ನಗರ ಸ್ಥಳೀಯ

ಕರುಳ ಬಳ್ಳಿಯ ಸಂಬಂಧ ಕಡಿದು ಹಾಕಿದ ಜಾಗತೀಕರಣ: ದ.ಕ. ಜಿಲ್ಲೆಯ ಕೃಷಿ ಸಂಸ್ಕೃತಿಯ ಅಸ್ಮಿತೆಗೆ ಹೊಡೆತ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಜಾಲಗೋಷ್ಠಿಯಲ್ಲಿ ವ್ಯಕ್ತವಾದ ಕಳವಳ

ಮಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಆಯೋಜಿಸಿದ್ದ ಅಂತರ್ಜಾಲ ವಿಚಾರ ಸಂಕಿರಣದಲ್ಲಿ ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೆಜ್ಮೆಂಟ್ ಕಾಲೇಜಿನ ಸಹ-ಪ್ರಾಧ್ಯಾಪಕಿ ಶ್ರೀಮತಿ ಅಕ್ಷಯ ಆರ್. ಶೆಟ್ಟಿ, ‘ದಕ್ಷಿಣ ಕನ್ನಡ ಜಿಲ್ಲೆಯ ಕೃಷಿ ಸಂಸ್ಕೃತಿಯ ಅಸ್ಮಿತೆ ಹಾಗೂ ಜಾಗತೀಕರಣ’ ಎಂಬ ವಿಷಯದ ಕುರಿತಂತೆ ದೀರ್ಘವಾದ ಉಪನ್ಯಾಸವನ್ನು ನೀಡಿದರು.

ಡಿಸೆಂಬರ್ 24 ರಂದು ಅಕಾಡೆಮಿಯ ಯೂಟ್ಯೂಬ್ ಮತ್ತು ಫೇಸ್ ಬುಕ್ ಚ್ಯಾನೆಲ್ ಗಳಲ್ಲಿ ಲೈವ್ ಆಗಿ ಪ್ರಸಾರ ಆದ ಪ್ರಸ್ತುತ ವಿಚಾರ ಸಂಕಿರಣದಲ್ಲಿ ಅಕಾಡೆಮಿಯ ರೆಜಿಸ್ಟ್ರಾರ್, ಕರಿಯಪ್ಪ ಎನ್. ಅತಿಥಿಗಳನ್ನು ಸ್ವಾಗತಿಸಿದರು.

ಕಾರ್ಯಕ್ರಮದ ಸದಸ್ಯ ಸಂಚಾಲಕರಾದ, ಶ್ರೀ ದತ್ತಗುರು ಸೀತಾರಾಮ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ‘ಬೇರೆ ಬೇರೆ ನೆಲೆಗಳಿಂದ ವೈವಿಧ್ಯಪೂರ್ಣವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಕುರಿತು ಪ್ರಸ್ತಾಪಿಸುತ್ತಾ ಅಪೂರ್ವವಾದ ಅಳಿಯ ಸಂತಾನ ಪರಂಪರೆಯನ್ನು ಉಳಿಸಿಕೊಂಡ ಜಿಲ್ಲೆಯಿಂದ, ಮಾತೃಮೂಲೀಯ ವ್ಯವಸ್ಥೆಯಲ್ಲಿ ಬೇರೆ ಬೇರೆ ತೆರನಾದ ಜವಬ್ಧಾರಿಗಳನ್ನು ನಿರ್ವಹಿಸುವ ಸ್ತ್ರೀಯನ್ನೇ ಉಪನ್ಯಾಸಕ್ಕೆ ಆಯ್ಕೆ ಮಾಡಲಾಗಿದೆ’, ಎಂಬುದಾಗಿ ಹೇಳಿದರು.

