ಇತರ ಕ್ರೀಡೆಗಳು ಕ್ರೀಡೆ ಪ್ರಮುಖ

13ನೇ ಫ್ರೆಂಚ್ ಓಪನ್ ಗೆದ್ದ ಕೆಮ್ಮಣ್ಣಿನ ದೊರೆ ನಡಾಲ್

20 ಗ್ರಾನ್ ಸ್ಲಾಂಗಳನ್ನು ಗೆಲ್ಲುವ ಮೂಲಕ ಫೆಡರರ್ ದಾಖಲೆ ಸರಿಗಟ್ಟಿದ ಹೆಗ್ಗಳಿಕೆ

 

ಪ್ಯಾರಿಸ್: ಆವೆ ಮಣ್ಣಿನ ದೊರೆಯೆಂದೇ ಖ್ಯಾತರಾಗಿರುವ ರಾಫೆಲ್ ನಡಾಲ್ ಮತ್ತೊಮ್ಮೆ ಫ್ರೆಂಚ್ ಓಪನ್ ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಇದರೊಂದಿಗೆ 34ರ ಹರೆಯದ ನಡಾಲ್ ಗೆದ್ದ ಒಟ್ಟಾರೆ ಗ್ರಾನ್ ಸ್ಲಾಂಗಳ ಸಂಖ್ಯೆ 20 ಆಗಿದ್ದು, ರೋಜರ್ ಫೆಡರರ್ ಅವರ ಸಾರ್ವಕಾಲಿಕ ದಾಖಲೆಯನ್ನು ಸರಿಗಟ್ಟಿದಂತಾಗಿದೆ.

ಭಾನುವಾರ ಸಂಜೆ ಸ್ಟೇಡ್ ರೋಲಂಡ್ ಗ್ಯಾರಸ್‌ನ ಕೆಂಪು ಮಣ್ಣಿನ ಅಂಗಳದಲ್ಲಿ ನಡೆದ ಪುರುಷರ ಫೈನಲ್ ಪಂದ್ಯದಲ್ಲಿ ನಡಾಲ್ ಅವರು ಜೋಕೋವಿಕ್ ಅವರನ್ನು 6-0, 6-2,7-5 ಸೆಟ್‌ಗಳಿಂದ ಸೋಲಿಸಿದರು. ಇದು ನಡಾಲ್ ಅವರ 13ನೇ ಫ್ರೆಂಚ್ ಓಪನ್ ಮುಕುಟವಾಗಿದೆ. ರೋಲಂಡ್ ಗ್ಯಾರಸ್‌ ಕೋರ್ಟ್‌ನಲ್ಲಿ ನಡಾಲ್ ಗೆದ್ದಿರುವ 100ನೇ ಪಂದ್ಯ ಇದಾಗಿದೆ. 2005ರಲ್ಲಿ ವೃತ್ತಿ ಆರಂಭಿಸಿದಾಗಿಂದ ಕೇವಲ 2 ಪಂದ್ಯಗಳಲ್ಲಷ್ಟೇ ಇವರು ಈ ತನಕ ಈ ಕೋರ್ಟ್‌ನಲ್ಲಿ ಸೋತಿದ್ದಾರೆ.

ವಿಶ್ವ ನಂ.1 ರಾಂಕಿಂಗ್‌ನ ಜೋಕೋವಿಕ್ ಈ ಋತುವಿನಲ್ಲಿ ಆಡಿದ 38 ಪಂದ್ಯಗಳಲ್ಲಿ 37 ಪಂದ್ಯಗಳನ್ನು ಗೆದ್ದ ದಾಖಲೆ ಹೊಂದಿದ್ದರು. ಆದರೂ ಮಣ್ಣಿನ ಅಂಗಳದ ದೊರೆ ನಡಾಲ್ ಎದುರು ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಇವರಿಬ್ಬರು ಈ ತನಕ 56 ಬಾರಿ ಮುಖಾಮುಖಿಯಾಗಿದ್ದಾರೆ. ಅದರಲ್ಲಿ 29 ಪಂದ್ಯಗಳನ್ನು ಜೋಕೋವಿಕ್ ಗೆದ್ದಿದ್ದರೆ, 27 ಪಂದ್ಯಗಳನ್ನು ನಡಾಲ್ ಗೆದ್ದಿದ್ದಾರೆ.

 

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಪಂಜಾಬ್ ಗ್ರಾಮದೊಳಗೆ ಶಸ್ತ್ರಾಸ್ತ್ರ ಬೀಳಿಸಿದ ಪಾಕ್ ಡ್ರೋನ್‌ಗಳು

Upayuktha

ಚಂದ್ರಯಾನ-2 ಇಳಿದಾಣದ ಹೈ ರೆಸೊಲ್ಯೂಷನ್ ಚಿತ್ರ ಬಿಡುಗಡೆ ಮಾಡಿದ ನಾಸಾ

Upayuktha

ಪಾಲಿಕೆ ತ್ಯಾಜ್ಯ ಘಟಕ: ಪರ್ಯಾಯ ಸ್ಥಳಕ್ಕೆ ಮುಖ್ಯ ಕಾರ್ಯದರ್ಶಿ ಸೂಚನೆ

Upayuktha

Leave a Comment