ಗ್ರಾಮಾಂತರ ಸ್ಥಳೀಯ

ಡಿ.14,15: ಉಡುಪಿ ಆರೂರಿನಲ್ಲಿ ಗವ್ಯ ಉತ್ಪಾದನಾ ತರಬೇತಿ ಶಿಬಿರ

ಪ್ರಾತಿನಿಧಿಕ ಚಿತ್ರ

ಉಡುಪಿ: ಪುಣ್ಯಕೋಟಿ ಗೋ ಸೇವಾ ಕೇಂದ್ರ ಆರೂರು ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘ ಗೋ ಸೇವಾ ವಿಭಾಗ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಗವ್ಯ ಉತ್ಪಾದನಾ ತರಬೇತಿ ಮತ್ತು ಸ್ವಯಂವೈದ್ಯ ತರಬೇತಿ ಶಿಬಿರ ಡಿಸೆಂಬರ್ 14 ಮತ್ತು 15ರಂದು ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ನಡೆಯಲಿದೆ.

ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಭಕ್ತಿಭೂಷಣ್‌ ಜಿ, ಪುಣ್ಯಕೋಟಿ ಗೋಸೇವಾ ಕೇಂದ್ರ ಆರೂರು ಇವರು ಪಾಲ್ಗೊಳ್ಳಲಿದ್ದಾರೆ.

ತರಬೇತಿಯ ವಿಷಯಗಳು:
1 . ಧೂಪ ಬತ್ತಿ.
2. ಸೊಳ್ಳೆ ಬತ್ತಿ
3. ಗೋಫಿನೈಲ್
4.ಗೋ ಸಾಬೂನು1,2,3
5.ನೋವಿಎಣ್ಣೆ
6. ಕೇಶ ಲಾವಣ್ಯ
7. ತುಳಸಿ ಅರ್ಕ
8. ಅಮೃತ ಅರ್ಕ
9. ದಂತಮಂಜನ
10. ಗೋಮಯ ಖಂಡ
11. ಸ್ನಾನ ಚೂರ್ಣ
ಹಾಗೂ ಅಭ್ಯರ್ಥಿಗಳ ವಿಶೇಷ ಆಸಕ್ತಿಯ ವಿಷಯಗಳನ್ನು ಹೇಳಿಕೊಡಲಾಗುವುದು.

ಆಸಕ್ತರು ನಿಗದಿತ ಶುಲ್ಕ ಪಾವತಿಸಿ ಹೆಸರು ನೋಂದಾಯಿಸಿಕೊಳ್ಳಬಹುದು. ಅನ್ನ ಊಟ, ಸರಳ ವಸತಿ, ಗೋಶಾಲಾ ವಾತಾವರಣ, ಗೋಸೇವೆ ಜೊತೆಗೆ ತರಬೇತಿ ನಡೆಯಲಿದೆ. ಗವ್ಯ ಉತ್ಪನ್ನಗಳ ಮಾರಾಟ ವ್ಯವಸ್ಥೆಯೂ ಇದೆ. ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕ ವಸತಿ ವ್ಯವಸ್ಥೆ ಇದೆ ಎಂದು ಪ್ರಕಟಣೆ ತಿಳಿಸಿದೆ.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ 8218580220, 9448529639.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಬಿಜೆಪಿ ಮೇಕೇರಿ ಬೂತ್‌ ವತಿಯಿಂದ 71ನೇ ಗಣರಾಜ್ಯೋತ್ಸವ ಆಚರಣೆ

Upayuktha

ಪ್ರತಿಭೆಗಳ ಅನಾವರಣಕ್ಕೆ ಕಾಲೇಜು ವೇದಿಕೆ: ಲೆ. ಅತುಲ್ ಶೆಣೈ

Upayuktha

ವೇದಮಂತ್ರಗಳ ಸಂಕಲನ ‘ಶ್ರುತಿಪ್ರಸೂನಮ್’: ಎಡನೀರು ಶ್ರೀಗಳಿಂದ ಬಿಡುಗಡೆ

Upayuktha