ಶ್ರೀಮತಿ ಅಕ್ಷಯ ಆರ್. ಶೆಟ್ಟಿಯವರು ತಮ್ಮ ಉಪನ್ಯಾಸದಲ್ಲಿ, ಸವಿಸ್ತಾರವಾಗಿ ಕರಾವಳಿ ಭಾಗದಲ್ಲಿ ಕೃಷಿ ವಿಕಸಿತಗೊಂಡ ಹಂತಗಳನ್ನು, ಕೃಷಿಯನ್ನೊಳಗೊಂಡ ಒಟ್ಟು ಬದುಕನ್ನು, -ಜನಪದ ಸಾಹಿತ್ಯ, ಭೌತಿಕ ಸಂಸ್ಕೃತಿ, ಸಾಮಾಜಿಕ ಆಚರಣೆ, ಆರಾಧನೆ ಮತ್ತು ಕ್ರೀಡೆಗಳ ಮೂಲಕ ವಿವರಿಸಿದರು.

ಮನುಷ್ಯ ಸಂಬಂಧಗಳನ್ನು ಬೆಸೆದಿದ್ದ ಕೃಷಿ ಬದುಕು, ಶ್ರಮ ಸಂಸ್ಕೃತಿಯ ಜೊತೆಜೊತೆಗೆ ಭೂಮಿಯೊಡನೆ ಒಂದು ಸಂಬಂಧವನ್ನು ಏರ್ಪಡಿಸಿತ್ತು. ಭೂಮಿಗೆ ಬೆನ್ನು ಹಾಕಿದ ಮನುಷ್ಯ, ಅನ್ನದ ಬಟ್ಟಲಿನಿಂದ ಅರ್ಥ ಸಂಸ್ಕೃತಿಯ ದಿಕ್ಕಿಗೆ ಸಾಗಿ, ಯಂತ್ರಗಳ ಜೊತೆಗೆ ಮುಂದುವರೆಯುತ್ತಾ ಭೂಮಿಯ ಜೊತೆಗಿನ ಕರುಳು ಬಳ್ಳಿಯ ಸಂಬಂಧವನ್ನು ಕಳೆದುಕೊಂಡು ಅನುಭವಿಸುತ್ತಿರುವ ಅನಾಥ ಭಾವವನ್ನು ತಮ್ಮ ಉಪನ್ಯಾಸದ ಕೊನೆಯಲ್ಲಿ ಉಲ್ಲೇಖಿಸಿದರು.

