ಲೇಖನಗಳು ಹಬ್ಬಗಳು-ಉತ್ಸವಗಳು

ಗಣಪನಿಗೆ ಪ್ರಿಯವಾದ ಗರಿಕೆ

ನಿತ್ಯ ಪೂಜೆಗಳಲ್ಲಿ ವಿವಾಹ ಉಪನಯನ ನಾಮಕರಣ ಗೃಹಪ್ರವೇಶ ಹೀಗೆ ಎಲ್ಲ ಕಾರ್ಯಗಳಿಗೂ ಮೊದಲು ಪೂಜೆ ಗಣಪತಿಗೆ ಸಲ್ಲುತ್ತದೆ.

ಗಣೇಶನ ಪೂಜೆ ಪುರಾತನವಾದದ್ದು. ಗಣಪತಿ ಗುಡಿಯಿಲ್ಲದ ಊರಿಲ್ಲ ಎಂಬ ಕಲ್ಪನೆಗಳಿಗೂ ಸಾಧ್ಯವಿಲ್ಲ‌. ಕಾವ್ಯಗಳಲ್ಲಿ  ಸಾಹಿತ್ಯ, ಜಾನಪದ ಚಿತ್ರಕಲೆಗಳಲ್ಲಿ ಮೂಡಿದೆ. ವಿವಿಧ ದೇಶ ವಿದೇಶಗಳಲ್ಲಿ  ಹಲವು ವಿನ್ಯಾಸದ ಮೂರ್ತಿಗಳನ್ನು ಕಾಣಬಹುದು.

ಗಣೇಶ ಹಬ್ಬವೆಂದರೆ ಎಲ್ಲರಿಗೂ ಎಲ್ಲಿಲ್ಲದ ಸಂತಸ. ಮನೆಗಳಲ್ಲಿ, ರಸ್ತೆಗಳಲ್ಲಿ ಗಣೇಶನ ವಿಗ್ರಹ  ಕುಳ್ಳಿರಿಸಿ ಸಂಭ್ರಮಿಸುತ್ತಾರೆ. ವಿವಿಧ ಕಾರ್ಯ ಕ್ರಮಗಳನ್ನು ಕೈಗೊಂಡು ಆನಂದಿಸುತ್ತಾರೆ.

ವಿದ್ಯಾ ಗಣಪತಿ ಪೂಜೆ ಮಾಡಿದರೆ, ಓದಿನಲ್ಲಿ ಹೆಚ್ಚಿನ ಲಾಭವಾಗಲಿದೆ ಎನ್ನುವ ಮಾತಿದೆ.

ಗಣಪತಿ ಪೂಜೆ ಎಂದರೆ ನಮಗೆ ನೆನಪಾಗುವುದು ಗರಿಕೆ ಹುಲ್ಲು, ಪ್ರತಿ ವರ್ಷ ಗಣಪತಿ ಹಬ್ಬ ಬಂದಾಗ ಎಲ್ಲಾ ಗರಿಕೆಗೆ ಬಲು ಬೇಡಿಕೆ. ಹೋಮ ಹವನಗಳಿಗೆ ಗರಿಕೆ ಅಗತ್ಯವಾದ ವಸ್ತು. ಆನೆ ಮುಖ ದವನಾದುದರಿಂದ ಗರಿಕೆ ಮುಖ್ಯವಾದವು. 21 ಗರಿಕೆಗಳಿಂದ ಪೂಜಿಸಿ 21 ಮೋದಕಗಳನ್ನು ಭಕ್ತಿ ಶ್ರದ್ಧೆಗಳಿಂದ ಅರ್ಪಿಸಿದರೆ ಅತಿ ಬೇಗ ವರವನ್ನು ಕರುಣಿಸುವರು.

ಅಂದಿನ ಪೌರಾಣಿಕ ಕಥೆಗಳಲ್ಲಿ ಗಣಪತಿಯು ತನ್ನನ್ನು ಮದುವೆಯಾಗಬೇಕೆಂದು ಓರ್ವ ಅಪ್ಸರೆಯು ಧ್ಯಾನ ಮಗ್ನನಾಗಿದ್ದ ಗಣಪತಿಯ ಧ್ಯಾನಭಂಗ ಮಾಡಿದಳು.

ಗಣಪತಿಯು ವಿವಾಹಕ್ಕೆ ನಿರಾಕರಿಸಿದ್ದರಿಂದ ಅಪ್ಸರೆಯು ಗಣಪತಿಗೆ ಶಾಪ ಕೊಟ್ಟಳು. ಇದರಿಂದ ಗಣಪತಿಯ ತಲೆಗೆ ದಾಹವಾಗ ತೊಡಗಿತು.

