ಅಪಘಾತ- ದುರಂತ ದೇಶ-ವಿದೇಶ

ವಿಮಾನ ಅಪಘಾತ; ಫುಟ್ಬಾಲ್ ಆಟಗಾರರು ಸಾವು

ಸಾವೊ ಪೋಲೊ: ಲಘು ವಿಮಾನವೊಂದು ಟೇಕ್ ಆಫ್ ವೇಳೆ ಅಪಘಾತಗೀಡಾಗಿದ್ದು, ವಿಮಾನದಲ್ಲಿದ್ದ ಫುಟ್ ಬಾಲ್ ಆಟಗಾರರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಬ್ರೆಜಿಲಿಯನ್ ಕಪ್ ಟೂರ್ನಿಯ ಪಂದ್ಯದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ತಂಡವನ್ನು ಕರೆದುಕೊಂಡು ಹೋಗಲು ತಯಾರಾಗಿದ್ದ ಲಘು ವಿಮಾನ ಟೇಕ್ ಆಫ್ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ.

ಈ ವೇಳೆ ಪಲ್ಮಾಸ್ ಫುಟ್‌ಬಾಲ್ ಕ್ಲಬ್‌ನ ಅಧ್ಯಕ್ಷ ಮತ್ತು ನಾಲ್ವರು ಆಟಗಾರರು ಮೃತಪಟ್ಟರು. ಮೂಲಗಳ ಪ್ರಕಾರ ಕ್ಲಬ್ ಅಧ್ಯಕ್ಷ ಲೂಕಾಸ್‌ ಮೇರಾ, ಆಟಗಾರರಾದ ಲೂಕಾಸ್ ಪ್ರಕ್ಸಿಡಿಸ್‌, ಗುಲೆರ್ಮೆ ನೊಯೆ, ರಣುಲ್‌ ಮತ್ತು ಮಾರ್ಕಸ್ ಮೋಲಿನರಿ ಸಾವಿಗೀಡಾಗಿದ್ದಾರೆ ಎಂದು ಕ್ಲಬ್ ತಿಳಿಸಿದೆ.

ಈ ಅಪಘಾತದಲ್ಲಿ ಲಘು ವಿಮಾನದ ಪೈಲಟ್‌ ಕೂಡ ಸಾವನ್ನಪ್ಪಿದರು.

ಪಲ್ಮಾಸ್‌ನಿಂದ 800 ಕಿ.ಮೀ ದೂರದ ಗೊಯಾನಿಯಾದಲ್ಲಿ ಸೋಮವಾರ ನಡೆಯಲಿದ್ದ ವಿಲಾ ನೋವಾ ತಂಡದ ಎದುರಿನ ಪಂದ್ಯದಲ್ಲಿ ಪಾಲ್ಗೊಳ್ಳಲು ಆಟಗಾರರು ತೆರಳುತ್ತಿದ್ದರು.

ಪಲ್ಮಾಸ್‌ ಬಳಿಯ ಕಿರು ವಾಯುನೆಲೆ ಟೆಕಾಟಿನೆನ್ಸ್‌ ಏವಿಯೇಷನ್ ಅಸೋಸಿಯೇಷನ್‌ನಿಂದ ಟೇಕ್ ಆಫ್‌ ಆದ ಕೆಲವೇ ಕ್ಷಣಗಳಲ್ಲಿ ವಿಮಾನ ಪತನಗೊಂಡಿತು.

Related posts

ಶಬರಿಮಲೆ: ಸದ್ಯಕ್ಕೆ ಭಕ್ತರಿಗೆ ದರ್ಶನಕ್ಕೆ ಅವಕಾಶವಿಲ್ಲ

Upayuktha

ಕೋವಿಡ್ 19 ನಿರ್ವಹಣೆ: 10 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ವೀಡಿಯೋ ಸಂವಾದ

Upayuktha

ಪ.ಬಂಗಾಳ:ಬಿಜೆಪಿ ಪರಿವರ್ತನ್ ಯಾತ್ರೆಯ ಮೇಲೆ ದಾಳಿ

Sushmitha Jain