ಧರ್ಮ-ಅಧ್ಯಾತ್ಮ ಪ್ರಮುಖ ರಾಜ್ಯ ಸಮುದಾಯ ಸುದ್ದಿ

ಬೆಂಗಳೂರಿನ ಮಲ್ಲೇಶ್ವರಂ ಹವ್ಯಕ ಭವನದಲ್ಲಿ “ಗಾಯತ್ರಿ ಮಹೋತ್ಸವ” ಫೆ. 9ಕ್ಕೆ

ಬೆಂಗಳೂರು: ಗಾಯತ್ರಿ ಮಂತ್ರದ ಮಹಿಮೆಯನ್ನು ತಿಳಿಸುವ ಸಲುವಾಗಿ ಶ್ರೀ ಅಖಿಲ ಹವ್ಯಕ ಮಹಾಸಭೆಯ ಹವ್ಯಕ ಭವನದಲ್ಲಿ ಫೆಬ್ರವರಿ 9ರಂದು ಭಾನುವಾರ “ಗಾಯತ್ರಿ ಮಹೋತ್ಸವ” ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮಂತ್ರಾರ್ಥವನ್ನು ತಜ್ಞ ವಿದ್ವಾಂಸರು ವಿಭಿನ್ನ ದೃಷ್ಟಿಕೋನದಿಂದ ವಿಶ್ಲೇಷಿಸುವ, ಸಂಧ್ಯಾವಂದನೆಯ ಮಹತ್ವವನ್ನು ತಿಳಿಸುವ ವಿವಿಧ ವಿಚಾರ ಗೋಷ್ಠಿಗಳು ಈ ಕಾರ್ಯಕ್ರಮದಲ್ಲಿ ನಡೆಯಲಿದೆ.

ಗಾಯತ್ರಿ ದೇವಿಯ ಮೆರವಣಿಗೆ, ಜ್ಯೋತಿ ಜ್ವಾಲನದೊಂದಿಗೆ ಕಾರ್ಯಕ್ರಮ ಆರಂಭವಾಗಲಿದ್ದು, ಸಂಸದರಾದ ತೇಜಸ್ವಿ ಸೂರ್ಯ ಹಾಗೂ ಶಾಸಕರಾದ ರವಿಸುಬ್ರಹ್ಮಣ್ಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಶತಾವಧಾನಿ ಡಾ| ಆರ್. ಗಣೇಶ್ ‘ಗಾಯತ್ರಿ ತತ್ತ್ವ’ದ ಕುರಿತಾಗಿ ವಿಚಾರಗಳನ್ನು ಹಂಚಿಕೊಳ್ಳಲಿದ್ದು, ವಿದ್ವಾನ್ ಶಿವರಾಮ ಅಗ್ನಿಹೋತ್ರಿ ‘ಅಗ್ನಿಹೋತ್ರದ ವೈಶಿಷ್ಟ್ಯ’ದ ಕುರಿತಾಗಿ ಬೆಳಕು ಚೆಲ್ಲಲಿದ್ದಾರೆ. ‘ಗಾಯತ್ರಿ ಉಪದೇಶ – ಉಪನಯನ’ ವಿಚಾರವಾಗಿ ವಿದ್ವಾನ್ ಜಗದೀಶ ಶರ್ಮಾ ವಿಚಾರ ಮಂಡಿಸಲಿದ್ದು, ‘ಗಾಯತ್ರಿ ಮಂತ್ರದ ವೈಜ್ಞಾನಿಕ ಹಿನ್ನಲೆ’ ಕುರಿತಾಗಿ ಡಾ|| ರಂಗರಾಜ ಅಯ್ಯಂಗಾರ್ ತಿಳಿಸಿಕೊಡಲಿದ್ದಾರೆ.

ವಿದುಷಿ ಲತಾಲಕ್ಷ್ಮೀಶ್ ನಿರ್ದೇಶನದಲ್ಲಿ ಸಂಯೋಗ ಕಲಾಶಾಲೆಯ ಪ್ರಸ್ತುತಿಯ ‘ಗಾಯತ್ರಿ ವಂದನಮ್ – ನೃತ್ಯ ನಮನ’ ಹಾಗೂ ಶ್ರೀಮತಿ ಅರುಂಧತಿ ವಸಿಷ್ಠ ಹಾಗೂ ಶ್ರೀ ಮನೋಜ್ ವಸಿಷ್ಠರಿಂದ ‘ಗಾಯತ್ರಿ ನಾದನಮನ’ ಕಾರ್ಯಕ್ರಮಗಳು ನಡೆಯಲಿವೆ.

