ರೂರ್ಕೆಲಾ: ರೂರ್ಕೆಲಾ ಸ್ಟೀಲ್ ಪ್ಲಾಂಟ್ ನ ಕಲ್ಲಿದ್ದಲು ರಸಾಯನಿಕ ಘಟಕದಲ್ಲಿ ವಿಷಯುಕ್ತ ಅನಿಲ ಸೋರಿಕೆಯಾದ ಪರಿಣಾಮ ನಾಲ್ವರು ಗುತ್ತಿಗೆ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ.

ನಾಲ್ವರು ಕಾರ್ಮಿಕರು ಮೃತಪಟ್ಟಿರುವುದು ರೂರ್ಕೆಲಾ ಇಸ್ಪಾಟ್ ಕಾರ್ಖಾನೆ ಕರ್ಮಚಾರಿ ಸಂಘ ದೃಢಪಡಿಸಿದೆ.
4ಮಂದಿ ಇಸ್ಪಾಟ್ ಸರ್ಕಾರಿ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿದೆ. ನಿರ್ವಹಣಾ ಗುತ್ತಿಗೆದಾರ ಸಂಸ್ಥೆ ಸ್ಟಾರ್ ಕನ್ಸ್ಟ್ರಕ್ಷನ್ ಮೂಲಕ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗಿತ್ತು ಎಂದು ಆರ್ ಎಸ್ ಪಿ ನಿರ್ವಹಣಾ ಮೂಲಗಳು ತಿಳಿಸಿವೆ.
ಗಾಯಗೊಂಡ ಇತರ ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ಗಣೇಶ್ ಚಂದ್ರ ಪೈಲಾ, ಅಭಿಮನ್ಯು ಸಾಹು, ರಬೀಂದ್ರ ಸಾಹು, ಬ್ರಹ್ಮಾನಂದ ಪಾಂಡಾ ಗಾಯಗೊಂಡ ಕಾರ್ಮಿಕರಾಗಿದ್ದಾರೆ.
ಆದರೆ ಈ ವಿಷಾನಿಲ ಸೋರಿಕೆಗೆ ಕಾರಣ ಏನೆಂಬುದು ತಿಳಿದು ಬಂದಿಲ್ಲ.