ದೇಶ-ವಿದೇಶ ಪ್ರಮುಖ

ಫಾರೂಕ್ ಅಬ್ದುಲ್ಲಾ ಗೃಹಬಂಧನ 3 ತಿಂಗಳು ವಿಸ್ತರಣೆ

ಶ್ರೀನಗರ: ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರ ಗೃಹಬಂಧನವನ್ನು ಇನ್ನೂ ಮೂರು ತಿಂಗಳ ಕಾಲ ವಿಸ್ತರಿಸಲಾಗಿದೆ. ಅವರ ಮನೆಯನ್ನೇ ಸಬ್‌ಜೈಲ್ ಎಂದು ಘೋಷಿಸಲಾಗಿದ್ದು, ಗೃಹಬಂಧನ 3 ತಿಂಗಳ ಮುದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ಐದು ಅವಧಿಗೆ ಸಂಸದರಾಗಿದ್ದ ಫಾರೂಕ್‌ ಅಬ್ದುಲ್ಲಾ ಅವರ ಪ್ರಕರಣವನ್ನು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಗೃಹ ಇಲಾಖೆ ಪರಾಮರ್ಶೆ ನಡೆಸಿದ ಬಳಿಕ ಗೃಹಬಂಧನವನ್ನು 3 ತಿಂಗಳು ವಿಸ್ತರಿಸಲು ಶಿಫಾರಸು ಮಾಡಿತು.

ಗುಪ್ಕರ್ ರೋಡ್‌ನಲ್ಲಿರುವ ಅವರ ಮನೆಯನ್ನು ಸಬ್ ಜೈಲ್ ಎಂದು ಕೇಂದ್ರಾಡಳಿತ ಪ್ರದೇಶದ ಗೃಹ ಇಲಾಖೆ ಘೋಷಿಸಿದೆ.

82 ವರ್ಷ ವಯಸ್ಸಿನ ಅಬ್ದುಲ್ಲಾ ಕಾಶ್ಮೀರದ ಪ್ರಥಮ ಮುಖ್ಯಮಂತ್ರಿಯಾಗಿದ್ದರು. ಆಗಸ್ಟ್‌ 5ರಂದು ಕೇಂದ್ರ ಸರಕಾರ 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಫಾರೂಕ್ ಅಬ್ದುಲ್ಲಾ ಮತ್ತು ರಾಜ್ಯದ ಇತರ ನಾಯಕರು ಗೃಹಬಂಧನದಲ್ಲಿದ್ದಾರೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಭಾರತ-ಚೀನಾ 2ನೇ ಅನೌಪಚಾರಿಕ ಶೃಂಗಸಭೆ: ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸ್ವಾಗತಿಸಲು ಚೆನ್ನೈಗೆ ಬಂದ ಪ್ರಧಾನಿ ಮೋದಿ

Upayuktha

ಗಡಿನಾಡ ಜನತೆಗೆ ಅಗತ್ಯ ಔಷಧಗಳ ಪೂರೈಕೆ: ‘ಸೇವಾ ಹಿ ಪರಮೋ ಧರ್ಮ’ ಗ್ರೂಪಿನ ಹೆಗ್ಗಳಿಕೆ

Upayuktha

ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಕ್ಲಬ್‌ನಲ್ಲಿ 3000ಕ್ಕೂ ಅಧಿಕ ಕುತೂಹಲಿಗಳಿಂದ ಕಂಕಣ ಸೂರ್ಯಗ್ರಹಣ ವೀಕ್ಷಣೆ

Upayuktha