ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗ, ರೋಟರಿ ಕ್ಲಬ್ ಮಂಗಳೂರು ಸೀಸೈಡ್ನ ಸಹಯೋಗದೊಂದಿಗೆ ಶನಿವಾರ (ಜ. 9) ರಂದು ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಪ್ರಾಧ್ಯಾಪಕರಿಗಾಗಿ ʼಫೋಕಸ್- 2021’ ಎಂಬ ಪ್ರೇರಣಾದಾಯಕ ಕಾರ್ಯಾಗಾರವೊಂದನ್ನು ಆಯೋಜಿಸಿತ್ತು.
ತಮ್ಮ ಪ್ರಸ್ತಾವನೆಯಲ್ಲಿ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕ ಡಾ. ಯತೀಶ್ ಕುಮಾರ್, ಯಾವುದೇ ಹುದ್ದೆ ತಲುಪಿದರೂ ನಾವು ಪರಿಪೂರ್ಣರಲ್ಲ. ಎಲ್ಲರೂ ಸ್ವಾಮಿ ವಿವೇಕಾನಂದರಂತಾಗಲೂ ಸಾಧ್ಯವಿಲ್ಲವಾದರೂ ನಿರಂತರ ಕಲಿಕೆ ಮುಖ್ಯ, ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಎ. ಹರೀಶ, ಅಧ್ಯಾಪಕರು ಮೊಬೈಲ್ ಯುಗದಲ್ಲಿ ವಿದ್ಯಾರ್ಥಿಗಳ ಗಮನವನ್ನು ಪುಸ್ತಕದೆಡೆಗೆ ತಿರುಗಿಸುವ ಕೆಲಸ ಮಾಡಬೇಕಿದೆ, ಎಂದು ಅಭಿಪ್ರಾಯಪಟ್ಟರು.
ಸಂಪನ್ಮೂಲ ವ್ಯಕ್ತಿಗಳಾಗಿದ್ದ ರೋಟರಿ ಕ್ಲಬ್ನ ರಾಷ್ಟ್ರೀಯ ತರಬೇತುದಾರ ಡಾ. ರಾಹುಲ್ ಥೋನ್ಸೆ, ವಲಯ ತರಬೇತುದಾರರಾದ ಹೀರಾಚಾಂದ್ ಕರ್ಕೇರ ಮತ್ತು ಲೋಹಿತ್ ಶೆಟ್ಟಿ ಪ್ರಾಧ್ಯಾಕರಿಗೆ ಪ್ರಾಯೋಗಿಕ ತರಬೇತಿ ನೀಡಿದರು. ರೋಟರಿ ಕ್ಲಬ್ ಮಂಗಳೂರು ಸೀಸೈಡ್ನ ಅಧ್ಯಕ್ಷ ರೊಟೇರಿಯನ್ ಪಿಹೆಚ್ಎಫ್ ಸುರೇಶ್ ಎಂ. ಎಸ್ ಉಪಸ್ಥಿತರಿದ್ದರು.
ವಿಭಾಗದ ಉಪನ್ಯಾಸಕರಾದ ಸಹನಾ, ಕಾರ್ತಿಕ್ ಪೈ, ಸಂಶೋಧನಾ ವಿದ್ಯಾರ್ಥಿ ಪೌಲ್ ಡಿʼಸೋಜ ಕಾರ್ಯಕ್ರಮದ ಬಗ್ಗೆ ಅಭಿಪ್ರಾಯ ಮಂಡಿಸಿದರು. ಉಪನ್ಯಾಸಕಿ ಶೀತಲ್ ಕಾರ್ಯಕ್ರಮ ನಿರೂಪಿಸಿದರು.
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