ಈ ದಾಹವನ್ನು ಕಡಿಮೆ ಮಾಡಿಕೊಳ್ಳಲು ಗಣಪತಿಯು ತಲೆಯ ಮೇಲೆ ದೂರ್ವೆಗಳನ್ನು ಧರಿಸಿದನು. ಈ ಕಾರಣಕ್ಕಾಗಿ ಗಣಪತಿಗೆ ದೂರ್ವೆಗಳನ್ನು ಅರ್ಪಿಸುತ್ತಾರೆ.

ಆಯುರ್ವೇದವು ಸಹ ‘ದೂರ್ವೆಯ ರಸದಿಂದ ಶರೀರದ ಉಷ್ಣತೆಯು ಕಡಿಮೆಯಾಗುತ್ತದೆ ಎಂದು ಹೇಳುತ್ತದೆ. ನಾವು ಪೂಜಿಸುವ ಮೂರ್ತಿಯಲ್ಲಿ ದೇವತ್ವವು ಹೆಚ್ಚಿಗೆ ಬಂದು ನಮಗೆ ಚೈತನ್ಯದ ಲಾಭವಾಗಬೇಕು. ಎಂಬುದು ಪೂಜೆಯ ಒಂದು ಉದ್ದೇಶವಾಗಿರುತ್ತದೆ.

ಆದುದರಿಂದ ಆಯಾಯ ದೇವತೆಗಳ ತತ್ತ್ವವನ್ನು ಹೆಚ್ಚೆಚ್ಚು ಆಕರ್ಷಿಸುವಂತಹ ವಸ್ತುಗಳನ್ನು ದೇವತೆಗಳಿಗೆ ಅರ್ಪಿಸುವುದು ಸೂಕ್ತವಾಗಿದೆ. ದೂರ್ವೆಯಲ್ಲಿ ಗಣೇಶ ತತ್ತ್ವವನ್ನು ಆಕರ್ಷಿಸುವ ಕ್ಷಮತೆಯು ಎಲ್ಲಕ್ಕಿಂತ ಹೆಚ್ಚಿಗೆ ಇರುವುದರಿಂದ ಗಣಪತಿಗೆ ದೂರ್ವೆಗಳನ್ನು ಅರ್ಪಿಸುತ್ತಾರೆ. ದೂರ್ವೆಗಳಿಗೆ ೩, ೫, ೭ ಹೀಗೆ ಬೆಸ ಸಂಖ್ಯೆಯ ಗರಿಗಳನ್ನು ಜೋಡಿಸುತ್ತಾರೆ.

ದೂರ್ವೆಗಳನ್ನು ಒಟ್ಟಿಗೆ ಅಟ್ಟಿ ಮಾಡಿ ಕಟ್ಟುತ್ತಾರೆ. ದೂರ್ವೆಗಳನ್ನು ಒಟ್ಟಿಗೆ ಕಟ್ಟುವುದರಿಂದ ಅವುಗಳ ಸುಗಂಧವು ಹೆಚ್ಚು ಸಮಯ ಉಳಿಯುತ್ತದೆ. ಅವು ಹೆಚ್ಚು ಸಮಯ ತಾಜಾ ಆಗಿರಬೇಕೆಂದು ಅವುಗಳನ್ನು ನೀರಿನಲ್ಲಿ ಅದ್ದಿ ಅರ್ಪಿಸುತ್ತಾರೆ.

ಗರಿಕೆಯನ್ನು ಹೆಚ್ಚಾಗಿ ಮನೆ ಅಂಗಳದಲ್ಲಿ ಹುಲ್ಲಿನಂತೆ ಹರಡಿ ಬೆಳೆಯುವುದನ್ನು ಕಾಣಬಹುದು.

ಗರಿಕೆಯ ಹಲವಾರು ಉಪಯೋಗ ನೋಡ ಬಹುದು. ಗರಿಕೆ ಹುಲ್ಲಿನಲ್ಲಿ  ಆಯುರ್ವೇದದ ಗುಣಗಳಿವೆ.

ಆಯುರ್ವೇದದ ಪ್ರಕಾರ ಗರಿಕೆಯ ರಸವು ದೇಹದ ಉಷ್ಣತೆಯನ್ನು ಕಡಿಮೆಮಾಡುತ್ತದೆ.

ಗರಿಕೆಯು ಬುದ್ಧಿಯ ಮೇಲೆ ಪ್ರಭಾವ ಬೀರುತ್ತದೆ. ಕೆಟ್ಟ ಕನಸುಗಳನ್ನು ದೂರ ಮಾಡುತ್ತದೆ ಎಂಬ ಮಾತಿದೆ.

ಪಿತ್ತಾ ನಿವಾರಣೆಗೆ ಗರಿಕೆ ಕಷಾಯವನ್ನು ಉಪಯೋಗಿಸುತ್ತಾರೆ. ಗಣೇಶನ ಪೂಜೆಗೆ ಗರಿಕೆ ಶ್ರೇಷ್ಠ ಗರಿಕೆಯನ್ನು ದೂರ್ವೆ ಎಂದೂ ಕರೆಯುತ್ತಾರೆ.

