ರಾಜ್ಯ

ದಾವಣಗೆರೆ ಮಾಜಿ ಸಚಿವ ಡಾ.ವೈ.ನಾಗಪ್ಪ ನಿಧನ

ದಾವಣಗೆರೆ: ಮಾಜಿ ಸಚಿವರಾದ ಡಾ.ವೈ.ನಾಗಪ್ಪ ರವರು ನಿಧನರಾಗಿದ್ದು, ಅವರಿಗೆ 75 ವರ್ಷ ವಯಸ್ಸಾಗಿತ್ತು. ಅವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಹರಿಹರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರೂ ಆಗಿದ್ದ ನಾಗಪ್ಪ ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ.

ಬದಲಾದ ರಾಜಕೀಯದಿಂದ ಹಾಗೂ ಅನಾರೋಗ್ಯ ಸಮಸ್ಯೆಯಿಂದ ರಾಜಕಾರಣದಿಂದ ದೂರ ಸರಿದರು.

ಹಾಗೆಯೇ 1980 ರಲ್ಲಿ ಹರಿಹರ ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪದೇ ಪದೇ ವರ್ಗಾವಣೆ ಮಾಡಿಸಿದಾಗ ಅದರಿಂದ ಬೇಸರಗೊಂಡು ಶಾಸಕರ ಸೆಡ್ಡು ಹೊಡೆದು ಜೊತೆ ರಾಜಕೀಯ ಪ್ರವೇಶ ಮಾಡಿದರು.

ಮೃತರು ಒಬ್ಬ ಪುತ್ರ, ಮೂವರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ.

ಹಾಗೆ ಮೃತರ ಅಂತ್ಯಕ್ರಿಯೆ ಇಂದು ಸಂಜೆ 5 ಗಂಟೆಗೆ ಹರಿಹರದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಇವರ ನಿಧನಕ್ಕೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದರು.

Related posts

ಮುಂದಿನ ವರ್ಷದಿಂದ ಸರ್ಕಾರಿ ಕಚೇರಿ ಗೆ 5 ದಿನ ಮಾತ್ರ ಕೆಲಸ ತಮಿಳುನಾಡು ಸರ್ಕಾರ ನಿರ್ಧಾರ

Harshitha Harish

10 ಸಾವಿರ ಚದರ ಅಡಿ ವಿಸ್ತೀರ್ಣ ; ಸಾರ್ವಜನಿಕ ಗೋದಾಮು ನಿರ್ಮಿಸಿದ ಏರ್ ಪೋರ್ಟ್

Harshitha Harish

ಶಿಕ್ಷಣ ಕ್ಷೇತ್ರಕ್ಕೆ ಧರ್ಮಸ್ಥಳದ ನೆರವು: ಈ ವರ್ಷ 1 ಕೋಟಿ ರೂ ಬಜೆಟ್‌ನಲ್ಲಿ ಸರಕಾರಿ ಶಾಲೆಗಳಿಗೆ ಬೆಂಚ್‌, ಡೆಸ್ಕ್‌ ವಿತರಣೆ

Upayuktha