ದೇಶ-ವಿದೇಶ ಪ್ರಮುಖ ವಾಣಿಜ್ಯ

ಪೇಟಿಎಂ ಅನ್ನು ಪ್ಲೇಸ್ಟೋರ್‌ನಿಂದ ಕಿತ್ತು ಹಾಕಿದ ಗೂಗಲ್‌: ನಿಯಮಗಳ ಉಲ್ಲಂಘನೆ ಆರೋಪ

ಹೊಸದಿಲ್ಲಿ: ಮೊಬೈಲ್ ಪಾವತಿ ಅಪ್ಲಿಕೇಶನ್ ಆಗಿರುವ ಪೇಟಿಎಂ ಅನ್ನು ಗೂಗಲ್‌ ತನ್ನ ಪ್ಲೇಸ್ಟೋರ್‌ನಿಂದ ಕಿತ್ತು ಹಾಕಿದೆ. ಗೇಮಿಂಗ್ ಕುರಿತ ತನ್ನ ನೀತಿ-ನಿಯಮಗಳನ್ನು ಪೇಟಿಎಂ ಉಲ್ಲಂಘಿಸಿದೆ ಎಂದು ಗೂಗಲ್‌ ಹೇಳಿದೆ.

ಆಪಲ್‌ನ ಪ್ಲೇಸ್ಟೋರ್‌ ಆಗಿರುವ ಐಓಎಸ್‌ನಲ್ಲಿ ಈಗಲೂ ಪೇಟಿಎಂ ಲಭ್ಯವಿದೆ. ಪೇಟಿಎಂ ಫಸ್ಟ್‌ ಹೆಸರಿನ ಗೇಮ್‌ಗಳಿಂದಾಗಿ ಆಪಲ್‌ ಕೂಡ ಅದನ್ನು ತೆಗೆದು ಹಾಕುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಟ್ವಿಟರ್‌ನಲ್ಲಿ ಈ ಬಗ್ಗೆ ಹೇಳಿಕೆ ನೀಡಿರುವ ಪೇಟಿಎಂ, ತನ್ನ ಆಂಡ್ರಾಯ್ಡ್ ಆ್ಯಪ್‌ ಹೊಸದಾಗಿ ಡೌನ್‌ಲೋಡ್‌ ಮಾಡುವವರಿಗೆ ಗೂಗಲ್ ಪ್ಲೇಸ್ಟೋರ್‌ನಲ್ಲಿ ತಾತ್ಕಾಲಿಕವಾಗಿ ಲಭ್ಯವಿರುವುದಿಲ್ಲ ಎಂದು ತಿಳಿಸಿದೆ.

ಶೀಘ್ರವೇ ಮತ್ತೆ ಪ್ಲೇಸ್ಟೋರ್‌ನಲ್ಲಿ ಬರುತ್ತೇವೆ. ಪೇಟಿಎಂ ಸಂಪೂರ್ಣ ಸುರಕ್ಷಿತವಾಗಿದ್ದು, ಗ್ರಾಹಕರು ನಮ್ಮ ಆಪ್‌ಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ ಎಂದಿನಂತೆ ಬಳಸಬಹುದು ಎಂದು ಪೇಟಿಎಂ ಟ್ವಿಟರ್‌ ಹ್ಯಾಂಡಲ್‌ ಸ್ಪಷ್ಟಪಡಿಸಿದೆ.

ಗೂಗಲ್‌ ಈ ರೀತಿ ತನ್ನ ಪ್ಲೇಸ್ಟೋರ್‌ನಿಂದ ಆ್ಯಪ್‌‌ಗಳನ್ನು ತೆಗೆದು ಹಾಕುತ್ತಿರುವುದು ಇದೇ ಮೊದಲಲ್ಲ. ಹಿಂದೊಮ್ಮೆ ಮೊಬಿಕ್ವಿಕ್‌ ಆ್ಯಪ್‌‌ ತನ್ನ ಬಳಕೆದಾರರನ್ನು ಆರೋಗ್ಯಸೇತು ಆ್ಯಪ್‌‌ಗೆ ರೀಡೈರೆಕ್ಟ್‌ ಮಾಡುತ್ತಿದೆ ಎಂದು ಆರೋಪಿಸಿ ಗೂಗಲ್ ಅದನ್ನೂ ತೆಗೆದುಹಾಕಿತ್ತು.

