ನಗರ ವಾಣಿಜ್ಯ ಸ್ಥಳೀಯ

ಸಿವಿಎಲ್ ಎಂಜಿನಿಯರ್‌ಗಳಿಗೆ ಸಿಬಿಆರ್‌ಐ ತರಬೇತಿ ಕಾರ್ಯಕ್ರಮ ಫೆ 7-8ಕ್ಕೆ

ಮಂಗಳೂರು: ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್ಸ್‌ಟಿಟ್ಯೂಟ್‌ ರೂರ್ಕೆ (ಉತ್ತರಾಖಂಡ) ಇವರು ದ.ಕ. ನಿರ್ಮಿತಿ ಕೇಂದ್ರದ ಸಹಕಾರದೊಂದಿಗೆ ದ.ಕ. ಜಿಲ್ಲಾ ಪಂಚಾಯತ್ ಮಂಗಳೂರು ಮತ್ತು ಮಂಗಳೂರು ಮಹಾನಗರಪಾಲಿಕೆ ಇವರ ಮಾರ್ಗದರ್ಶನದೊಂದಿಗೆ ಮಂಗಳೂರು ದ.ಕ. ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಸ್ಕಿಲ್ ಡೆವಲಪ್‍ಮೆಂಟ್ ಟ್ರೈನಿಂಗ್ ಪ್ರೋಗ್ರಾಮ್ ಆನ್ ಇನ್ನೊವೇಟಿವ್ ಟೆಕ್ನೋನಲಜೀಸ್ ಫಾರ್ ಕನ್‌ಸ್ಟ್ರಕ್ಷನ್ ಆಫ್ ಡಿಸಾಸ್ಟರ್ ರೆಸಿಲಿಯೆಂಟ್ ಹ್ಯಾಬಿಟಾಟ್ ಫರ್ ಇಂಜಿನೀಯರ್ಸ್ & ಆರ್ಕಿಟೆಕ್ಟ್ಸ್’ ಎಂಬ ವಿಷಯದ ಬಗ್ಗೆ ಫೆಬ್ರವರಿ 7 ಮತ್ತು 8 ರಂದು ಎರಡು ದಿನದ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಸಿಎಸ್‍ಐಆರ್ ನುರಿತ ವಿಜ್ಞಾನಿಗಳು ಮಾರ್ಗದರ್ಶನ ನೀಡಲು ಆಗಮಿಸುತ್ತಿದ್ದು ‘ವಿಪತ್ತು ನಿರ್ವಹಣಾ ವಸತಿ ಸಮುಚ್ಛಯಗಳನ್ನು ನವೀನ ತಂತ್ರಜ್ಞಾನಗಳ ಮೂಲಕ ವಾಸಸ್ಥಾನ ನಿರ್ಮಾಣ ಬಗ್ಗೆ’ ವಿಜ್ಞಾನಿಗಳು ಸ್ವತಃ ಮಾರ್ಗದರ್ಶನ ನೀಡಲಿರುವರು. ಈ ಕಾರ್ಯಕ್ರಮ ಇಂಜಿನಿಯರ್‌ಗಳಿಗೆ, ಆರ್ಕಿಟೆಕ್ಟ್‍ಗಳಿಗೆ, ವಿವಿಧ ಸರಕಾರಿ ಇಲಾಖಾ ಇಂಜಿನಿಯರ್‌ಗಳಿಗೆ ಹಾಗೂ ಕಂಟ್ರಾಕ್ಟರ್‌ಗಳಿಗೆ ಸಹಾಯವಾಗಲಿದೆ. ಈ 2 ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಯಾವುದೇ ಶುಲ್ಕವಿರುವುದಿಲ್ಲ. ಮುಕ್ತ ಪ್ರವೇಶವಿದೆ.

ಆಸಕ್ತಿಯುಳ್ಳವರು ದ.ಕ. ನಿರ್ಮಿತಿ ಕೇಂದ್ರದ ಕಚೇರಿ, ದೂರವಾಣಿ ಸಂಖ್ಯೆ: 0824-2476727 ಅಥವಾ 9448287534 ಇಲ್ಲಿ ನೊಂದಾಯಿಸಿಕೊಳ್ಳಬಹುದು ಹಾಗೂ ತರಬೇತಿಗೆ ಹಾಜರಾಗಬಹುದು ಎಂದು ಯೋಜನಾ ನಿರ್ದೇಶಕರು, ನಿರ್ಮಿತಿ ಕೇಂದ್ರ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಪ್ರಗತಿಪರ ಕೃಷಿಕ ಸುರೇಶ್ ಬಲ್ನಾಡು ಅವರಿಗೆ ದ.ಕ ಜಿಲ್ಲಾ ಶ್ರೇಷ್ಠ ಕೃಷಿಕ ಪ್ರಶಸ್ತಿ

Upayuktha

ಆರ್ಥೋಪೆಡಿಕ್ ಸರ್ಜರಿ ಸ್ನಾತಕೋತ್ತರ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್‌

Upayuktha

ಯಕ್ಷೋತ್ಸವ-2020: ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ

Upayuktha