ರಾಜ್ಯ ಸಮುದಾಯ ಸುದ್ದಿ

ಫೆ.9: ಬೆಂಗಳೂರಿನ ಮಲ್ಲೇಶ್ವರಂನಲ್ಲಿ ‘ಗಾಯತ್ರಿ ಮಹೋತ್ಸವ’

ಬೆಂಗಳೂರು: ವೇದ ಮಂತ್ರಗಳಲ್ಲಿ ಅತ್ಯಂತ ಮಹಿಮಾನ್ವಿತವಾದ ಗಾಯತ್ರಿ ಮಂತ್ರದ ಮಹಿಮೆಯನ್ನು ಜಗತ್ತಿಗೆ ಸಾರುವ ‘ಗಾಯತ್ರಿ ಮಹೋತ್ಸವ’ವನ್ನು ಶ್ರೀ ಅಖಿಲ ಹವ್ಯಕ ಮಹಾಸಭಾ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಫೆಬ್ರವರಿ 9ರಂದು ಆಯೋಜಿಸಿದೆ.

ಸಮಾರಂಭದಲ್ಲಿ ಗಾಯತ್ರಿ ಮಂತ್ರದ ಅರ್ಥವನ್ನು ತಜ್ಞ ವಿದ್ವಾಂಸರು ವಿಭಿನ್ನ ದೃಷ್ಟಿಕೋನಗಳಿಂದ ವಿಶ್ಲೇಷಿಸಲಿದ್ದಾರೆ. ಜತೆಗೆ ಸಂಧ್ಯಾವಂದನೆಯ ಮಹತ್ವದ ಬಗ್ಗೆ ಅರಿವು ಮೂಡಿಸುವ ನಾನಾ ಕಾರ್ಯಕ್ರಮಗಳನ್ನು ದಿನವಿಡೀ ಆಯೋಜಿಸಲಾಗಿದೆ.

ಮಹೋತ್ಸವದ ಭಾಗವಾಗಿ ಬೆಳಗ್ಗೆ ಗಾಯತ್ರಿ ಹವನ, ಗಾಯತ್ರಿದೇವಿಯ ಮೆರವಣಿಗೆ, ಜ್ಯೋತಿ ಪ್ರಜ್ವಾಲನ ನಡೆಯಲಿದೆ. ಬಳಿಕ ಶತಾವಧಾನಿ ಆರ್‌. ಗಣೇಶ್ ಅವರಿಂದ ಗಾಯತ್ರಿ ತತ್ವದ ಬಗ್ಗೆ ಉಪನ್ಯಾಸವಿದೆ.

ನಂತರ ನಡೆಯುವ ಗಾಯತ್ರಿ ನಮನಮ್ ಕಾರ್ಯಕ್ರಮದಲ್ಲಿ ಗಾಯತ್ರಿ ಸಂದೇಶ, ಗಾಯತ್ರಿ ಉಪದೇಶ ಉಪನಯನದ ಬಗ್ಗೆ ವಿದ್ವಾನ್ ಜಗದೀಶ ಶರ್ಮಾ, ಸಂಪ ಅವರು ಉಪನ್ಯಾಸ ನೀಡಲಿದ್ದಾರೆ. ಸಂಧ್ಯಾವಂದನೆ ಯಾವಾಗ? ಹೇಗೆ? ಎಂಬ ವಿಷಯದಲ್ಲಿ ವಿದ್ವಾನ್ ರಾಮಕೃಷ್ಣ ಭಟ್ ಕೂಟೇಲು ಅವರು ಮಾತನಾಡಲಿದ್ದಾರೆ.

ಗಾಯತ್ರಿ ಮಹಿಮೆ ಕುರಿತು ಬೆಂಗಳೂರಿನ ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅವರು ಮಾತನಾಡಲಿದ್ದಾರೆ. ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರಿಂದ ‘ಮಹಾಬ್ರಾಹ್ಮಣ’ ವಾಚಿಕಾಭಿನಯವಿದೆ.

ಗಾಯತ್ರಿ ಮಂತ್ರದ ವೈಜ್ಞಾನಿಕ ಹಿನ್ನೆಲೆ ಕುರಿತು ಡಾ. ಕೆ. ರಂಗರಾಜ ಅಯ್ಯಂಗಾರ್‌ ಹಾಗೂ ‘ಬ್ರಹ್ಮಯಜ್ಞವೆಂಬ ನಿತ್ಯಕರ್ಮ’ ವಿಚಾರವಾಗಿ ಡಾ. ಪಾದೆಕಲ್ಲು ವಿಷ್ಣು ಭಟ್ ಅವರು ಉಪನ್ಯಾಸ ನೀಡಲಿದ್ದಾರೆ.

ಇಷ್ಟೇ ಅಲ್ಲದೆ, ವಿದುಷಿ ಲತಾಲಕ್ಷ್ಮೀಶ್ ನಿರ್ದೇಶನದಲ್ಲಿ ಸಂಯೋಗ ಕಲಾಶಾಲೆಯ ವಿದ್ಯಾರ್ಥಿಗಳಿಂದ – ಗಾಯತ್ರಿ ವಂದನಮ್ ನೃತ್ಯ ನಮನ ಪ್ರಸ್ತುತಿ ನಡೆಯಲಿದೆ.

ಮೈಸೂರಿನ ಅರುಂಧತಿ ವಸಿಷ್ಠ, ಮನೋಜ್ ವಸಿಷ್ಠ ಮತ್ತು ಬೆಂಗಳೂರಿನ ಗುರು ಕಿರಣ್ ಹೆಗಡೆ ಅವರಿಂದ ಗಾಯತ್ರಿ ನಾದನಮನ ಕಾರ್ಯಕ್ರಮಗಳು ನಡೆಯಲಿವೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ 71.81 ವಿದ್ಯಾರ್ಥಿಗಳು ಉತ್ತೀರ್ಣ

Upayuktha

ರಾಘವೇಶ್ವರ ಶ್ರೀಗಳ ಭೇಟಿ ಮಾಡಿದ ಸಂಸದ ತೇಜಸ್ವಿ ಸೂರ್ಯ

Upayuktha

ಕಾರು‌ ಅಪಘಾತ: ಶಾಸಕ ರಾಮದಾಸ್ ಅಪಾಯದಿಂದ ಪಾರು

Upayuktha