ಲೇಖನಗಳು ವಾಣಿಜ್ಯ

ತೈಲ ಬಾಧೆ: ನಾವೇನು ಮಾಡಬಹುದು…?


ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ.! ಜನಜೀವನ ಅಸ್ತವ್ಯಸ್ತ..! ಸಾಮಾನ್ಯ ಜನರ ಬದುಕು ದುರ್ಭರ..! ಇದು ನಿತ್ಯವೂ ಮಾಧ್ಯಮಗಳಲ್ಲಿ ಬರುವಂಥ ಸುದ್ದಿ. ಇದು ಸತ್ಯವೂ ಇರಬಹುದು. ಆದರೆ ಇದಕ್ಕೆ ಜವಾಬ್ದಾರರು ಯಾರು? ಸಾಮಾನ್ಯವಾಗಿ ಎಲ್ಲರೂ ದೂರುವುದು ಸರಕಾರವನ್ನು. ಅಂದರೆ ನಮ್ಮಂಥ ಅಮಾಯಕರನ್ನೆಲ್ಲ ಬೆಲೆ ಏರಿಕೆ ಎನ್ನುವ ಅಸ್ತ್ರದ ಸಹಾಯದಿಂದ ಸರಕಾರ ಲೂಟಿ ಮಾಡುತ್ತಿದೆ ಎಂಬ ಅರ್ಥ ಬಂದರೆ ತಪ್ಪಲ್ಲವಷ್ಟೆ. ಹಾಗಾದರೆ ನಮ್ಮಂಥ ಸಾಮಾನ್ಯ, ಅಸಾಮಾನ್ಯ ಜನರಿಂದ ಯಾವ ತಪ್ಪೂ ಆಗಿಲ್ಲವೇ? ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿದೆ. ಸಾಮಾನ್ಯವಾಗಿ ವ್ಯವಹಾರದ ನಿಯಮವೆಂದರೆ ಯಾವಾಗ ಒಂದು ವಸ್ತುವಿನ ಬೇಡಿಕೆಗೆ ಅನುಗುಣವಾಗಿ ಪೂರೈಕೆಯೂ ಇರುವುದೋ ಆವಾಗ ಆ ವಸ್ತುವಿನ ಮೌಲ್ಯ ಒಂದಾದರೆ, ವಸ್ತುವಿನ ಉತ್ಪಾದನೆ ಹೆಚ್ಚಾಗಿ ಬೇಡಿಕೆ ಕಡಿಮೆಯಾದರೆ ಮೌಲ್ಯವೂ ಕಡಿಮೆಯಾಗುತ್ತದೆ. ಇದು ಸಹಜ ತಾನೆ. ಅದೇ ರೀತಿ ಬೇಡಿಕೆಯು ಹೆಚ್ಚಾಗಿ ಪೂರೈಕೆ ಕಡಿಮೆಯಾದರೆ ಮೌಲ್ಯ ಹೆಚ್ಚಾಗುವುದೂ ಸಹಜವಷ್ಟೆ. ಇದು ಯಾವನೇ ಒಬ್ಬ ಸಾಮಾನ್ಯ ವ್ಯಕ್ತಿಗೂ ಅರ್ಥವಾಗುವ ವಿಚಾರ. ಇದಕ್ಕೇನು ಅರ್ಥಶಾಸ್ತ್ರವನ್ನೇ ಕಲಿಯಬೇಕಾಗಿಲ್ಲ.

