ಕಲೆ ಸಂಸ್ಕೃತಿ ಜಿಲ್ಲಾ ಸುದ್ದಿಗಳು

ಕೋವಿಡ್ ಹಿನ್ನೆಲೆ: ಸಿರಿಗನ್ನಡ ವೇದಿಕೆ ವತಿಯಿಂದ ಉದ್ದೇಶಿತ ‘ಗಮಕ ಶ್ರಾವಣ’ ರದ್ದು

ಸಾಂದರ್ಭಿಕ ಚಿತ್ರ

ಕಾಸರಗೋಡು: ಬೆಂಗಳೂರಿನ ಕರ್ನಾಟಕ ಗಮಕ ಕಲಾ ಪರಿಷತ್ತಿನ ಕೇರಳ ಗಡಿನಾಡ ಘಟಕ ಹಾಗೂ ಕಾಸರಗೋಡಿನ ಸಿರಿಗನ್ನಡ ವೇದಿಕೆ ವತಿಯಿಂದ ಆಗಸ್ಟ್‌ 8 ಮತ್ತು 9ರಂದು ಆಯೋಜಿಸಲು ಉದ್ದೇಶಿಸಿದ್ದ ‘ಗಮಕ ಶ್ರಾವಣ’ ಕಾರ್ಯಕ್ರಮವನ್ನು ಕೋವಿಡ್ ಸಾಂಕ್ರಾಮಿಕದಿಂದ ಉದ್ಭವಿಸಿದ ಪರಿಸ್ಥಿತಿ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ರದ್ದುಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಕರ್ನಾಟಕ ಗಮಕ ಕಲಾ ಪರಿಷತ್ತು (ರಿ)ಬೆಂಗಳೂರು-ಈ ಸಂಸ್ಥೆಯ ಕೇರಳ ಗಡಿನಾಡ ಘಟಕವು 2008ರಲ್ಲಿ ಪ್ರಾರಂಭವಾಗಿ ಇದು ವರೆಗೆ ಗಮಕ ಕಲೆಯ ಪ್ರಚಾರಕ್ಕೆ ಸಂಬಂಧಿಸಿದ ನೂರಾರು ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ನಡೆಸುತ್ತಾ ಬಂದಿದೆ.

ಈ ಪೈಕಿ ಗಮಕ ತರಬೇತಿ ಶಿಬಿರಗಳು, ಗಮಕ ಮತ್ತು ಯಕ್ಷಗಾನಗಳ ತುಲನಾತ್ಮಕ ಪ್ರದರ್ಶನಗಳು ಮತ್ತು ಗಮಕ ವಾಚನ ಹಾಗೂ ವ್ಯಾಖ್ಯಾನ ಕಾರ್ಯಕ್ರಮಗಳು ಒಳಗೊಂಡಿವೆ. ಆದಿ ಗಮಕಿಗಳಾದ ಕುಶಲವರ ಜನ್ಮಮಾಸವಾದ ಶ್ರಾವಣದಲ್ಲಿ “ಗಮಕ ಶ್ರಾವಣ” ಎಂಬ ವಿಶಿಷ್ಟ ಕಾರ್ಯಕ್ರಮಗಳನ್ನು ಕಾಸರಗೋಡು ಜಿಲ್ಲೆಯ ಹಲವು ಕೇಂದ್ರಗಳಲ್ಲಿ ವಿಶೇಷವಾಗಿ ಆಚರಿಸಿಕೊಂಡು ಬರಲಾಗಿದೆ.

ಪರಿಷತ್ತಿನ ದಶಮಾನೋತ್ಸವನ್ನೂ ಊರ ಪರವೂರ ಘನ ವಿದ್ವಾಂಸರ ಭಾಗವಹಿಸುವಿಕೆಯೊಂದಿಗೆ ಕಾಸರಗೋಡಿನ ಹವ್ಯಕ ಸಭಾ ಭವನದಲ್ಲಿ ಎರಡು ದಿನಗಳ ಕಾಲ ಅದ್ದೂರಿಯಾಗಿ ಆಚರಿಸಲಾಗಿದೆ. ಕೆಲವು ಕಾರ್ಯಕ್ರಮಗಳನ್ನು ಸಿರಿಗನ್ನಡ ವೇದಿಕೆಯ ಕೇರಳ ಘಟಕದ ಸಹಯೋಗದೊಂದಿಗೆ ವ್ಯವಸ್ಥೆಗೊಳಿಸಲಾಗಿದೆ.