ಗದ್ದೆಯಲ್ಲಾಗಲಿ ಅಥವಾ ಅಡುಗೆ ಮನೆಯಲ್ಲಿ ಜೊತೆಯಾಗುತ್ತಿದ್ದ ಹೆಣ್ಣು ಮನಸ್ಸುಗಳು ಹೇಗೆ ತಮ್ಮ ಕೆಲಸದ ಜೊತೆ ಜೊತೆಗೇ ಹಂಚಿಕೊಳ್ಳುತ್ತಿದ್ದ ಕನಸು, ಆಸೆ, ಆಶೋತ್ತರ, ನೋವುಗಳು ಮನಸ್ಸಿಗೆ ಮದ್ದಾಗಿ ಪರಿಣಮಿಸುತ್ತಿದ್ದವು, ಎಂಬುದನ್ನು ತಮ್ಮ ಉಪನ್ಯಾಸದಲ್ಲಿ ಹೇಳಿದರು. ವಿಶಿಷ್ಟ ಆರಾಧನಾ ಪರಂಪರೆಗೆ ಹೆಸರುವಾಸಿಯಾದ ದಕ್ಷಿಣ ಕನ್ನಡದ ಭೂತಾರಾಧನೆ ಮತ್ತು ನಾಗಾರಾಧನಾ ಪದ್ಧತಿಗಳನ್ನು ಎಳೆ ಎಳೆಯಾಗಿ ವಿವರಿಸುತ್ತಾ ಅದರ ಹಿಂದಿನ ತಾತ್ವಿಕತೆಯನ್ನು ವಿವರಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾ. ಬಿ. ವಿ. ವಸಂತ ಕುಮಾರ್ ಅವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ, ‘ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಆಯೋಜಿಸಿರುವ ಕೃಷಿ ಸಂಸ್ಕೃತಿಯನ್ನು ಕುರಿತ ಹತ್ತನೆಯ ಅಂತರ್ಜಾಲ ವಿಚಾರ ಸಂಕಿರಣದಲ್ಲಿ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಕೃಷಿ ಬದುಕಿನ ಅಸ್ಮಿತೆಯನ್ನು ಪರಿಚಯಿಸುತ್ತಿದ್ದೇವೆ. ಯಾಕೆ ಅಕಾಡೆಮಿ ಇಂತಹ ಒಂದು ಕಾರ್ಯಕ್ರಮವನ್ನು ಕೈಗೊಂಡಿತ್ತೆಂದರೆ, ಕರ್ನಾಟಕದ ಹಿತವನ್ನು ಬಯಸುವುದೇ ಅಕಾಡೆಮಿಯ ಪ್ರಮುಖ ಉದ್ದೇಶವಾದ ಕಾರಣ, ಆ ಹಿತವನ್ನು ಸಾಧಿಸುವುದಕ್ಕೆ ಬೇಕಾದ ವಿಚಾರ, ಸಾಹಿತ್ಯ ಮತ್ತು ಜೀವನ ಪದ್ಧತಿಗಳನ್ನು ಮುನ್ನಲೆಗೆ ತರತಕ್ಕಂತಹ ಕಾರ್ಯಕ್ರಮಗಳನ್ನು, ಸಂಶೋಧನೆಗಳನ್ನು, ಕಮ್ಮಟಗಳನ್ನು ಆಯೋಜನೆ ಮಾಡಬೇಕು ಎನ್ನುವುದು ಕರ್ನಾಟಕ ಸರ್ಕಾರದ ಅಪೇಕ್ಷೆ ಕೂಡಾ ಆಗಿದೆ, ಎಂದರು.

ಮುಂದುವರೆದು, ‘ವಿದ್ಯಾಭ್ಯಾಸದ ಜೊತೆಜೊತೆಗೆ ಬ್ಯಾಂಕಿಗ್ ಉದ್ಯಮವಿರಬಹುದು, ಶಿಕ್ಷಣ ಕ್ಷೇತ್ರವಿರಬಹುದು, ಆರೋಗ್ಯ ಕ್ಷೇತ್ರವಿರಬಹುದು, ಅಂತರಾಷ್ಟ್ರೀಯ ವ್ಯಾಪಾರ ಸಂಬಂಧಗಳಿರಬಹುದು; ಹೀಗೆ ಭಿನ್ನ ಭಿನ್ನ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ತಮ್ಮದೇ ಆದ ಅನನ್ಯತೆಯನ್ನು ಮೆರೆದಿರುವ ದಕ್ಷಿಣ ಕನ್ನಡಿಗರು, ಮತ್ತು ಉತ್ತರ ಕನ್ನಡಿಗರು ಪರಂಪರೆಯ ಪ್ರಶ್ನೆ ಬಂದಾಗ ಭಾಂಧವ್ಯಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾರೆ’ ಎಂದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಮೂಡುಬಿದಿರೆ: ಫೆ.20ರಂದು ಕೋಟಿ-ಚೆನ್ನಯ ಜೋಡುಕರೆಯಲ್ಲಿ ಹೊನಲು ಬೆಳಕಿನ ಕಂಬಳೋತ್ಸವ

Sushmitha Jain

ತೀವ್ರ ಉಸಿರಾಟದ ಸಮಸ್ಯೆಯಿಂದ ಸುರತ್ಕಲ್‌ನ ಯುವಕ ಸಾವು: ಕೊರೊನಾ ಶಂಕೆ, ಪ್ರಯೋಗಾಲಯಕ್ಕೆ ಸ್ಯಾಂಪಲ್ ರವಾನೆ

Upayuktha

ಕರ್ತವ್ಯವೇ ಸೇವೆಯಾದಾಗ ಸಮಾಜ ಗುರುತಿಸುತ್ತದೆ: ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್

Upayuktha