಚಲಾಗಿದೆ.

Related posts

ಕಾಲೇಜು ಶಿಕ್ಷಣದ ಅಂತ್ಯ ಜೀವನದ ಆರಂಭ: ಡಾ. ಸುಧಾ ಮೂರ್ತಿ

Upayuktha

ಸಣ್ಣ ಉಳಿತಾಯದ ಬಡ್ಡಿ ದರ ಕಡಿತಕ್ಕೆ ಆರ್‌ಬಿಐ ಆಗ್ರಹ; ಪಿಪಿಎಫ್‌ ಇನ್ನು ಲಾಭದಾಯಕ ಅಲ್ಲವೆ..?

Upayuktha

ಬಜರಂಗದಳದ ಮಾಜಿ ರಾಜ್ಯ ಸಂಚಾಲಕ ಮಹೇಂದ್ರ ಕುಮಾರ್ ಇನ್ನಿಲ್ಲ

Upayuktha