ಕಲೆ ಸಂಸ್ಕೃತಿ

ಗಮಕ: ಕೌರವೇಂದ್ರನ ಕೊಂದೆ ನೀನು

ಎಸ್‌ಎಸ್‌ಎಲ್‌ಸಿ ಕನ್ನಡ ಪುಸ್ತಕದಲ್ಲಿನ ಒಂದು ಪದ್ಯ ಪಾಠ ಇದೆ. ಕುಮಾರವ್ಯಾಸ ಕರ್ಣಾಟ ಭಾರತ ಕಥಾ ಮಂಜರಿಯಿಂದ ಆಯ್ದ ಭಾಗವಿದು.

“ನನ್ನನ್ನು ಸಲಹಿದ ನನ್ನ ಒಡೆಯ ದುರ್ಯೋಧನನಿಗೆ ‘ಶತ್ರುಗಳ ತಲೆಯನ್ನು ಕಡಿದು ಒಪ್ಪಿಸುವೆನು ಎನ್ನುವ ಆತುರದಲ್ಲಿದ್ದೆನು, ಆದರೆ ಕೃಷ್ಣ ನೀನು ನನ್ನ ಜನ್ಮ ರಹಸ್ಯವನ್ನು ಹೇಳಿ ಕೌರವೇಂದ್ರನನ್ನು ಕೊಂದುಹಾಕಿದೆ’ ಎಂದು ಕರ್ಣನು ನೋವಿನಿಂದ ಕೃಷ್ಣನಿಗೆ ಹೇಳುವ ಅದ್ಭುತ ಭಾವ ಸನ್ನಿವೇಶದ ಭಾಗ ಇದು.

ಸಂಧಾನ ವಿಫಲಗೊಂಡು ಧುರವೀಳ್ಯವನ್ನು ಸ್ವೀಕರಿಸಿ ಹಿಂದಿರುಗುತ್ತಿರುವ ಕೃಷ್ಣ, ಕರ್ಣನನ್ನು ಏಕಾಂತವಾಗಿ ಕರೆದು, ಪಾಂಡವ ಪಕ್ಷಕ್ಕೆ ಎಳೆಯುವ ಪ್ರಯತ್ನ ಮಾಡುತ್ತಾನೆ. ಮೇಲ್ನೋಟಕ್ಕೆ ಕರ್ಣನನ್ನು ಪಾಂಡವ ಪಕ್ಷಕ್ಕೆ ಎಳೆಯುವ ತಂತ್ರದಂತೆ ಕಂಡರೂ ಮೂಲದಲ್ಲಿ ಕರ್ಣನ ಮನೋಶಕ್ತಿಯನ್ನು ಕುಂದಿಸುವ, ಆ ಮೂಲಕ ಅಧರ್ಮ ಪಕ್ಷವಾದ ಕೌರವನನ್ನು ಹಣೆಯುವ ತಂತ್ರವೂ ಆಗಿರುತ್ತದೆ ಕೃಷ್ಣನದು.

ಕೃಷ್ಣ ಒಡ್ಡುವ ಆಮಿಷ, ಜನ್ಮ ರಹಸ್ಯ ತಿಳಿದ ಕರ್ಣನ ತಲ್ಲಣ- ದುಃಖದ ಮನಸ್ಥಿತಿಯನ್ನು, ಭಾವವನ್ನು, ಚಿತ್ರಣವನ್ನು ಕುಮಾರವ್ಯಾಸ ಕಾವ್ಯದಲ್ಲಿ ನಿರ್ಮಿಸುವ ಶೈಲಿ ಅದ್ಭುತ. ಬಳಸುವ ಶಬ್ದವಂತೂ ಅನನ್ಯ.

**
ಗಮಕದಲ್ಲಿ ಈ ಪದ್ಯಗಳನ್ನು ಭಾವ ತುಂಬಿ ಹಾಡುವುದು ಅದಕ್ಕೆ ಅಷ್ಟೇ ಭಾವನಾತ್ಮಕವಾಗಿ ಕೇಳುಗನ ಕಣ್ಣಿನಲ್ಲಿ ಪಸೆ ಹುಟ್ಟುವಂತೆ ವ್ಯಾಖ್ಯಾನಿಸುವುದು ಅಷ್ಟು ಸುಲಭದ ಕೆಲಸವಲ್ಲ.

ಅಂತಹ ಕಷ್ಟದ ಕೆಲಸವನ್ನು ಇಬ್ಬರು ಹುಡುಗರು “ಶಹಬ್ಬಾಸ್” ಎನ್ನುವಂತೆ ಮಾಡಿದ್ದಾರೆ.

