ದೇಶ-ವಿದೇಶ ಪ್ರಮುಖ

ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ವಿಧಿವಶ

ಹೊಸದಿಲ್ಲಿ: ಮಾಜಿ ಹಣಕಾಸು ಸಚಿವ, ಬಿಜೆಪಿಯ ಹಿರಿಯ ನಾಯಕ ಅರುಣ್ ಜೇಟ್ಲಿ ದೀರ್ಘಕಾಲದ ಅನಾರೋಗ್ಯದಿಂದ ಇಂದು ನಿಧನರಾದರು. ಅವರಿಗೆ 66 ವರ್ಷ ವಯಸ್ಸಾಗಿತ್ತು.

ವೃತ್ತಿಯಲ್ಲಿ ವಕೀಲರಾಗಿದ್ದ ಜೇಟ್ಲಿ ಅವರು ಬಿಜೆಪಿ ಸರಕಾಅರದ ಮೊದಲ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟದಲ್ಲಿ ಹಣಕಾಸು ಖಾತೆ ಮತತು ರಕ್ಷಣಾ ಖಾತೆ ಸಚಿವರಾಗಿ ಮಹತ್ವದ ಜವಾಬ್ದಾರಿ ನಿಭಾಯಿಸಿದ್ದರು. ಅಲ್ಲದೆ ಸರಕಾರದಲ್ಲಿ ಯಾವುದೇ ಸಮಸ್ಯೆಗಳು ಎದುರಾದಾಗ ಟ್ರಬಲ್‌ಶೂಟರ್ ಆಗಿಯೂ ಕಾರ್ಯನಿರ್ವಹಿಸಿದ್ದರು.

ಅನಾರೋಗ್ಯದ ಕಾರಣದಿಂದಲೇ 2019ರ ಲೋಕಸಭಾ ಚುನಾವಣೆಗೆ ಜೇಟ್ಲಿ ಸ್ಪರ್ಧಿಸಿರಲಿಲ್ಲ. ಕಳೆದ ವರ್ಷದ ಮೇ 14ರಮದು ಅವರು ಅಖಿಲ ಭಾರತ ವೈದ್ಯವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್‌) ಮೂತ್ರಪಿಂಡದ ಟ್ರಾನ್ಸ್‌ಪ್ಲಾಂಟೇಶನ್ ಚಿಕಿತ್ಸೆಗೆ ಒಳಗಾಗಿದ್ದರು. ಆ ಸಂದರ್ಭದಲ್ಲಿ ರೈಲ್ವೇ ಸಚಿವರಾಗಿದ್ದ ಪೀಯೂಷ್ ಗೋಯಲ್ ಅವರು ಹೆಚ್ಚುವರಿಯಾಗಿ ಹಣಕಾಸು ಖಾತೆ ನಿರ್ವಹಿಸಿದ್ದರು.

2018ರ ಆಗಸ್ಟ್‌ 23ರಂದು ಮತ್ತೆ ವಿತ್ತ ಸಚಿವಾಲಯದ ಹೊಣೆಯನ್ನು ಸ್ವೀಕರಿಸಿದ್ದ ಜೇಟ್ಲಿ ಕಳೆದ ಏಪ್ರಿಲ್‌ನಿಂದ ಕಚೇರಿಗೆ ಹೋಗುವುದನ್ನು ನಿಲ್ಲಿಸಿದ್ದರು.

2014ರ ಸೆಪ್ಟೆಂಬರ್‌ನಲ್ಲಿ ಅವರು ಬೇರಿಯಾಟಿಕ್‌ ಸರ್ಜರಿ (ಕೊಬ್ಬ ಕರಗಿಸುವ ಶಸ್ತ್ರಕ್ರಿಯೆ) ಗೆ ಒಳಗಾಗಿದ್ದರು.

Related posts

ಗಲಭೆಗಳಲ್ಲಿ ‘ಸಿಮಿ’ ಸಂಯೋಜಿತ ಪಿಎಫ್‌ಐ ಕೈವಾಡ: ಉ.ಪ್ರ ಡಿಸಿಎಂ

Upayuktha

ಉಡುಪಿಯಲ್ಲಿ ಅಂಗನವಾಡಿ ನೌಕರರ ಪ್ರತಿಭಟನೆ

Upayuktha

ಡಿ.8ರಂದು ಮಂಗಳೂರಿನಲ್ಲಿ ಅಯ್ಯಪ್ಪ ಭಕ್ತರ ಬೃಹತ್ ಸಮಾವೇಶ

Upayuktha