ಪ್ರಕೃತ ವರ್ಷದಲ್ಲಿ ಗಮಕ ಮಾಸಾಚರಣೆಯ ಹನ್ನೆರಡನೆಯ ವರ್ಷವನ್ನು ಸಿರಿಗನ್ನಡ ವೇದಿಕೆಯ ಸಹಯೋಗದೊಂದಿಗೆ ಇದೇ ಅಗೋಸ್ತು ತಿಂಗಳ 8 ಮತ್ತು 9ರಂದು ಕಾಸರಗೋಡಿನ ಹವ್ಯಕ ಸಭಾ ಭವನದಲ್ಲಿ ಉತ್ಸವ ರೂಪದಲ್ಲಿ ಆಚರಿಸಲು ತೀರ್ಮಾನಿಸಲಾಗಿತ್ತು.

ಈ ನಿಟ್ಟಿನಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ಹೆಸರಾಂತ ಗಮಕಿಗಳನ್ನು ಆಹ್ವಾನಿಸಲಾಗಿದೆ. ಆದರೆ ಇದೀಗ ಇಡೀ ಪ್ರಪಂಚಕ್ಕೇ ವಕ್ರಿಸಿದ ಕೋವಿಡ್ 19 ಮಹಾಮಾರಿಯ ದೆಸೆಯಿಂದ ಪ್ರಕೃತ ವರ್ಷದ ಗಮಕ ಶ್ರಾವಣ ತರಬೇತಿ ಶಿಬಿರವನ್ನು ಮತ್ತು ಶ್ರಾವಣ ಮಾಸದ ವಿಶೇಷ ವಾಚನ-ವ್ಯಾಖ್ಯಾನ ಕಾರ್ಯಕ್ರಮಗಳನ್ನು ಅನಿವಾರ್ಯವಾಗಿ ಕೈಬಿಡಲಾಗಿದೆ.

ಗಮಕ ಕಲಾಸಕ್ತರು ದಯವಿಟ್ಟು ಗಮನಿಸಿ ಸಹಕರಿಸಬೇಕೆಂದು ಗಮಕ ಪರಿಷತ್ತಿನ ಅಧ್ಯಕ್ಷ ತೆಕ್ಕೇಕೆರೆ ಶಂಕರನಾರಾಯಣ ಭಟ್ ಮತ್ತು ಪ್ರಧಾನ ಕಾರ್ಯದರ್ಶಿ ಹಾಗೂ ಸಿರಿಗನ್ನಡ ವೇದಿಕೆಯ ಅಧ್ಯಕ್ಷ ವಿ.ಬಿ. ಕುಳಮರ್ವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಕ್ವಾರಂಟೈನ್ ನಲ್ಲಿ ಇರುವವರಿಗೆ ಸೂಕ್ತ ವ್ಯವಸ್ಥೆ: ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಸೂಚನೆ

Upayuktha

ಪಡುಬಿದ್ರಿ ಬೀಚ್ ಗೆ ಶೀಘ್ರದಲ್ಲಿ ಬ್ಲೂ ಫ್ಲಾಗ್ ಮಾನ್ಯತೆ: ಉಡುಪಿ ಡಿಸಿ ಜಿ. ಜಗದೀಶ್

Upayuktha

130 ತಾಲೂಕುಗಳನ್ನು “ಪ್ರವಾಹ ಪೀಡಿತ” ಎಂದು ಘೋಷಣೆ

Harshitha Harish

Leave a Comment

error: Copying Content is Prohibited !!