ದೇಶ-ವಿದೇಶ ಫ್ಯಾಷನ್

ಡಿಫ್ರೆಂಟ್‌ ಲುಕ್‌ನಲ್ಲಿ ಗಮನ ಸೆಳೆದ ಮಯನ್ಮಾರ್ ಸುಂದರಿ

ಫಿಟ್ ಆಂಡ್ ಫೈನ್ ಆಗಿ ಕಾಣಿಸಿಕೊಳ್ಳಬೇಕು ಎನ್ನುವುದು ಎಲ್ಲರ ಕನಸು. ತಮ್ಮ ದೇಹಸಿರಿಯನ್ನು ಹೆಚ್ಚಿಸಿಕೊಳ್ಳಲು ಎಲ್ಲರೂ ಸಾಕಷ್ಟು ಪ್ರಯತ್ನ ಪಡುತ್ತಾರೆ. ಇದಕ್ಕಾಗಿ ಪ್ರತಿದಿನ ವ್ಯಾಯಾಮ, ಜಿಮ್‌ನಲ್ಲಿ ವರ್ಕೌಟ್ ಮಾಡಿ ತಮ್ಮ ದೇಹದ ಸೌಂದರ್ಯವನ್ನು ಕಾಪಾಡಿಕೊಳ್ಳುತ್ತಾರೆ.

ತಮ್ಮ ದೇಹ ಬಳುಕುವ ಬಳ್ಳಿಯಂತೆ ಇರಬೇಕೆಂದು ಕೆಲವರು ಬಯಸುವುದು ಸಹಜ. ಆದರೆ, ಕೆಲವರು ಸ್ವಾಭಾವಿಕವಾಗಿಯೇ ತೆಳ್ಳಗಿರುತ್ತಾರೆ. ಅದಕ್ಕೆ ಸಾಕ್ಷಿ ಮಯನ್ಮಾರ್‌ನ ಈ ಯುವತಿ. ಇವರು ತಮ್ಮ ವಿಭಿನ್ನ ಲುಕ್‌ನಿಂದಲೇ ಎಲ್ಲರ ಗಮನ ಸೆಳೆದಿದ್ದಾರೆ. ವಿಶ್ವದಲ್ಲಿಯೇ ಅತ್ಯಂತ ತೆಳ್ಳಗಿನ ಸೊಂಟ ಹೊಂದಿರುವ ಯುವತಿಯರಲ್ಲಿ ಇವರು ಕೂಡಾ ಒಬ್ಬರಾಗಿದ್ದಾರೆ.

ಮಯನ್ಮಾರ್‌ನ ಸು ‘ಮೊಹ್ ಮೊಹ್’ ನಾಯಿಂಗ್ ಇಂತಹ ಅಪರೂಪದ ಯುವತಿ. 23 ವರ್ಷದ ಈ ಯುವತಿಯ ಸೊಂಟ ಬರೀ 13.7 ಇಂಚು. ಇದೇ ಕಾರಣಕ್ಕೆ ಇವರು ಈಗ ವಿಶ್ವದ ಗಮನ ಸೆಳೆದಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಇವರು ತಮ್ಮ ಈ ಫೋಟೋವನ್ನು ಹಂಚಿಕೊಂಡಿದ್ದು ಹೀಗೆ ಕಾಣಲು ಇವರು ವಿಶೇಷವಾಗಿ ಚಿಕಿತ್ಸೆ, ಮಾರ್ಗೋಪಾಯಗಳನ್ನು ಕಂಡುಕೊಂಡಿಲ್ಲ. ಸು ನಾಯಿಂಗ್ ಪ್ರಕಾರ ತನ್ನ ಈ ತೆಳ್ಳಗಿನ ಸೊಂಟಕ್ಕೆ ಆನುವಂಶಿಕ ಕಾರಣವಿದ್ದು, ಇದರ ಹಿಂದೆ ವಿಶೇಷ ಕಾರಣವಿಲ್ಲ ಎಂದು ಇವರು ಸ್ಪಷ್ಟವಾಗಿ ಹೇಳಿದ್ದಾರೆ.

ನಾನು ಹೀಗೆ ಕಾಣಲು ತನ್ನ ಆಹಾರ ಪದ್ಧತಿಯನ್ನು ಬದಲಾವಣೆ ಮಾಡಿಕೊಂಡಿಲ್ಲ ಅಥವಾ ಈ ರೀತಿ ಕಾಣಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಯಾವುದೇ ಚಿಕಿತ್ಸೆಯನ್ನು ಅಥವಾ ಫೋಟೋ ಎಡಿಟಿಂಗ್ ಮಾಡಿಸಿಕೊಂಡಿಲ್ಲ ಎನ್ನುವುದು ಇವರ ಮಾತಾಗಿದೆ.

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಹತ್ರಾಸ್‌ ಅತ್ಯಾಚಾರ ಪ್ರಕರಣ: ಜಂತರ್ ಮಂತರ್‌ಗೆ ಬದಲಾದ ಪ್ರತಿಭಟನೆಯ ಕೇಂದ್ರ; ಎಸ್ಪಿ, ಇತರ ನಾಲ್ವರ ಅಮಾನತು

Upayuktha

ಭಾರತಕ್ಕೆ ಆಗಮಿಸಿದ ಅಮೆರಿಕ ಅಧ್ಯಕ್ಷ ಟ್ರಂಪ್‌ ಮತ್ತು ಬಳಗ: ಪ್ರಧಾನಿ ಮೋದಿ ಅವರಿಂದ ಭವ್ಯ ಸ್ವಾಗತ

Upayuktha

ಮಹಾರಾಷ್ಟ್ರ ಪಾಲಿಟಿಕ್ಸ್: ನಾಳೆಗೆ ತೀರ್ಪು ಕಾದಿರಿಸಿದ ಸುಪ್ರೀಂ ಕೋರ್ಟ್‌

Upayuktha