ಗರಿಕೆ ಹುಲ್ಲು ಔಷಧಿಗಳಲ್ಲಿ ಅತಿ ಮಹತ್ವ ಪಡೆದಿದ್ದು, ದನ ಕರು, ಆಡು, ಕುರಿ, ಕುದುರೆ, ಮೊಲ, ಜಿಂಕೆಗಳಿಗೆ ಬಹು ಪ್ರಿಯವಾದ ಹಾಗೂ ರುಚಿಕರವಾದ ಆಹಾರ. ಅತ್ಯಂತ ಆರೋಗ್ಯಕರ, ಶಕ್ತಿದಾಯಕ. ರಕ್ತ ಶುದ್ಧ ಮಾಡುತ್ತದೆ.
ಅಸ್ತಮ ಖಾಯಿಲೆಯ ಬಹಳಷ್ಟು ಸುಧಾರಣೆ ಯಾಗುವುದು.

ಗರಿಕೆಯಲ್ಲಿ ಬಿಳಿ, ನೀಲಿ(ಕರಿ), ಪುರುಷ, ಸ್ತ್ರೀ ಪ್ರಕಾರಗಳಿವೆ. ಇವುಗಳಲ್ಲಿ ಕರಿ ಗರಿಕೆ ಶ್ರೇಷ್ಠವೆಂದು ಪರಿಗಣಿಸಲಾಗಿದೆ. ಗರಿಕೆಯು ರಕ್ತಪಿತ್ತ, ರಕ್ತದೋಷ, ರಕ್ತಹೀನತೆಗೆ ದಿವ್ಯ ಔಷಧಿ. ಅಲ್ಲದೆ ದೇಹದ ಯಾವುದೇ ಭಾಗದಲ್ಲಿಯ ರಕ್ತ ಸೋರುವಿಕೆಯನ್ನು ನಿಲ್ಲಿಸುವ ಅದ್ಭುತ ಗುಣ ಇದಕ್ಕಿದೆ.

ಚರ್ಮವ್ಯಾಧಿ, ಮೂಲವ್ಯಾಧಿ, ಕ್ಷಯ ರೋಗ ನಿವಾಕರ ಹಾಗೂ ಶಕ್ತಿವರ್ಧಕ ಆಗಿದೆ. ಗರಿಕೆಯಲ್ಲಿ ಹತ್ತಕ್ಕಿಂತ ಹೆಚ್ಚು ಆಹಾರ ಸತ್ವ ಇದೆಯೆಂದು ಇತ್ತೀಚೆಗಿನ ಸಂಶೋಧನೆಯಿಂದ ತಿಳಿದು ಬಂದಿದೆ. ವಿಶೇಷವಾಗಿ ಸ್ತ್ರೀಯರಿಗೆ ಅತ್ಯಂತ ಉಪಯುಕ್ತ ಔಷಧಿ.

ಮುಟ್ಟಿನ ಹೊಟ್ಟೆನೋವು, ಅಕಾಲಿಕ ಋತುಸ್ರಾವ ಇತ್ಯಾದಿ ಹಲವು ಸ್ತ್ರೀ ರೋಗಗಳನ್ನು ಗುಣ ಪಡಿಸುತ್ತದೆಯಲ್ಲದೇ ದೇಹದ ಕೊರತೆಯನ್ನು ನಿವಾರಿಸುವ ಸಾಮರ್ಥ್ಯ ಹೊಂದಿದೆ.

ನಾಗರ ಹಾವಿನ ಕಡಿತದ ವಿಷ ನಿವಾರಣೆಗಾಗಿಯೂ ಇದನ್ನು ಬಳಸುತ್ತಾರೆ. ಅಲ್ಲದೆ ಗರಿಕೆ ರಸ ಮತ್ತು ಜೇನು ತುಪ್ಪ ಒಂದೊಂದು ಚಮಚ ಬೆರೆಸಿ ನಿತ್ಯ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ   ರಕ್ತಹೀನತೆ, ಸ್ತ್ರೀಯರ ಮುಟ್ಟುನೋವು, ಸ್ರಾವ ನಿವಾರಣೆಯಾಗುವುದು. ಹೀಗೆ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ.

✍ಹರ್ಷಿತಾ ಹರೀಶ್ ಕುಲಾಲ್

Related posts

‘ವಿಶ್ವ ಕ್ಯಾನ್ಸರ್ ಜನಜಾಗೃತಿ ದಿನ’- ನವೆಂಬರ್- 7

Upayuktha

ನಾವು ಅಡುಗೆಯವರು… ತಾಯಿ ಅನ್ನಪೂರ್ಣೇಶ್ವರಿಯ ಸೇವಕರು…

Upayuktha

ಮಲೆನಾಡಿನ ಗಿರಿಗಳಲ್ಲಿ ನಿತ್ಯ ಸೌಂಡ್ ಎಫೆಕ್ಟ್!

Upayuktha