ಪೆಟ್ರೋಲ್ ಡೀಸೆಲ್ ಬಳಸುವಂಥ ಪ್ರಕ್ರಿಯೆ ಪ್ರಪಂಚದಲ್ಲಿ ದಿನದಿಂದ ದಿನಕ್ಕೆ ಅದೆಷ್ಟೋ ಪಟ್ಟು ಜಾಸ್ತಿಯಾಗಿರವಾಗ, ಅದೇ ಅನುಪಾತದಲ್ಲಿ ಉತ್ಪಾದನೆ ಆಗದೇ ಇರುವಾಗ ಬೆಲೆ ಏರಿಕೆ ಎನ್ನುವುದು ಸಹಜವಲ್ಲವೇ… ಹಾಗಾದರೆ ಇದಕ್ಕೆ ಕಾರಣರು ಯಾರು ಎಂದಾಗ ಪ್ರತ್ಯಕ್ಷವಾಗಿ ವಾಹನ ಬಳಸುವವರೇ ತಾನೆ. ವರ್ಷದಿಂದ ವರ್ಷಕ್ಕೆ ಜನಸಂಖ್ಯೆಯ ಜತೆ ವಾಹನದ ಸಂಖ್ಯೆಯೂ, ಬಳಕೆಯೂ ಹಲವು ಪಟ್ಟುಗಳೇ ಜಾಸ್ತಿಯಾದಾಗ ತೈಲ ಬೆಲೆ ಕಡಿಮೆಯಾಗುವುದಾದರೂ ಹೇಗೆ? ಅತಿಯಾದ ಅನಿವಾರ್ಯ ಪ್ರಸಂಗಗಳ ಹೊರತು ವಾಹನ ಬಳಕೆಯನ್ನು ಕಡಿಮೆ ಮಾಡಬೇಕಾದುದು ನಮ್ಮ ಆದ್ಯ ಕರ್ತವ್ಯವಾಗಬೇಕು. ಆದರೆ ನಾವು ಎಲ್ಲವನ್ನೂ ಅನಿವಾರ್ಯವೆಂದೇ ಪರಿಗಣಿಸುವುದಾದರೆ ತೈಲ ಬೆಲೆ ಏರಿಕೆಯ ಬಾಧೆ ನಮಗೆಲ್ಲಿದೆ? ಅಗತ್ಯವೋ ಅನಗತ್ಯವೋ ನಾವೆಲ್ಲರೂ ವಾಹನಗಳಿಗೆ ಅದೆಷ್ಟು ಅವಲಂಬಿತರಾಗಿದ್ದೇವೆ ಎಂದರೆ ತೈಲ ಬೆಲೆ ಇನ್ನೂ ದುಪ್ಪಟ್ಟಾದರೂ ವಾಹನ ಬಳಕೆ ಕಡಿಮೆಯಾಗದು. ಎಲ್ಲರೂ ಬೆಲೆ ಜಾಸ್ತಿ ಎಂಬ ಬೊಬ್ಬೆ ಹೊಡೆದರೂ ಯಾರೂ ಇರುವಂಥ ವಾಹನಗಳನ್ನು ಕಡಿಮೆ ಮಾಡಿಕೊಳ್ಳುವುದಿಲ್ಲ. ಬದಲಾಗಿ ಪ್ರತಿಯೊಂದು ಮನೆಯಲ್ಲೂ ವಾಹನಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಜಾಸ್ತಿಯೇ ಆಗುತ್ತದೆ. ಹಾಗೆಂದು ವಾಹನ ಬಳಸುವವರು ಯಾರೂ ತೈಲ ಬೆಲೆ ಜಾಸ್ತಿ ಎಂದು ಬೊಬ್ಬೆ ಹಾಕುವುದೂ ಇಲ್ಲ. ಅವರವರಿಗೆ ಬೇಕಾದಂತೆ ಅವರವರು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ.