ಆ್ಯಪ್‌ ಒಳಗಿನಿಂದಲೇ ಇತರ ಪ್ಲಾಟ್‌ಫಾರ್ಮ್‌ಗಳಿಗೆ ರೀಡೈರೆಕ್ಟ್ ಮಾಡುವುದನ್ನು ಗೂಗಲ್‌ ಅನುಮತಿಸುವುದಿಲ್ಲ. ಪೇಟಿಎಂ ಪ್ರಕರಣದಲ್ಲಿ, ಅದು ಪೇಟಿಎಂ ಫಸ್ಟ್ ಗೇಮ್ಸ್‌ಗೆ ರೀಡೈರೆಕ್ಟ್ ಆಗುತ್ತಿತ್ತು ಎಂದು ಮೂಲಗಳು ಉಲ್ಲೇಖಿಸಿವೆ.

ಕಾನೂನುಬಾಹಿರವಾದ ಆನ್‌ಲೈನ್ ಕ್ಯಾಸಿನೊಗಳು ಮತ್ತು ಆನ್‌ಲೈನ್‌ ಜೂಜಾಟವನ್ನು ತಾನು ಬೆಂಬಲಿಸುವುದಿಲ್ಲ ಎಂದು ಗೂಗಲ್ ಸ್ಪಷ್ಟಪಡಿಸಿದೆ.

ಯಾವುದೇ ಆ್ಯಪ್‌‌ ಬಾಹ್ಯ ಕೊಂಡಿಗಳನ್ನು ಸಂಪರ್ಕಿಸುವಂತಿದ್ದರೆ ಅದನ್ನು ಗೂಗಲ್‌ ತೆಗೆದುಹಾಕುತ್ತದೆ.

ಒನ್‌97 ಕಮ್ಯುನಿಕೇಶನ್ಸ್‌ ಲಿಮಿಟೆಡ್‌ ಸಂಸ್ಥೆ ಪೇಟಿಎಂ ಮಾಲೀಕತ್ವ ಹೊಂದಿದ್ದು, ವಿಜಯ್ ಶೇಖರ್‌ ಶರ್ಮಾ ಇದರ ಸಂಸ್ಥಾಪಕರಾಗಿದ್ದಾರೆ. ಆದರೆ ಪ್ರಸ್ತುತ ಈ ಕಂಪನಿ ಚೀನಾದ ಆಲಿಬಾಬಾ ಗ್ರೂಪ್‌ನ ಫಿನ್‌ಟೆಕ್‌ ಕಂಪನಿ ಆ್ಯಂಟ್‌ ಫೈನಾನ್ಷಿಯಲ್ಸ್‌ನಿಂದ ಭಾರೀ ಮೊತ್ತದ ಬಂಡವಾಳ ಪಡೆದುಕೊಂಡಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಓದುವಿಕೆ ಇಲ್ಲದೆ ಸಮಾಜ ಪತನದ ಹಾದಿ ಹಿಡಿದಿದೆ: ಜಿ.ಎಸ್. ನಟೇಶ್

Upayuktha

ಸಾಮಾಜಿಕ ಅಂತರವೆಂದರೆ ಮಾನವೀಯತೆಯ ಅಂತರವಲ್ಲ, ಸಂಘಟಿತ ಹೋರಾಟದಿಂದ ಕೊರೊನಾ ತೊಲಗಿಸೋಣ: ಪ್ರಧಾನಿ ಮೋದಿ

Upayuktha

ಕೊರೊನಾ ಸಂಕಟ: ಮುಂದಿನ ಐದು ತಿಂಗಳ ಕಾಲ ಕೇರಳ ಸರಕಾರಿ ನೌಕರರ ಮಾಸಿಕ ವೇತನದಲ್ಲಿ 6 ದಿನಗಳ ಸಂಬಳ ಕಡಿತ

Upayuktha

Leave a Comment