‘ನಿತ್ಯಕರ್ಮ – ಬ್ರಹ್ಮಯಜ್ಞ’ ಕುರಿತಾಗಿ ಡಾ| ಪಾದೆಕಲ್ಲು ವಿಷ್ಣು ಭಟ್ಟ, ಉಡುಪಿ, ‘ಗಾಯತ್ರಿ ಸಂದೇಶ’:
ಸಂಧ್ಯಾವಂದನೆಯ ಮಹತ್ತ್ವ ಕುರಿತಾಗಿ ವಿದ್ವಾನ್ ಹಿತ್ಲಳ್ಳಿ ನಾಗೇಂದ್ರ ಭಟ್ಟ, ಯಲ್ಲಾಪುರ ವಿಚಾರಗಳನ್ನು ಪ್ರಸ್ತುತಪಡಿಸಲಿದ್ದು, ಶ್ರೀ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರಿಂದ “ಮಹಾಬ್ರಾಹ್ಮಣ- ಕಾವ್ಯ ವಾಚನ” ಹಾಗೂ ಉದಯೋನ್ಮುಖ ಗಾಯಕ ಗುರುಕಿರಣ್ ಹೆಗಡೆ ಅವರಿಂದ ಗಾಯತ್ರಿ ನಾದನಮನ ನಡೆಯಲಿದೆ.

ಸಂಧ್ಯಾವಂದನೆ ಯಾವಾಗ ? ಹೇಗೆ ? ವಿಚಾರವಾಗಿ ವಿದ್ವಾನ್ ಕೂಟೇಲು ರಾಮಕೃಷ್ಣ ಭಟ್ಟ ಹಾಗೂ ಗಾಯತ್ರಿ ಮಹಿಮೆ ಕುರಿತಾಗಿ ವಿದ್ಯಾವಾಚಸ್ಪತಿ ಡಾ| ಅರಳುಮಲ್ಲಿಗೆ ಪಾರ್ಥಸಾರಥಿ ಉಪನ್ಯಾಸ ನೀಡಲಿದ್ದಾರೆ.

ಸಂಜೆ ‘ಗಾಯತ್ರಿ ದರ್ಶನ’
ಯಕ್ಷಗಾನ ತಾಳಮದ್ದಳೆ – ಪ್ರಸಂಗ ನಡೆಯಲಿದ್ದು, ಯಕ್ಷಕಲೆಯ ಮೂಲಕ ಗಾಯತ್ರಿ ಆರಾಧನೆ ಸಂಪನ್ನವಾಗಲಿದೆ.

ಸಮಾರೋಪ ಸಮಾರಂಭ “ಗಾಯತ್ರಿ ಸಭಾ”ದಲ್ಲಿ ರಾಜ್ಯದ ಸಚಿವ ಎಸ್. ಸುರೇಶ್ ಕುಮಾರ್ ಹಾಗೂ ಡಾ. ಕೆ. ಪಿ. ಪುತ್ತೂರಾಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.

ರಂಗಪೂಜೆ, ಗಾಯತ್ರಿ ಹವನ , ಗಾಯತ್ರಿ ನಮನ ಮುಂತಾದ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನವಾಗಲಿವೆ.

ಧಾರ್ಮಿಕ- ವೈಚಾರಿಕ- ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ವಿಚಾರಗಳ ಸಮ್ಮಿಲನದ “ಗಾಯತ್ರಿ ಮಹೋತ್ಸವ” ಭಾನುವಾರ ಬೆಳಗ್ಗೆ 7.30 ರಿಂದ ರಾತ್ರಿ 8.30 ವರೆಗೆ ಸಂಪನ್ನವಾಗಲಿದ್ದು, ದಿನಪೂರ್ತಿ ಗಾಯತ್ರಿ ದೇವಿಯ ಆರಾಧನೆ ವಿವಿಧ ಆಯಾಮಗಳಲ್ಲಿ ನಡೆಯಲಿದೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಬೆಂಗಳೂರು : ನಗರದ ಮೂರು ಸ್ಥಳ ಗಳಲ್ಲಿ ಅಪಘಾತ; 3 ಮಂದಿ ಸಾವು

Harshitha Harish

ಉಡುಪಿ : ಸಣ್ಣ ಕಥೆಗಳ ಸಾಹಿತಿ ಶ್ರೀಕಂಠ ಪುತ್ತೂರು ನಿಧನ

Harshitha Harish

ದಸರಾ ರಜೆ: ದ.ಕ ಜಿಲ್ಲೆಯಲ್ಲಿ ಅಕ್ಟೋಬರ್ 1ರಿಂದ 15 ರವರೆಗೆ

Upayuktha