ದೇಶ-ವಿದೇಶ

ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿಯವರ ಪುತ್ರ ರೋಹಣ್ ಜೇಟ್ಲಿ ಡಿಡಿಸಿಎ ಅಧ್ಯಕ್ಷ ರಾಗಿ ಅವಿರೋಧ ಆಯ್ಕೆ

ನವದೆಹಲಿ: ಮಾಜಿ ಕೇಂದ್ರ ಸಚಿವರಾದ ದಿವಂಗತ ಅರುಣ್ ಜೇಟ್ಲಿಯವರ ಪುತ್ರ ರೋಹನ್ ಜೇಟ್ಲಿ ಅವರು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ)ಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

 

ಇದೀಗ ಡಿಡಿಸಿಎ ಚುನಾವಣೆಗೆ ನೇಮಕಗೊಂಡ ರಿಟರ್ನಿಂಗ್ ಅಧಿಕಾರಿ ಎಸ್.ಕೆ.ಮೆಂಡಿರಟ್ಟಾ ಅವರು ಶನಿವಾರ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಹಾಗೆಯೇ ಇದರಲ್ಲಿ ಅಧ್ಯಕ್ಷ ಸ್ಥಾನ ಕ್ಕೆ ರೋಹನ್ ಜೇಟ್ಲಿಯವರನ್ನು ಮಾತ್ರ ಹೆಸರು ಗುರುತಿಸಲಾಗಿದೆ.

ಅಧ್ಯಕ್ಷ ಸ್ಥಾನ ಕ್ಕೆ ವಿರುದ್ಧ ನಾಮಪತ್ರ ಸಲ್ಲಿಸಿದ ಅಭ್ಯರ್ಥಿ ವಕೀಲ ಸುನೀಲ್ ಗೋಯೆಲ್ ರವರು ತಮ್ಮ ನಿರೀಕ್ಷೆ ಯಂತೆ ನಾಮಪತ್ರ ಹಿಂತೆಗೆದುಕೊಂಡರು.

ನಂತರ ಅಧ್ಯಕ್ಷ ಹುದ್ದೆಗೆ ಒಬ್ಬ ಅಭ್ಯರ್ಥಿ ಮಾತ್ರ ಇರುವುದರಿಂದ ಅಧ್ಯಕ್ಷ ಸ್ಥಾನಕ್ಕೆ ಯಾವುದೇ ಚುನಾವಣೆ ಇರುವುದಿಲ್ಲ ಎಂದು ರಿಟರ್ನಿಂಗ್ ಅಧಿಕಾರಿ ತಿಳಿಸಿದ್ದಾರೆ

Related posts

ಕಿಡ್ನಿ ಸಮಸ್ಯೆ ಯಿಂದ ನಟಿ ಮಿಶ್ತಿ ಮುಖರ್ಜಿ ನಿಧನ

Harshitha Harish

ಜಮ್ಮು-ಕಾಶ್ಮೀರ, ಲಡಾಖ್‌ ಇನ್ನು ಕೇಂದ್ರಾಡಳಿತ ಪ್ರದೇಶಗಳು; 370ನೇ ವಿಧಿ ರದ್ದು

Upayuktha

ಭಾರತದಲ್ಲಿ 8 ಲಕ್ಷಕ್ಕೇರಿದ ಕೊರೋನಾ ಪಾಸಿಟಿವ್ ಕೇಸ್‌ಗಳು. 22,000 ದಾಟಿದ ಸಾವಿನ ಸಂಖ್ಯೆ.

Upayuktha

Leave a Comment