ನಗರ ಸ್ಥಳೀಯ

ಪೌರರಕ್ಷಣಾ ಪಡೆ ವತಿಯಿಂದ ಉಚಿತ ಮಾಸ್ಕ್ ವಿತರಣೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ಪಡೆಯ ವತಿಯಿಂದ ಭಾನುವಾರ ಬೆಳಗ್ಗೆ ನಗರದ ಹಂಪನಕಟ್ಟೆ ಪ್ರದೇಶದಲ್ಲಿ ಸಾರ್ವಜನಿಕರಿಗೆ ಉಚಿತ ಮಾಸ್ಕ್ ವಿತರಣೆ ಹಾಗೂ ಕೆಂಪು ಗುಲಾಬಿ ನೀಡುವ ಮೂಲಕ ಸುರಕ್ಷತಾ ಜಾಗೃತಿ ಮೂಡಿಸಲಾಯಿತು.

ಸಾಮಾಜಿಕ ಕಾರ್ಯಕರ್ತ ಹಾಗೂ ಸಂತ ಅಲೋಶಿಯಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ಎಂ.ಎಲ್‌ ಸುರೇಶ್‌ನಾಥ್‌, ಸಿವಿಲ್ ಡಿಫೆನ್ಸ್ ಕಾರ್ಯಕರ್ತ ಅಜಯ್ ಕುಮಾರ್‌. ಸಾಮಾಜಿಕ ಕಾರ್ಯಕರ್ತ ಹಾಗೂ ಉದ್ಯಮಿ ಆಲ್ವಿನ್ ಜೋಯೆಲ್ ಹಾಗೂ 10 ಮಂದಿ ಕೋವಿಡ್ ಮಾರ್ಷಲ್‌ಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಜಿಲ್ಲಾ ಕಮಾಂಡೆಂಟ್ ಡಾ. ಮುರಲೀ ಮೋಹನ ಚೂಂತಾರು ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನೆರವೇರಿತು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಸುಮ ಚಂದ್ರಶೇಖರ್ ಅವರ ‘ಸತ್ಯ ಪಥದ ನಿತ್ಯ ಸಂತ’ ಕೃತಿಗೆ ಕಸಾಪ ದತ್ತಿ ಪ್ರಶಸ್ತಿ ಪ್ರದಾನ

Upayuktha

ನಮ್ಮೊಳಗಿನ ಗಾಂಧೀಜಿಯನ್ನು ಬಡಿದೆಬ್ಬಿಸಿ: ಡಾ|| ಮುರಲೀ ಮೋಹನ್ ಚೂಂತಾರು

Upayuktha

ಬೆಳ್ಳಾರೆ: ತುಂಡಾಗಿ ಬಿದ್ದ ವಿದ್ಯುತ್ ತಂತಿ ತಗುಲಿ ಬೈಕ್ ಸವಾರ ಸಜೀವ ದಹನ

Harshitha Harish