ಅಡ್ವಟೋರಿಯಲ್ಸ್ ಗ್ರಾಮಾಂತರ ಸ್ಥಳೀಯ

ಪೈಸಾರಿ ಹರ್ಬಲ್ಸ್‌ನ ನಾಲ್ಕು ಆಯುರ್ವೇದ ಉತ್ಪನ್ನಗಳು ಮಾರುಕಟ್ಟೆಗೆ

 

ಬದಿಯಡ್ಕ: ನಿಸರ್ಗದತ್ತ ಆರೋಗ್ಯದತ್ತ ಪೈಸಾರಿ ಹರ್ಬಲ್ಸ್‌ನ ಚಿತ್ತ ಎಂಬ ಧ್ಯೇಯವಾಕ್ಯದೊಡನೆ ಕಾಟುಕುಕ್ಕೆಯಲ್ಲಿರುವ ಪೈಸಾರಿ ಆವರಣದಲ್ಲಿ ಆಯುರ್ವೇದದ ನಾಲ್ಕು ವಿಶಿಷ್ಟ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಕಾರ್ಯಕ್ರಮ ನೆರವೇರಿತು.

ವಿಟ್ಲದ ಪ್ರಖ್ಯಾತ ಆಯುರ್ವೇದ ತಜ್ಞ, ಮೂಡಬಿದಿರೆ ಆಳ್ವಾಸ್ ಕಾಲೇಜಿನ ಶಲ್ಯತಂತ್ರದ ಪ್ರಾಧ್ಯಾಪಕ ಡಾ| ರವಿಶಂಕರ ಎ.ಜಿ. ಮಂಡಿನೋವಿನ ಶಾಮಕ ಉತ್ಪನ್ನ `ಸುಜಾನು’ವನ್ನು ಬಿಡುಗಡೆಗೊಳಿಸಿದರು.

ಖ್ಯಾತ ಶಿಶು ಸಾಹಿತಿ ಕೃಷಿತಜ್ಞ ವಿ.ಮ. ಭಟ್ಟ ಅಡ್ಯನಡ್ಕ ಅವರು ಪ್ರಾಸ್ಟೇಟ್ ಹಾಗೂ ಮೂಲವ್ಯಾಧಿಗಿರುವ `ಶುಕ್ಲಾರ್ಶ’ವನ್ನು ಬಿಡುಗಡೆಮಾಡಿದರು. ಬದಿಯಡ್ಕದ ಪ್ರಧಾನಮಂತ್ರಿ ಜನೌಷಧಿ ಕೇಂದ್ರದ ಮಾಲೀಕರಾದ ಕುಮಾರ ಸುಬ್ರಹ್ಮಣ್ಯ ಪೈಸಾರಿ ಅವರು ಋತು ಬಂಧದ ಮಹಿಳೆಯರಿಗೆ ವಿಶೇಷವಾಗಿ ತಯಾರಿಸಲಾದ `ಸುಖದಾ’ವನ್ನು ಬಿಡುಗಡೆಗೊಳಿಸಿ ಪ್ರಥಮ ಖರೀದಿ ನೆರವೇರಿಸಿದರು.

ಪೈಸಾರಿ ಹರ್ಬಲ್ಸ್‌ನ ಡಾ| ಶ್ರೀಕೃಷ್ಣ ಪೈಸಾರಿ, ಸಹಪ್ರವರ್ತಕರಾದ ವೀಣಾ ಪೈಸಾರಿ, ಜಾನಕಿ ಕುಮಾರ ಸುಬ್ರಹ್ಮಣ್ಯ, ಬೆಂಗಳೂರಿನ ಎ.ಆರ್.ಜೆ. ಅಸೋಸಿಯೇಟ್ಸ್‌ನ ಅಪರ್ಣಾ ಪ್ರಣವ, ಪ್ರಣವ ಪಿ.ಎಸ್., ಹರಿಕೃಷ್ಣ ವಾಟೆ, ವೀಣಾ ಹರಿಕೃಷ್ಣ, ಸ್ವಸ್ತಿ ವಿ.ಎಚ್. ಅಚ್ಯುತ ಭಟ್ ಮೊದಲಾದವರು ಉಪಸ್ಥಿತರಿದ್ದರು. ವಯನಾಡಿನ ವಿಮ್ಸ್ ಪ್ರಾಧ್ಯಾಪಕ ಡಾ. ಪ್ರದೀಪ್, ಮಧುರಾ ಭಟ್, ಈಶಾನಿ ಭಟ್ ಶುಭಕೋರಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

 

Related posts

ಜನವರಿ ಮೊದಲ ವಾರದಲ್ಲಿ ಕರಾವಳಿ ಉತ್ಸವ, ಸಾಂಸ್ಕೃತಿಕ ವೈಭವ

Upayuktha

ಅಂಬೇಡ್ಕರ್‌ ಒಬ್ಬ ಮಹಾನ್‌ ಮಾನವತಾವಾದಿ: ಡಾ. ದಯಾನಂದ ನಾಯ್ಕ್‌

Upayuktha

ಕೇರಳದ ರೋಗಿಗಳಿಗೆ ಷರತ್ತುಬದ್ಧ ಪ್ರವೇಶ: ತಲಪಾಡಿ ಗಡಿಯಲ್ಲಿ ನಾಲ್ವರು ವೈದ್ಯಾಧಿಕಾರಿಗಳ ನಿಯೋಜನೆ

Upayuktha