ವಾಚನ: ಕುಮಾರ ಶ್ಯಾಮ್ ಪ್ರಮೋದ್ ಉಂಟುವಳ್ಳಿ, (ಹತ್ತನೇ ತರಗತಿ)

ವ್ಯಾಖ್ಯಾನ: ಕುಮಾರ ಅಭಿರಾಮ್ ಸಿಗದಾಳ್. (ಒಂಬತ್ತನೇ ತರಗತಿ)

ಅದೂ ಈ ಹುಡುಗರ ಮೊದಲ ಪ್ರಯತ್ನ. ಮೊದಲ ಪ್ರಯತ್ನದಲ್ಲೇ ಡಿಸ್ಟಿಂಗ್‌ಷನ್ ಮಾರ್ಕ್ಸ್ ಪಡೆಯುವಂತ ಪ್ರಯತ್ನ, ಪ್ರಯೋಗ.

ಗಮಕ ಶೈಲಿಯಲ್ಲಿ ಶಾಮ್ ಪ್ರಮೋದ್ ಹಾಡಿದ ಹತ್ತೂ ಪದ್ಯಗಳನ್ನು ಒಂದು ನಾಲ್ಕೈದು ಬಾರಿ ಕೇಳಿದರೆ ಮತ್ತೆ ಓದಿ ಕಂಠ ಪಾಠ ಮಾಡುವುದು ಬೇಡ, ತನ್ನಿಂದ ತಾನೆ ನೆನಪಲ್ಲಿ, ಕಂಠದಲ್ಲಿ ಉಳಿಯುತ್ತದೆ. ಅಷ್ಟು ಸೊಗಸಾಗಿ ವಾಚನ ಮಾಡಿದ್ದಾನೆ.

ಜನ್ಮ ರಹಸ್ಯ ತಿಳಿದು, ದುರ್ಯೋಧನನಿಗಾದ ಹಿನ್ನಡೆಯ ದುಃಖದಲ್ಲಿ, ನೋವಿನಲ್ಲಿ ಕರ್ಣನ ಕೊರಳ ನರಗಳು ಹಿಗ್ಗಿದವು, ಕರ್ಣನ ಕಣ್ಣೀರು ಧಾರೆಯಾಗಿ ಸುರಿಯಿತು. ವ್ಯಾಖ್ಯಾನ ಮಾಡಿದ ಅಭಿರಾಮನ ಮಾತು ಕೇಳುತ್ತ ಕೇಳುಗನಿಗೂ ಆ ಭಾವ ಮೂಡಿ ಕೊರಳ ನರಗಳು ಹಿಗ್ಗಿ ದೃಗುಜಲ ಉರವಣಿಸಿದರೆ ಆಶ್ಚರ್ಯವಿಲ್ಲ, ಅಷ್ಟು ಸೊಗಸಾದ ನಿರೂಪಣೆ.

**

ಮೂವತ್ತೆಂಟು ನಿಮಿಷದ ಈ ಆಡಿಯೋ ಕೇಳಿ. ಕೇಳಿದರೆ ವೇದ ಪಾರಾಯಣದ ಫಲ ಉಂಟಂತೆ. ಯೂಟ್ಯೂಬಲ್ಲಿ ಹಾಕಿದ್ದೇನೆ. ಕೇಳಿ ಅಭಿಪ್ರಾಯ ತಿಳಿಸಿ.

ಇಂತದ್ದನ್ನು ಇಷ್ಟ ಪಡುವ ನಿಮ್ಮ ಸ್ನೇಹಿತರಿಗೂ ಕಳಿಸಿ, ಪುಣ್ಯ ಅವರಿಗೂ ಬೇಡ್ವಾ? ಅದರಲ್ಲೂ 9 ಮತ್ತು 10ನೇ ತರಗತಿಯ ಮಕ್ಕಳಿರುವ ಮನೆಯ ನಂಬರ್‌ಗಳಿಗೆ ಕಳಿಸಿ. ಮುಂದಿನ SSLC ಪರೀಕ್ಷೆಯಲ್ಲಿ ಅವರಿಗೆ ಆರು ಮಾರ್ಕ್ಸ್ ಜಾಸ್ತಿ ಬಂದರೆ ನಿಮಗೂ ಖುಷಿ ಆಗಲ್ವಾ?

-ಅರವಿಂದ ಸಿಗದಾಳ್, ಮೇಲುಕೊಪ್ಪ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಅ.17-26: ‘ನಮ್ಮಕುಡ್ಲ’ದಲ್ಲಿ ದಶ ದಿನಗಳ ‘ದೇವೀ ಮಹಾತ್ಮೆ’ ಯಕ್ಷ ಕಾವ್ಯ ಕಥನ

Upayuktha

ಸುಮಧುರ ಕಂಠದ ಭಾಗವತರು ಚಂದ್ರಕಾಂತ್ ರಾವ್ ಮೂಡುಬೆಳ್ಳೆ

Upayuktha

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ‘ಭಜನಾ ಸಾಮ್ರಾಟ್’ ಆಡಿಷನ್ ಡಿ.12ಕ್ಕೆ

Upayuktha