Home

ಹಾಗಾದರೆ ಇದರ ಬಾಧೆ ವಾರ್ತಾ ಪತ್ರಿಕೆಗಳಿಗೆ, ಟಿ.ವಿ. ಮಾಧ್ಯಮದವರಿಗೆ ಮಾತ್ರ ಒಂದು ಇಡೀ ದಿವಸದ ಪ್ರಚಾರಕ್ಕೆ ಆಹಾರವಾಗುವುದು ವಿಪರ್ಯಾಸ. ಟಿ.ವಿ.ಯಲ್ಲಿ ಬೊಬ್ಬೆ ಹೊಡೆಯುವವರೇನು ವಾಹನವಿಲ್ಲದವರಲ್ಲ. ಅವರೇನು ನಡೆದುಕೊಂಡು ಹೋಗಿ ಟಿ.ವಿ. ಮುಂದೆ ಕೂತವರಲ್ಲ. ಬೇಕಾಬಿಟ್ಟಿ ವಾಹನಕ್ಕೆ ಅವಲಂಬಿತರಾಗಿರುವವರಿಗೆ ತೈಲಬೆಲೆ ಹೆಚ್ಚಾಗಿದೆ ಎನ್ನುವ ನೈತಿಕತೆಯೇ ಇಲ್ಲ. ತಪ್ಪು ನಮ್ಮಲ್ಲೇ ಇದೆ. ಪ್ರತಿಯೊಬ್ಬರೂ ವಾಹನಗಳನ್ನು ಕನಿಷ್ಟವಾಗಿ ಉಪಯೋಗಿಸಿದಾಗ ಈ ತೈಲಬೆಲೆ ಏರುವಿಕೆಗೆ ಕಡಿವಾಣ ಹಾಕಬಹುದು. ಇದ್ದ ವಾಹನಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬಹುದು. ಹೊಸ ಹೊಸ ವಾಹನಗಳ ಖಯಾಲಿಯನ್ನು ಬಿಡಬಹುದು. ಹಿಂದಿನವರಂತೆ ನಡೆಯುವ ಪ್ರಕ್ರಿಯೆಯನ್ನು ಆರೋಗ್ಯ ದೃಷ್ಟಿಯಿಂದಾದರೂ ವೃದ್ಧಿಸಬಹುದು. ವಾಹನವಿದೆಯೆಂದು ಅನವಶ್ಯಕವಾಗಿ ತಿರುಗುವುದನ್ನು ನಿಲ್ಲಿಸಬಹುದು. ಸಾರ್ವಜನಿಕ ವಾಹನಗಳನ್ನು ಸಾಧ್ಯವಾದಷ್ಟು ಬಳಸಬಹುದು. ಸಾಧಾರಣ ಒಂದು ಕಿ.ಮಿ.ಗಿಂತ ಕಡಿಮೆ ದೂರವಾದರೆ ನಡೆದೇ ಹೋಗುವೆನೆಂಬ ಸಂಕಲ್ಪ ಮಾಡಬಹುದು… ಇಂಥ ಹಲವು ವಿಚಾರಗಳಿಂದ ತೈಲಬೆಲೆ ಏರಿಕೆಯನ್ನು ತಡೆಗಟ್ಟುವಲ್ಲಿ ನಮ್ಮ ಕೊಡುಗೆಯನ್ನು ಸಾಧ್ಯವಾದಷ್ಟು ಕೊಡಬಹುದು. ಅದನ್ನು ಬಿಟ್ಟು ಸಮಸ್ಯೆ ನಮ್ಮಲ್ಲಿಟ್ಟುಕೊಂಡು ಸರಕಾರವನ್ನು ತರಾಟೆಗೆ ತೆಗೆದುಕೊಂಡಲ್ಲಿ ವಿಪರ್ಯಾಸವಾಗುವುದಿಲ್ಲವೇ?

-ಬಾಲಕೃಷ್ಣ ಸಹಸ್ರಬುಧ್ಯೆ, ಮುಂಡಾಜೆ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಅಂತರಂಗದ ಚಳವಳಿ: ಅಪರೂಪದ ಗುಣಗಳು ಸಾರ್ವತ್ರಿಕವಾಗಲಿ

Upayuktha

ಗುಟ್ಕಾ ನಿಷೇಧ ವದಂತಿ ನಂಬಬೇಡಿ, ಬೆಳೆಗಾರರಿಗೆ ಆತಂಕದ ಅಗತ್ಯವಿಲ್ಲ: ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ

Upayuktha

ಅಧ್ಯಾತ್ಮ: ಗಣಪತಿ ಅಥರ್ವಶೀರ್ಷದಲ್ಲಿ ಬರುವ ಮ‍ಂತ್ರಗಳ ಭಾವಾರ್ಥ

Upayuktha