ಜಿಲ್ಲಾ ಸುದ್ದಿಗಳು ಶಿಕ್ಷಣ

ಭಾರಿ ಮಳೆ ಗೆ; ವಿ.ವಿ ಸ್ನಾತಕೋತ್ತರ ಪರೀಕ್ಷೆ ಮುಂದೂಡಿಕೆ

ಉಡುಪಿ : ಈಗಾಗಲೇ ಎಲ್ಲೆಡೆ ಎಡೆಬಿಡದೆ ಮಳೆ ಸುರಿಯುತ್ತಿದ್ದು ಉಡುಪಿ-ಮಂಗಳೂರಿನಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ನಾಳೆ ನಡೆಯಬೇಕಿದ್ದ ಮಂಗಳೂರು ವಿಶ್ವವಿದ್ಯಾಲಯ ಪದವಿ ಪರೀಕ್ಷೆಗಳು ಮುಂದಕ್ಕೆ ಹಾಕಲಾಗಿದೆ. ಎಂದು ಮಂಗಳೂರು ವಿವಿ ಪರೀಕ್ಷಾಂಗ ಕುಲಸಚಿವ ಡಾ. ಪಿ.ಎಲ್. ಧರ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿ -ಮಂಗಳೂರು ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಹಲವು ಕಡೆಗಳಲ್ಲಿ ನೆರೆ ಸೃಷ್ಟಿಯಾಗಿದೆ. ನಗರದಲ್ಲಿ ನೂರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅಪಾರ ನಷ್ಟ ಸಂಭವಿಸಿದೆ.

ಹಾಗೂ ಗಾಳಿ ಮಳೆಯಿಂದಾಗಿ ದೂರದ ಊರುಗಳಿಂದ ಪರೀಕ್ಷೆ ಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತದೆ. ಈ ಕಾರಣದಿಂದ ಸೋಮವಾರ ನಡೆಯಬೇಕಿದ್ದ ಪರೀಕ್ಷೆ ಯನ್ನು ಮುಂದೂಡಲಾಗಿದೆ.

ಮಂಗಳವಾರದ ಪರೀಕ್ಷೆ ಯನ್ನು ಸೋಮವಾರದ ಪರಿಸ್ಥಿತಿ ಅವಲೋಕಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪಿ.ಎಲ್. ಧರ್ಮ ತಿಳಿಸಿದ್ದಾರೆ.

Related posts

ದೇವಾಲಯದ ಅಡಿಕೆ ಫಸಲಿನ ಏಲಂ ಪ್ರಕಟಣೆ

Harshitha Harish

ಗಾಯಗೊಂಡ ಕೋತಿ ಆಸ್ಪತ್ರೆಗೆ ಬಂದು ಮುಲಾಮು ಹಚ್ಚಿಸಿಕೊಂಡ ವೀಡಿಯೋ ವೈರಲ್

Upayuktha

ಸಾರಿಗೆ ಬಸ್ ಡಿಕ್ಕಿ- ಸ್ಥಳದಲ್ಲೇ ಮಹಿಳೆ ಮೃತ್ಯು

Harshitha Harish

Leave a Comment